ಲೈಂಗಿಕ ದೌರ್ಜನ್ಯ (sexual harassment) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್ ಕೇಸ್ (Kidnap case) ಪ್ರಕರಣದಲ್ಲಿ ಆರೋಪಿಯಾಗಿದ್ದ ರೇವಣ್ಣ(Revanna ) ಬಂಧನದ ಹಿನ್ನೆಲೆಯಲ್ಲಿ ,ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ತಮ್ಮ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆರಂಭದಲ್ಲಿ ಕುಮಾರಣ್ಣ (Kumaraswamy) ಏನು ಹೇಳಿದ್ರು ,ಹಾಗೆ ಆಗಲಿದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ರೇವಣ್ಣ ಬಂಧನಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಕಾನೂನುಂಟು (law & court) ನ್ಯಾಯಾಲಯವುಂಟು ನಾವು ಮಧ್ಯಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ . ಆ ಮೂಲಕ ರೇವಣ್ಣ ಬಂಧನದ ವಿಚಾರದಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂಬಂತೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ಆರಂಭದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಚ್ ಡಿ ಕುಮಾರಸ್ವಾಮಿ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು .ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂಬ ಹೇಳಿಕೆ ಕೊಟ್ಟಿದ್ದರು . ಇದೇ ಹೇಳಿಕೆಯನ್ನ ಪರೋಕ್ಷವಾಗಿ ಡಿಕೆಶಿ ಇಂದು ನೆನಪಿಸಿದ್ದಾರೆ ಕುಮಾರಣ್ಣ ಏನು ಹೇಳಿದ್ರು ಹಾಗೆ ಆಗಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ.