ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷೆಯ ಯೋಜನೆಯಾದ ಮಹಿಳೆಯರ ಉಚಿತ ಪ್ರಯಾಣಿಕ್ಕಾಗಿ ಜಾರಿಗೆ ತರಲಾಗಿರುವ ಶಕ್ತಿ ಯೋಜನೆಗೆ ಯಾವುದೇ ರೀತಿಯಾದಂತಹ ನಿಯಮಾವಳಿಗಳು ಇಲ್ಲ ಎಂಬ ಹೇಳಿಕೆಯನ್ನ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೀಡಿದ್ದಾರೆ. ಈ ಹಿಂದೆ ಉಚಿತ ಪ್ರಯಾಣಕ್ಕಾಗಿ ಬಯಸುವ ಮಹಿಳೆಯರು ಬಿಪಿಎಲ್ ಕಾರ್ಡುಗಳನ್ನು ಹೊಂದಿರಬೇಕು ಅಂತ ಹೇಳಲಾಗಿತ್ತು ಆದರೆ ಈಗ ಈ ಗೊಂದಲಕ್ಕೆ ಸಚಿವ ರಾಮಲಿಂಗ ರೆಡ್ಡಿ ತೆರೆ ಎಳೆದಿದ್ದಾರೆ.
ಹಿಂದಿನಿಂದ ರಾಜ್ಯದ್ಯಂತ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರಲಿದೆ, ಉಚಿತ ಪ್ರಯಾಣ ಮಾಡುವ ಮಹಿಳೆಯರು ಬಿಪಿಎಲ್ ಕಾರ್ಡಿನ ದಿನದಲ್ಲಿ ಬರಬೇಕು ಅಥವಾ ಎಪಿಎಲ್ ಕಾರ್ಡಿನ ಅಧೀನದಲ್ಲಿ ಬರಬೇಕು ಎಂಬ ಯಾವ ನಿಯಮವೂ ಇಲ್ಲ, ಯಾವುದಾದರೂ ಐಡಿ ತೋರಿಸಿ ಮಹಿಳೆಯರು ಪ್ರಯಾಣವನ್ನ ಮಾಡಬಹುದಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿಕೆಯನ್ನ ನೀಡಿದ್ದಾರೆ
ಇನ್ನು ಸ್ಮಾರ್ಟ್ ಕಾರ್ಡ್ ಕುರಿತು ಮಾತನಾಡಿದ್ದ ಅವರು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಎಲ್ಲಾ ಮಹಿಳೆಯರಿಗೂ 3 ತಿಂಗಳ ಕಾಲಾವಕಾಶವಿದೆ. . ಶೇ.90 ಕ್ಕಿಂತ ಹೆಚ್ಚು ಬಸ್ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು ಸಮಾರಂಭದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಬೆಳೆಸುವ ಮಹಿಳೆಯರು ಸಾಮಾನ್ಯ ಸಾರಿಗೆ ಬಸ್ ಗಳು ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬಹುದಾಗಿದೆ ಆದರೆ ವೋಲ್ವೋ, ಎಸಿ, ಸ್ಲೀಪರ್ ಕೋಚ್ ಬಸ್ಗಳಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಖರೀದಿಸುವುದು ಕಡ್ಡಾಯವಾಗಿದೆ