ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಈ ಸಮಯದಲ್ಲಿ ಕುಂಭ ಮೇಳಕ್ಕೆ ಅವಕಾಶ ನೀಡಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದೇ ವಿಷಯದ ಬಗ್ಗೆ ರಾಮ್ ಗೋಪಾಲ್ ವರ್ಮಾ 13ನೇ ತಾರೀಖಿನಿಂದ ಸರಣಿ ಟ್ವೀಟ್ ಮಾಡಿದ್ದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ ದೆಹಲಿಯ ‘ಜಮಾತ್’ ಕಾರ್ಯಕ್ರಮ ಕೊರೊನಾ ಹಬ್ಬಿಸುವುದರಲ್ಲಿ ಕೇವಲ ಕಿರುಚಿತ್ರವಾಗಿತ್ತು ಆದರೆ ಇಂದಿನ ಕುಂಭ ಮೇಳ ಬಾಹುಬಲಿ ಮಾದರಿಯ ಸಿನಿಮಾ ಆಗಿದೆ. ಎಲ್ಲ ಹಿಂದುಗಳು ಮುಸ್ಲೀಮರ ಬಳಿ ಕ್ಷಮೆ ಕೇಳಬೇಕು. ಅವರು ಗೊತ್ತಿಲ್ಲದೆ ಜಮಾತ್ ಮಾಡಿದ್ದರು, ಆದರೆ ನಾವು ಗೊತ್ತಿದ್ದೂ ಸಹ ಮಾಡಿದ್ದೇವೆ (ಕುಂಭ ಮೇಳ)’ ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.
ಲಕ್ಷಾಂತರ ಜನ ಸೇರಿರುವ ಕುಂಭ ಮೇಳದ ಈಗಿನ ಚಿತ್ರ ಹಾಗೂ ಕಳೆದ ವರ್ಷದ ಜಮಾತ್‌ನ ಚಿತ್ರಗಳನ್ನು ಒಟ್ಟಿಗೆ ಪ್ರಕಟಿಸಿರುವ ರಾಮ್ ಗೋಪಾಲ್ ವರ್ಮಾ, “ಅಂತರಿಕ್ಷಕ್ಕೆ ಅಂತ್ಯ ಇದೆಯೊ ಇಲ್ಲವೊ ಗೊತ್ತಿಲ್ಲ ಆದರೆ ಮೂರ್ಖತನಕ್ಕೆ ಖಂಡಿತ ಇಲ್ಲ” ಎಂಬ ಆಲ್ಬರ್ಟ್ ಐನ್‌ಸ್ಟೈನ್ ಅವರ ಹೇಳಿಕೆಯನ್ನು ಕೋಟ್ ಮಾಡಿ ಟೀಕಿಸಿದ್ದಾರೆ.
ನೀವು ನೋಡುತ್ತಿರುವುದು ಕುಂಭ ಮೇಳ ಅಲ್ಲ ಆದರೆ ಅದು ಕೊರೋನಾ ಅಟೊಮ್ ಬಾಂಬ್ ಆಗಿದೆ..ಈ ವೈರಲ್ ಸ್ಪೋಟಕ್ಕೆ ಯಾರು ಜವಾಬ್ದಾರರಾಗಿರುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಗುಡ್ ಬೈ ಇಂಡಿಯಾ ವೆಲ್ ಕಮ್ ಕೊರೊನಾ ಎಂದು ಅವರು ಬರೆದುಕೊಂಡಿದ್ದಾರೆ.
13ನೇ ತಾರೀಖಿನಿಂದು ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮ ನೆನ್ನೆಯೂ ಕೂಡ ಕೊರೊನ ನಿಯಮ ಉಲ್ಲಂಘನೆ ಬಗ್ಗೆ ಅವರ ಸರಣಿ ಟ್ವೀಟ್ ವಾರ್ ಮುಂದುವರೆದಿದ್ದು, ಅಭಿನಂದನೆಗಳು ಇಂಡಿಯಾ “ಬ್ರೇಕ್ ದ ಚೈನ್” ಎಂದು ಲಾಕ್‌ಡೌನ್‌ಗೆ ಈಗ ಹೊಸ ಹೆಸರು ಸಿಕ್ಕಿದೆ, ವಾವ್. ಎಲ್ಲರನ್ನು ನಾಮಕರಣ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು Statuory warning: ಕುಂಭಮೇಳ ಹಿಂದಿರುಗಿದವರಿಗೆ ಮಾಸ್ಕ್ ದರಿಸಿಲ್ಲ ಏಕೆಂದರೆ ಅವರು ಈಗಾಗಲೇ ಗಂಗಾ ನದಿಯಲ್ಲಿ ತಮ್ಮ ವೈರಸ್ ಅನ್ನು ತೊಳೆದಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಸರ್ಕಾರದ ಪ್ರಕಾರ, 31 ಲಕ್ಷ ಸೇರಿದ ಕುಂಭ ಮೇಳದಲ್ಲಿ ಕೇವಲ 26 ಮಂದಿ ಕೊರೊನ ಪಾಸಿಟಿವ್ ಬಂದಿದೆ. ಆದರು ಯಾವುದೇ ಸಮಸ್ಯೆ ಇಲ್ಲ. ಬನ್ನಿ ಎಲ್ಲಾ ಪಾರ್ಟಿ ಮಾಡೊಣ ಅನ್ನುವ ಮೂಲಕ ನಿಯಮಾವಳಿಯ ಉಲ್ಲಂಘನೆಯನ್ನು ಟೀಕಿಸಿದ್ದಾರೆ.