• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ: ಹೆಚ್‌.ಡಿ.ಕುಮಾರಸ್ವಾಮಿ..!

Any Mind by Any Mind
April 30, 2023
in Uncategorized
0
ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ: ಹೆಚ್‌.ಡಿ.ಕುಮಾರಸ್ವಾಮಿ..!
Share on WhatsAppShare on FacebookShare on Telegram

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election) ದಿನಗಣನೆ ಶುರುವಾಗಿದೆ. ಚುನಾವಣೆ(election) ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD kumaraswamy) ಆದಿ ಚುಂಚನಗಿರಿಗೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು ಮಾತನಾಡಿದ ಅವರು, ʻಚುಂಚನಗಿರಿ ಸಮಾಜದ ಧಾರ್ಮಿಕ ಕ್ಷೇತ್ರವಾಗಿದೆ. ನಮ್ಮ ಕುಟುಂಬಗಳ ರಕ್ಷಕ ಕಾಲಭೈರವನ ದರ್ಶನ ಪಡೆದಿದ್ದೇನೆ. ದೇವರ ಅನುಗ್ರಹ ಪಡೆಯಲು ಇಂದು ಚುಂಚನಗಿರಿಗೆ ಭೇಟಿ ಕೊಟ್ಟೆ. ಅಮಾವಾಸ್ಯೆ ದಿನ ಬರಲು ಆಗಿರಲಿಲ್ಲ. ಚುನಾವಣೆ ಮತದಾನಕ್ಕಿಂತ ಮುಂದೆ ಬರಬೇಕೆಂಬ ಅಪೇಕ್ಷೆ ಇತ್ತು. ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಆ ಹಿನ್ನೆಲೆಯಲ್ಲಿ ಇಂದು ದರ್ಶನ ಪಡೆದು ದೇವರ ಅನುಗ್ರಹ, ಶಕ್ತಿ ಪಡೆಯಲು ವಿಶೇಷ ಪೂಜೆ, ಮುಂದಿನ 10 ದಿನಗಳ ಕಾಲದ ಹೋರಾಟಕ್ಕೆ ಪ್ರಾರ್ಥನೆ ಸಲ್ಲಿಸಿದ್ದೇನೆ. ನಾಡಿನ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಲು ಸ್ಪಷ್ಟ ಬಹುಮತ ಸರ್ಕಾರ ತರಲು ಕಾಲಭೈರವನ ಅನುಗ್ರಹ ಬೇಡಿದ್ದೇನೆ ಅಂತ ಹೇಳಿದ್ರು. ಬಳಿಕ ಮಾತ್ನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯಾದ್ಯಂತ ದಾಳಿ ಮಾಡ್ತಿದ್ದಾರೆ. ಬಿಜೆಪಿಯ(BJP) ಪ್ರಧಾನಿ ಮೋದಿ, ಗೃಹ ಸಚಿವ, ರಕ್ಷಣಾ ಸಚಿವ, ರಾಷ್ಟ್ರೀಯ  ಅಧ್ಯಕ್ಷರು, ಸೇರಿ ಹಲವು ಮಂತ್ರಿಗಳು ಟಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಉತ್ತರ ಭಾರತದ ಹಲವು ಮುಖಂಡರು ದೊಡ್ಡ ಮಟ್ಟದಲ್ಲಿ ಚುನಾವಣಾ(election) ಪ್ರಚಾರ ಮಾಡ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿಲ್ಲ. ಪ್ರಧಾನಿಗೆ ಕಾಂಗ್ರೆಸ್ ನವರು 91 ಬಾರಿ ಟೀಕೆ ಮಾಡಿದ್ದಾರೆ ಅಂತ ಅವರ ಭಾಷಣದ ಮುಖ್ಯ ಸಾರಾಂಶ ಇಟ್ಟಿಕೊಂಡು ಮಾತನಾಡಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ನವರು ವಿಷ ಸರ್ಪ, ವಿಷಕನ್ಯೆ, ಬಗ್ಗೆ ಚರ್ಚೆ ಮಾಡ್ತಾರೆ‌. ಇದು ಚುನಾವಣೆಯ ಚರ್ಚೆ ಮಾಡುವ ವಸ್ತುನಾ? ಕನ್ನಡಿಗರ ಮುಂದೆ ವಿಷ ಇಟ್ಟು ಚೆಲ್ಲಾಟವಾಡ್ತಿದ್ದಾರೆ. ಇದನ್ನು ಅತ್ಯಂತ ನೋವಿನಿಂದ ನಾನು ಹೇಳಬೇಕಾಗಿದೆ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ. ನೀರಾವರಿ ಸೌಲಭ್ಯಗಳ ಬಗ್ಗೆ ಯಾರು ಚರ್ಚೆ ಮಾಡ್ತಿಲ್ಲ. ಕೇಂದ್ರ ಸರ್ಕಾರದ ಮುಂದೆ ಇರುವ ರಾಜ್ಯದ ಬೇಡಿಕೆ ಬಗ್ಗೆ  ಪ್ರಧಾನಿ ಮಾತನಾಡಿಲ್ಲ. ಬೆಳಗಾವಿ ವಿವಾದಕ್ಕೆ ಕೇಂದ್ರ ಸರ್ಕಾರ ಮೌನವಾಗಿದೆ. ಜನರ ಬದುಕಿನ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ಇಲ್ಲ. ಕಾಂಗ್ರೆಸ್ ನವರು(congress) 2 ಸಾವಿರ ರೂ. ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ಟೀಕೆ ಮಾಡ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲʼ ಅಂತ ಹೇಳಿದ್ರು.

