ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರೇ ರಾಜಕೀಯವಾಗಿ ಪ್ರಾಬಲ್ಯವಾಗಿರುವ ಸಮುದಾಯ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕಾರಣಕ್ಕಾಗಿಯೇ ಜೆಡಿಎಸ್ ಕೋಟೆ ಛಿದ್ರವಾಗಿತ್ತು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲನ್ನಪ್ಪುವಂತಾಗಿತ್ತು. ಜೆಡಿಎಸ್ ಒಕ್ಕಲಿಗರ ಮತಗಳ ಮೇಲೆ ರಾಜಕಾರಣ ಮಾಡುತ್ತಿದೆ ಎನ್ನುವ ಆರೋಪವನ್ನು ಸುಳ್ಳು ಮಾಡಿತ್ತು ಒಕ್ಕಲಿಗರ ಕೋಟೆ. ಕಾಂಗ್ರೆಸ್ ಪರವಾಗಿ ಮತಚಲಾಯಿಸಿದ್ದ ಒಕ್ಕಲಿಗರು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಬೆಂಬಲಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿ, ರಾಜ್ಯದಲ್ಲಿ ಆಡಳಿತ ನಡೆಸುವಂತಾಯ್ತು.
ದೇವೇಗೌಡರನ್ನು ಒಮ್ಮೆ ಮುಖ್ಯಮಂತ್ರಿ ಮಾಡಿದ್ದೀರಿ, ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ, ನಾನು ಏನು ತಪ್ಪು ಮಾಡಿದ್ದೇನೆ..? ಎಂದು ಪ್ರಶ್ನೆ ಮಾಡಿದ್ದರು. ಅದರಲ್ಲೂ ಒಕ್ಕಲಿಗರ ಸಭೆ ಸಮಾರಂಭದಲ್ಲಿ ನಾನು ಏನು ತಪ್ಪು ಮಾಡಿದ್ದೇನೆ..? ನನಗೆ ಒಂದು ಅವಕಾಶ ಯಾಕೆ ಕೊಡಲ್ಲ ಎನ್ನುವ ಮೂಲಕ ಒಕ್ಕಲಿಗರು ಈ ಬಾರಿ ನಾನೇ ಮುಖ್ಯಮಂತ್ರಿ ಅನ್ನೋದನ್ನು ಬಿಂಬಿಸುತ್ತಾ ಸಾಗಿದರು. ಕನಕಪುರದಲ್ಲಿ ನಡೆದ ಸಭೆಯೊಂದರಲ್ಲಿ ಈ ಬಾರಿ ಪಕ್ಷ ಅಧಿಕಾರ ಬಂದರೆ ನಾನೇ ಮುಖ್ಯಮಂತ್ರಿ ಎಂದು ಸೂಚ್ಯವಾಗಿ ಹೇಳಿದ್ದರು. ಆ ಬಳಿಕ ಒಕ್ಕಲಿಗ ಜನಾಂಗ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎನ್ನುವ ಕಾರಣಕ್ಕೆ ಒಕ್ಕಲಿಗರು ಒಗ್ಗಟ್ಟು ಪ್ರದರ್ಶನ ಮಾಡಿದರು ಆದರೆ ಅದು ಹುಸಿಯಾಯ್ತು.
ಲೋಕಸಭಾ ಚುನಾವಣೆಯಲ್ಲಿ ಮತ್ತೆ ಒಕ್ಕಲಿಗರ ಕೋಟೆ ಭೇದಿಸಲು ನಾಯಕರ ನಡುವೆ ಜಟಾಪಟಿ ಶುರುವಾಗಿದೆ. ಡಿ.ಕೆ ಶಿವಕುಮಾರ್ ಹಾಗು ಕುಮಾರಸ್ವಾಮಿ ಒಕ್ಕಲಿಗ ಸಮುದಾಯನ ಅಗ್ರಗಣ್ಯ ನಾಯಕರಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರು ಯಾರನ್ನು ಮಣಿಸಿ ಯುದ್ಧ ಗೆಲ್ಲುತ್ತಾರೆ ಅನ್ನೋ ಕಾತುರತೆ ರಾಜಕೀಯ ವಿಶ್ಲೇಷಕರಲ್ಲೂ ಮನೆ ಮನೆ ಮಾಡಿದೆ. ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಜನರು ಮನ್ನಣೆ ಕೊಡುತ್ತಾರೆ ಅನ್ನೋ ನಂಬಿಕೆಯಲ್ಲಿದೆ. ಆದರೆ ಗ್ಯಾರಂಟಿ ಯೋಜನೆಗಳಿಂದ ಲಾಭವಿಲ್ಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡುವ ಯತ್ನದಲ್ಲಿ ಬಿಜೆಪಿ, ಜೆಡಿಎಸ್ ನಾಯಕರಿದ್ದಾರೆ. ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡಲಿದೆ.
ಕಾಂಗ್ರೆಸ್ ಒಕ್ಕಲಿಗರ ಕೋಟೆ ಭೇದಿಸಬಾರದು ಅನ್ನೋ ಕಾರಣಕ್ಕೇ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ನಾಯಕರು ಹೇಗಿದ್ದರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ ಎನ್ನುವ ನಂಬಿಕೆಯಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರದ ಬೆನ್ನೆಲುಬು ಮುರಿಯುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ನಾಯಕರದ್ದು. ಇನ್ನು ಇದು ದೇಶದ ಚುನಾವಣೆ ಆಗಿರುವ ಕಾರಣಕ್ಕೆ ಜನರು ಬಿಜೆಪಿ ಬೆಂಬಲಿಸ್ತಾರೆ, ಕಾಂಗ್ರೆಸ್ನಲ್ಲಿ ನಾಯಕತ್ವ ಡೋಲಾಯಮಾನ ಸ್ಥಿತಿಯಲ್ಲಿರುವುದು ಬಿಜೆಪಿ, ಜೆಡಿಎಸ್ ಪಾಲಿಗೆ ಅನುಕೂಲ ಆಗುವ ಸಾಧ್ಯತೆ ಹೆಚ್ಚಿದೆ. ಈ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಮಣಿಸಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದರೆ ಅನ್ನೋ ಭಯ ಕಾಂಗ್ರೆಸ್ ನಾಯಕತ್ವವನ್ನು ಕಾಡುತ್ತಿದೆ ಎನ್ನುವುದು ಸತ್ಯ.
ಕೃಷ್ಣಮಣಿ