ತುಮಕೂರು : ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಚರ್ಚೆಯ ನಡುವೆಯೇ ತುಮಕೂರಿನಲ್ಲಿ ಇದೀಗ ದಲಿತ ಸಿಎಂ ಕೂಗು ಹೆಚ್ಚಾಗಿ ಕೇಳಿ ಬರ್ತಿದೆ. ಡಾ, ಜಿ ಪರಮೇಶ್ವರ್ಗೆ ಈ ಬಾರಿ ಸಿಎಂ ಸ್ಥಾನ ನೀಡುವಂತೆ ತುಮಕೂರು ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಒತ್ತಾಯಿಸಿದ್ದಾರೆ .
ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ನಗರದ ಟೌನ್ ಹಾನ್ ವೃತ್ತದಲ್ಲಿ ಜಮಾಯಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ಮೇಯರ್ ಪ್ರಭಾವತಿ ಸೇರಿದಂತೆ ಕಾಂಗ್ರೆಸ್ ಕಾರ್ಪೋರೇಟರ್ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ .
ಪರಮೇಶ್ವರ್ ಭಾವಚಿತ್ರ ಹಿಡಿದು ಜೈಕಾರ ಕೂಗಿದ ನೂರಾರು ಕಾರ್ಯಕರ್ತರು ಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.