ADVERTISEMENT

ನಾಡಿನ ಸಮಸ್ಯೆಗಳಿಗೆ ಜೆಡಿಎಸ್ ಪರಿಹಾರ ನೀಡಲಿದೆ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ. ಅಶೋಕ್ ಜೆಡಿಎಸ್‌(JDS) ಲಾಟರಿ ನಿರೀಕ್ಷೆ ಮಾಡ್ತಾ ಇದೆ ಅಂತಾ ಹೇಳ್ತಾ ಇದ್ದರು. ನಾವು ಯಾವ ಲಾಟರಿ ನಿರೀಕ್ಷೆ ಮಾಡ್ತಾ ಇಲ್ಲ. ಜೆಡಿಎಸ್ 20 ಸೀಟ್ ಬರ್ತಾರೆ ಅಂತಾರೆ. ಬಿಜೆಪಿ ಎಷ್ಟು ಸೀಟ್ ಬರುತ್ತೆ ಎಂದು ನೋಡಿ ಕೊಳ್ಳಲಿ. ಮಂಡ್ಯ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳುವಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ರು?  ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ರೆ ಮಂಡ್ಯ ಬಜೆಟ್ ಅಂದ್ರು. ಈಗ ಬಿಜೆಪಿ ಮಂಡ್ಯಗೆ ಏನು ಮಾಡ್ತಾ ಇದೆ? ಅಂತ ಕುಮಾರಸ್ವಾಮಿ(HD kumaraswamy) ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಬಿಜೆಪಿಯವರು ಇಡಿ ಐಟಿಯನ್ನು ಆಕ್ಟೀವ್ ಮಾಡ್ತಾ ಇದಾರೆ ಎಂಬ ಲಕ್ಷ್ಮೀ ಹೆಬ್ಬಾಳ್ಕಾರ್(lakshmi hebbalkar) ಹೇಳಿಕೆ ವಿಚಾರವಾಗಿ ಮಾತ್ನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಎಲ್ಲಾ ಪಕ್ಷದಲ್ಲೂ ಒಂದೊಂದು ಮೋರ್ಚಾ ಇಟ್ಟುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಇಡಿ, ಐಟಿ ಮೋರ್ಚಾ ಎಂದು ಇಟ್ಟುಕೊಂಡಿದ್ದಾರೆ. ಆ ಮೋರ್ಚಾಗಳನ್ನು ಚುನಾಚಣೆಯ ಸಂದರ್ಭದಲ್ಲಿ ಬಿಡ್ತಾ ಇದ್ದಾರೆ. ಅವುಗಳನ್ನು ಈಗ ಆಕ್ಟೀವ್ ಮಾಡ್ತಾ ಇದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವುದು ಸರಿ ಇದೆ ಅಂತ ಹೇಳಿದ್ರು. ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ(narendra modi) ಬರುವ ವಿಚಾರವಾಗಿ ಮಾತ್ನಾಡಿದ ಕುಮಾರಸ್ವಾಮಿ,  ಏನು ಸಮಸ್ಯೆ ಇಲ್ಲ. ಅವರು ಬಂದರೆ ನಮಗೆ ಯಾವ ಆತಂಕ ಇಲ್ಲ. ಬರಲಿ ಬಂದು ಹೋಗಲಿ ಅಂತ ಹೇಳಿದ್ರು. ಇನ್ನು  ಸುಮಲತಾ ಅಂಬರೀಶ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ, ಅವರು ಮಾಹನ್ ನಾಯಕಿ, ಅವರು ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರು ಅವರ ಬಗ್ಗೆ ನಾವು ಮಾತನಾಡಲು ಆಗಲ್ಲ. ನಾವು ಚಿಕ್ಕವರು‌ ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ಸಿಎಂ ಆದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇವೆ. ಲಾಟರಿ, ಸಾರಾಯಿ ಎಲ್ಲವನ್ನು ನಿಷೇಧ ಮಾಡಿದ್ದೆ ನಾನು. ಜನ ಎಲ್ಲಾ ಮಾತಿಗೂ ತೀರ್ಪು ಕೊಡ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

Tags: #[pratidhvanidigital#bjp#congress#election2023#hdkumaraswamy#jds#karnataka#karnatakaassemblyelection#pratidhvani#pratidhvaninews#statement
Previous Post

ಸೋಮಣ್ಣ ವಿರುದ್ಧ FIR:‌ ಭ್ರಷ್ಟಾಚಾರದ ಬಗ್ಗೆ ನಿಗಾ ಇರಿಸುವಂತೆ ಕರ್ನಾಟಕ CEOಗೆ ಚುನಾವಣಾ ಆಯೋಗ ಎಚ್ಚರಿಕೆ

Next Post

ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ

Related Posts

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು
Uncategorized

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

by ಪ್ರತಿಧ್ವನಿ
April 13, 2026
0

ಧಾರವಾಡ ನಗರದ ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣವನ್ನು ಉಪನಗರ ಠಾಣೆ ಪೊಲೀಸರು ಶೀಘ್ರವೇ ಭೇದಿಸಿದ್ದಾರೆ. ಕೊಲೆ...

Read moreDetails
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

April 9, 2026
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
Next Post
ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ

ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada