
ಮಂಡ್ಯ:ಸಿಹಿ ಸಕ್ಕರೆ ಉತ್ಪಾದಿಸುವ ಕಾರ್ಖಾನೆಯಿಂದ ಸ್ಥಳೀಯ ಜನರಿಗೆ ಕಹಿ.ಕೆ.ಆರ್.ಪೇಟೆ (KR Pete)ತಾಲೂಕಿನ ಮಾಕವಳ್ಳಿ ಬಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ (sugar factory) ಸ್ಥಳೀಯ ಜನರಿಗೆ ಬೂದಿ ಭಾಗ್ಯ.ಕಾರ್ಖಾನೆಯಿಂದ ಬರುವ ಹಾರುವ ಬೂದಿಗೆ ಕಾರ್ಖಾನೆ ಪಕ್ಕದ ಗ್ರಾಮಗಳು ತತ್ತರ.ಕಾರ್ಖಾನೆ ಪಕ್ಕದ ಕರೋಟಿ ಹಾಗೂ ಮಾಕವಳ್ಳಿ ಗ್ರಾಮದಲ್ಲಿ ಹಾರುವ ಬೂದಿಗೆ ಗ್ರಾಮಸ್ಥರು ಹೈರಾಣು.ಇತ್ತ ರೈತರ ಜಮೀನಿನಲ್ಲಿ ಕುಳಿತ ಹಾರುವ ಬೂದಿಗೆ ರೈತರ ಬೆಳೆ ನಾಶ.

ಅತ್ತ ಗ್ರಾಮದ ಮನೆಗಳಿಗೆ ಬರುವ ಹಾರುವ ಬೂದಿಯಿಂದ ಜನರಲ್ಲಿ ಆರೋಗ್ಯ ಏರುಪೇರು.ಹಾರುವ ಬೂದಿಗೆ ಕಲುಷಿತವಾಗ್ತಿದೆ ಜನ ಜಾನುವಾರುಗಳ ಜನ ಮೂಲ.ರೈತರ ಸಮಸ್ಯೆ ಕೇಳಿ ಕೃಷಿ ಅಧಿಕಾರಿಗಳಿಂದ ಜಮೀನಿನ ಬೆಳೆ ಪರಿಶೀಲನೆ.ಅಗತ್ಯ ಕ್ರಮ ಕೈಗೊಂಡು ಕಾರ್ಖಾನೆಯಿಂದ ಆಗ್ತಿರೋ ಸಮಸ್ಯೆ ತಪ್ಪಿಸುವಂತೆ ರೈತರ ಮನವಿ.ರೈತರ ಮನವಿಗೆ ಪೂರಕವಾಗಿ ಸ್ಪಂದಿಸುವ ಭರವಸೆ ಕೊಟ್ಟ ಕೃಷಿ ಅಧಿಕಾರಿಗಳು..