
ಬೀದರ್:ಮದುವೆ ಮತ್ತು ಕುಟುಂಬ ಸಾಮಾಜಿಕವಾಗಿ ಹೆಚ್ಚಿನ ಸಾಮಾಜಿಕ ಪ್ರಗತಿಯ ಹಂತವನ್ನು ಸೂಚಿಸುತ್ತದೆ. ಇದು ಭಾವನೆ ಮತ್ತು ಭಾವನೆ, ಸಾಮರಸ್ಯ ಮತ್ತು ಸಂಸ್ಕೃತಿಯ ಜಗತ್ತಿನಲ್ಲಿ ಮನುಷ್ಯನ ಪ್ರವೇಶವನ್ನು ಸೂಚಿಸುತ್ತದೆ.ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಎರಡು ಸುಂದರವಾಗಿರುತ್ತವೆ. ದಂಪತಿಗಳಿಬ್ಬರು ಚಿಕ್ಕ ಪುಟ್ಟ ವಿಚಾರಗಳಿಗೆ ಪೋಲಿಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ/ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜಿ ಸಂಧಾನ ಮಾಡಿಕೊಂಡ ದಂಪತಿಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸೀವಿಲ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಾಶ ಅರ್ಜುನ ಬನಸೊಡೆ ಸಲಹೆ ನೀಡಿದರು.

ಬೀದರ ತಾಲೂಕಿನ ಕುತ್ತಾಬಾದನ ಸುಮ್ಮಯ್ಯಾ ಗಂಡ ತಿಪ್ಪಣಾ ಬೀದರ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಸುಮಯ್ಯಾಳು ತನ್ನ ಗಂಡನಿಗೆ ಮತ್ತು ಅತ್ತೆಗೆ ವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಅತ್ತೆಯಾದ ಚಂದ್ರಮ್ಮ ರವರು ಮಹಿಳಾ ಪೋಲಿಸ ಠಾಣೆಗೆ ಹಾಜರಾಗಿ ದೂರನ್ನು ನೀಡಿದರು.
ಬೀದರನ ಹೌಸಿಂಗಬೋರ್ಡ ಕಾಲೋನಿಯ ಪಲ್ಲವಿ ಗಂಡ ಶಿಕಾರೇಶ್ವರ ಅವರೊಂದಿಗೆ ಮದುವೆ ಆಗಿದ್ದರು. ಶಿಕಾರೇಶ್ವರನು ಪಲ್ಲವಿಯನ್ನು ಸರಾಯಿ ಕುಡಿದು ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಪಲ್ಲವಿ ತನ್ನ ಗಂಡನ ಬಗ್ಗೆ ದೂರನ್ನು ಮಹಿಳಾ ಪೋಲಿಸ ಠಾಣೆಗೆ ಹಾಜರಾಗಿ ದೂರನ್ನು ನೀಡಿದರು.
ಮಹಿಳಾ ಪೋಲಿಸ ಠಾಣೆಯಿಂದ ರಾಜಿ ಸಂದಾನಕ್ಕಾಗಿ ಎರಡು ದಂಪತಿಗಳ ಅರ್ಜಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿರುತ್ತಾರೆ. ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಹಿರಿಯ ಸೀವಿಲ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎರಡು ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ, ಗಂಡನನ್ನು ಬುದ್ದಿಮಾತು ಹೇಳಿ ಒಂದಾಗುವುದು ಅತಿ ಮುಖ್ಯವಾಗಿರುತ್ತದೆ ಮತ್ತು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ಸೆಪ್ಟೆಂಬರ್.27 ರಂದು ದಂಪತಿಗಳಿಬ್ಬರನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಗಳನ್ನು ಒಂದು ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಇಬ್ಬರು ದಂಪತಿಗಳ ಸಂಬಂಧಿಕರು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿಗಳಾದ ಜಗಧೀಶ್ವರ ದೊರೆ, ಆಕಾಶ ಸಜ್ಜನ, ನಾಗರಾಜ, ಪ್ರೀತಿ, ಜೀವನ ಮತ್ತು ಯೋಹನ ಕಾಳೆ, ಈರಮ್ಮ ಇತರರು ಉಪಸ್ಥಿತರಿದ್ದರು.