ಥರ್ಮಲ್ ಪವರ್ ಪ್ಲಾಂಟ್ ನಲ್ಲಿ 21.55 ಮಿಲಿಯನ್ ಟನ್ ಸರಾಸರಿ ನಮ್ಮಲ್ಲಿ ವಿದ್ಯುತ್ ಸ್ಟಾಕ್ ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಸ್ಟಾಕ್ ಇದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಈ ತಿಂಗಳಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಆರ್ಥಿಕತೆ ಉತ್ತಮವಾಗಿದ್ದು ಸಹ ಇದಕ್ಕೊಂದು ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ಕಲ್ಲಿದ್ದಲು ಅಭಾವ ವಿಚಾರವಾಗಿ ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಈ ಬಾರಿ ಭಯಂಕರ ಬಿಸಿಲು ಬಂದಿದ್ದು ಇದಕ್ಕೊಂದು ಕಾರಣ. ಆದರೆ ಇನ್ನೇನು 10 ದಿನಕ್ಕೆ ಕತ್ತಲೆ ಆವರಿಸುತ್ತೆ ಅನ್ನೋದನ್ನ ಕೆಲವರು ಬಿಂಬಿಸುತ್ತಿದ್ದಾರೆ. ಅದು ಸರಿಯಲ್ಲ. ನಾವು ಪ್ರತಿ ದಿನ 1.7ಮಿಲಿಯನ್ ಟನ್ ಕಲ್ಲಿದ್ದಲು ಸಪ್ಪೆ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿ ಬಂದಿದ್ದರಿಂದ ಸಾಗಣೆ ಮಾಡಲು ರೈಲ್ವೆ ಇಲಾಖೆ ಹಲವು ಕ್ರಮ ಕೈಗೊಂಡಿದೆ ಎಂದರು.
ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ನಿತ್ಯವೂ ಸಹ ನಾವು ವಿದ್ಯುತ್ ಸಪ್ಪೆ ಮಾಡುತ್ತಿದ್ದೇವೆ. ಎಷ್ಟು ಖಾಲಿಯಾಗುತ್ತದೆಯೋ ಅಷ್ಟು ನಾವು ತುಂಬುತ್ತಿದ್ದೇವೆ. ಈಗಾಗಲೇ ಬೇಕಾದಷ್ಟು ವಿದ್ಯುತ್ ಸ್ಟಾಕ್ ಇದೆ. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಸ್ಐ ನೇಮಕಾತಿ ರದ್ದು ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಆ ಬಗ್ಗೆ ನಿರ್ಧಾರ ಕೈಗೊಂಡಿದೆ. ಟೆಕ್ನಾಲಜಿ ಬಳಸಿ ಅಪರಾಧ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದೆಯೂ ಈ ರೀತಿ ಆಗದಂತೆ ಸಿಎಂ ಗಮನ ಹರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲವೊಮ್ಮೆ ಈ ರೀತಿಯ ಸಂಗತಿಗಳು ಅನಿವಾರ್ಯವಾಗಿ ಆಗುತ್ತವೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.