
ಮುಸ್ಲಿಂ ಸಮುದಾಯದವರೂ ಪಾಲ್ಗೊಳ್ಳುವಂಥ ಭಾವೈಕ್ಯ ಸಾರುವ ಚಕ್ಕಡಿ ಓಟದ ಸ್ಪರ್ಧೆ ಹೋಳಾ ಹಬ್ಬದಂದು ನಡೆಯಿತು.ಸಂಜೆ ಹೊತ್ತು ಚಿಕ್ಕ ಗಾಲಿಗಳಿಗೆ ಕಟ್ಟಿದ ನೊಗವನ್ನು ಎಳೆದುಕೊಂಡು ಜೋಡಿ ಎತ್ತುಗಳು ಓಡಿಸಲಾಯಿತು .

ಹೋಳಾ ಹಬ್ಬ ರೈತರ ಹಬ್ಬವಾಗಿದ್ದು ಕಾರಹುಣ್ಣಿಮೆಯಂತೆಯೇ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಎತ್ತುಗಳ ಪೂಜೆ ನೆರವೇರಿಸಿದರು. ಬೀದರ್ ಜಿಲ್ಲೆಯ ಅನೇಕ ಕಡೆ ಇದನ್ನು ಆಚರಿಸಲಾಗುತ್ತದೆ. ಔರಾದ ತಾಲೂಕಿನ ಚಟ್ನಾಳ ಗ್ರಾಮದಲ್ಲಿ ಕೂಡ ಈ ಹಬ್ಬ ಆಚರಿಸಲಾಯಿತು ಎತ್ತುಗಳ ಮೆರವಣಿಗೆ ಹಾಗೂ ಎತ್ತುಗಳ ಓಟ ಹಮ್ಮಿಕೊಳ್ಳಲಾಯಿತು.ಈ ಚಕ್ಕಡಿ ಓಟ ಹಬ್ಬದಲ್ಲಿ ಅನೇಕ ಗ್ರಾಮಸ್ಥರು ರೈತರು ಭಾಗವಹಿಸಿದರು