ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ (Heart attack) ನಿಂದ ಸರಣಿ ಮುಂದುವರೆದಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕೇಂದ್ರದ ಆರೋಗ್ಯ ಇಲಾಖೆಯಿಂದ (Central health department) ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಈ ಪ್ರಕಾರವಾಗಿ ದೇಶದಲ್ಲಿ ಕೊರೊನಾ ವ್ಯಾಕ್ಸಿನ್‌ಗೂ (Covid vaccine) ಈ ಸರಣಿ ಸಾವುಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ಈ ಕುರಿತು ಐಸಿಎಂಆರ್ ಹಾಗೂ ಎನ್‌ಸಿಡಿಸಿ ಅಧ್ಯಯನ ನಡೆಸಿದ್ದು, ಈ ಸಂಶೋಧನೆಯಲ್ಲಿ ಈ ಅಂಶ ದೃಢಪಟ್ಟಿದ್ದೆ. ಈ ಪ್ರಕಾರವಾಗಿ ಕೋವಿಡ್ ವ್ಯಾಕ್ಸಿನ್ ನಿಂದ ಸಡನ್ ಸಾವುಗಳು ಹೆಚ್ಚಾಗಿಲ್ಲ ಎಂದು ದೃಢಪಡಿಸಿದೆ. ಈ ಕುರಿತು ದೇಶದಲ್ಲಿನ ಸಡನ್ ಸಾವುಗಳ ಬಗ್ಗೆ ವಿವಿಧ ಏಜೆನ್ಸಿಗಳು ಈಗಾಗಲೇ ತನಿಖೆ ನಡೆಸಿವೆ.

ಇವುಗಳಲ್ಲಿ ಕೋವಿಡ್ ವ್ಯಾಕ್ಸಿನ್ ಗೂ ಮತ್ತು ಈ ಧಿಡೀರ್ ಹೃದಯ ಸ್ತಂಭನದಿಂದ ಸಂಭವಿಸುತ್ತಿರುವ ಸಾವುಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ದೃಢಪಟ್ಟಿದೆ. ಕಾರ್ಡಿಯಾಕ್ ಸಾವುಗಳಿಗೆ ಜೆನೆಟಿಕ್ಸ್ , ಲೈಫ್ ಸ್ಟೈಲ್,ಹದಗೆಟ್ಟ ಆರೋಗ್ಯ ಸ್ಥಿತಿ, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ಕಾರಣ ಎನ್ನಲಾಗಿದೆ.

ಇನ್ನು ಭಾರತದಲ್ಲಿ ನೀಡಲಾದ ಕೋವಿಡ್ ವ್ಯಾಕ್ಸಿನ್ ಸೇಫ್ ಮತ್ತು ಪರಿಣಾಮಕಾರಿ ಎಂಬುದು ಐಸಿಎಆರ್ ಅಧ್ಯಯನದಿಂದ ದೃಢಪಡಿಸಿದೆ. ಹೀಗಾಗಿ ದೇಶದಲ್ಲಿ ಸಡನ್ ಸಾವುಗಳಿಗೆ ಕೋವಿಡ್ ವ್ಯಾಕ್ಸಿನ್ ಕಾರಣ ಎಂಬುದು ಸುಳ್ಳು, ತಪ್ಪು ದಾರಿಗೆಳೆಯುವಂಥದ್ದು.ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಕೇಂದ್ರದ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.






