ನನಗೆ ಆತಂಕ ಬಂದಿರೋದು ಅವ್ರು ಮಂಡ್ಯಕ್ಕೆ ಬಂದು ಅಗುತುಕೊಳ್ತಾರೆ ಅಂತ.

ಮಂಡ್ಯದಲ್ಲಿ ಇರೋ ನಮ್ಮವು ನರಸತ್ತೊಗವೆ ಅಂತ ಆತಂಕ. ಮಂಡ್ಯದವ್ರನ್ನ ನರ ಸತ್ತವ್ರು ಅನ್ನೋ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟ ಎಲ್ ಆರ್ ಶಿವರಾಮೇಗೌಡ.
ಮಂಡ್ಯದ ಮಾಜಿ ಎಂಪಿ ಎಲ್.ಆರ್.ಎಸ್. ಮಂಡ್ಯದಲ್ಲಿ ಇರೋ ಮುಖಂಡರಿಗೆ ಪ್ರಾರ್ಥನೆ ಮಾಡ್ತಿನಿ ಎಚ್ಚೆತ್ತುಕೊಳ್ಳಿ.

ನಿಮ್ಮಲ್ಲೂ ಗಂಡಸರಿದ್ದಾರೆ ಹಾಸನದವರನ್ನ ಕರೆತಂದು ಗಂಡಸರು ಮಾಡೋ ