ಜೀವನದಲ್ಲಿ ಏನು ಮಾಡಬೇಕು, ಏನು ಮಾಡಬಾರದು. ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ – ಇದು ಕೂಡ ಸುಲಭ.
ಪ್ರತಿಫಲ ಅಪೇಕ್ಷೆಯಿಂದ ಕೆಲಸ ಮಾಡಬೇಡ. ನಿನ್ನ ಕೆಲಸ ಏನು ಮಾಡುತ್ತಿಯೋ ಅದನ್ನು ಶ್ರದ್ದೆಯಿಂದ ಮಾಡು – ಇದು ಕೂಡ ಸುಲಭ.

ದೇವರ ಸೇವೆ, ದೇವರ ಪೂಜೆ, ದೇವರ ಸ್ತುತಿ ಅಂತ ನನ್ನೇ ಯಾವಾಗ್ಲೂ ಮಾಡೋದಲ್ಲ. ಮಾನವೀಯತೆ,ಅಬಲರಿಗೆ ನಿನ್ನ ಕೈಲಾದ ಸಹಾಯ ಹಸ್ತ ಚಾಚು. ನ್ಯಾಯದಿಂದ, ಧರ್ಮದಿಂದ ನಡೆ. ಅದೇ ನನ್ನನ್ನು ಪೂಜಿಸಿದಂತೆ, ನನ್ನ ಸೇವೆ ಮಾಡಿದಂತೆ. ನಿನ್ನ ಈ ಕೆಲಸಗಳೇ ನನ್ನನ್ನು ಸಂತೋಷಗೊಳಿಸುವುದು – ಇದು ಕೂಡ ಸುಲಭ.
ಧರ್ಮದಿಂದ ಇದ್ದವರಿಗೆ ಧರ್ಮವಾಗಿ ನಡೆದುಕೋ, ಅಧರ್ಮ ಮಾಡಿದವರನ್ನು ಧರ್ಮದ ದಾರಿಗೆ ತಾ. ಆಗಲೂ ದಾರಿಗೆ ಬರದಿದ್ದರೆ ಅಧರ್ಮವನ್ನು ಅಧರ್ಮ ದಿಂದಲೇ ಅಧರ್ಮಿಗಳ ದಮನ ಮಾಡು – ಇದು ಕೂಡ ಸುಲಭ.

ಎಷ್ಟೇ ತೊಂದರೆ ಇದ್ರೂ ಕೂಡ ನನ್ನನ್ನು ಕರೆ. ನಾನು ನಿನ್ನನ್ನು ನನ್ನ ಕಿರುಬೆರಳಿನಿಂದ ನಿನ್ನ ಎತ್ತಿ ರಕ್ಷಣೆ ಮಾಡುತ್ತೇನೆ – ಇದು ಕೂಡ ಸುಲಭ.
ನೀನು ಯಾವ್ದೇ ರೂಪದಲ್ಲಿ ಬೇಕಾದ್ರೂ ನನ್ನನ್ನು ಪೂಜಿಸು, ಕಲ್ಲಿನ ರೂಪ, ಗಿಡ, ಮರ, ಪ್ರಕೃತಿ ಹೀಗೆ ಇವುಗಳಲ್ಲಿ ಕೂಡ ನಾನು ಇರುತ್ತೇನೆ. ನಾನು ಪ್ರತಿ ಕಣ ಕಣದಲ್ಲೂ ಇದ್ದೇನೆ – ಇದು ಕೂಡ ಸುಲಭ.
ನೋಡಿ ಇದನ್ನು ಯಾರು ಬೇಕಾದ್ರೂ ಮಾಡುವಂತಹುದು. ಅಷ್ಟು ಸುಲಭವಾಗಿದೆ. ಆದ್ರೆ ಇದು ಪ್ರಪಂಚದಲ್ಲಿ ಎಷ್ಟು ಜನ ಮಾಡುತ್ತಾರೆ..??
ಉದಾಹರಣೆ :: ಪ್ರತಿದಿನ 8 ಲೋಟ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳ್ತಾರೆ. 8 ಲೋಟ ಬೇಡ, ಅಂತ, Atleast 3 ಲೋಟ ನೀರು..?? ಉಹೂಂ, ಇಲ್ಲ ಬಿಡಿ. ಇಷ್ಟು ಸುಲಭವೇ ಮನುಷ್ಯನಿಗೆ ಕಷ್ಟ ಆಗಿರೋದು. ಇದೇ ಮನುಷ್ಯನ Weakness..!!

ಆದ್ದರಿಂದ ಸತ್ತ ನಂತರ, ಆತ್ಮ, ಅದೂ, ಇದೂ ಅಂತ ಅವನು ದುಡಿಯುವಾಗ ಯಾವ್ದೂ ತಲೆಗೆ ಬರೋದೇ ಇಲ್ಲ. ಯಾರಾದ್ರೂ ನಮ್ಮ ತಲೆಗೆ ಹಾಕಿದ್ರು ಅಂದ್ಕೊಳಿ, ನಾವು ಅದನ್ನು ತಗೋಳಲ್ಲ. ನಮ್ಮ ಅಂತಿಮ ಗುರಿ ಹಣ ಸಂಪಾದನೆಯೇ ಅಂತಿಮವಾಗಿರುತ್ತದೆ.
ಸತ್ಯವಾಗಿ ಸರ್ವಸ್ವಕ್ಕೂ ಹಣ ಬೇಕೇಬೇಕು.ಅಂದ್ರೆ ಒಂದು ಮಗುವಿನ ಹುಟ್ಟಿನಿಂದ ಹಿಡಿದು , ಸತ್ತ 1 ವರ್ಷದ ತನಕವೂ ಹಣವೇ ಪ್ರಧಾನ ಆಗಿರುತ್ತೆ. ಪ್ರಧಾನ ಆಗಲೇಬೇಕು. ಇಲ್ಲಾ ಅಂದ್ರೆ ಬದುಕಿದ್ದಾಗಲೇ ಆತ್ಮ ಒದ್ದಾಡುತ್ತದೆ.ಈಗಿನ ಪ್ರಪಂಚದಲ್ಲಿ ಮಾತ್ರ ಹಣದ ಗುರಿ ಇರುತ್ತೆ ಅಂತ ಅಲ್ಲ, ಯಾವಾಗ್ಲೂ ಯಾವ್ದೇ ಯುಗದಲ್ಲೂ ಕೂಡ ಸಂಪತ್ತೇ ಪ್ರಧಾನವಾಗಿರುತ್ತದೆ.
ಇದೆಲ್ಲಾದರ ಜೊತೆಗೆ ಭಗವದ್ಗೀತೆಯ ಕೆಲವು ಸುಲಭವಾದ ಅಂಶಗಳನ್ನು ಅಳವಡಿಸಿಕೊಂಡರೆ ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ.ಹಣ ಸಂಪಾದನೆಯ ಗುರಿಯೂ ಇರ್ಬೇಕು.
ನವೀನ ಹೆಚ್ ಎ ಹನುಮಾನಹಳ್ಳಿ
ಅಂಕಣಕಾರರು ಲೇಖಕರು ಕೆ ಆರ್ ನಗರ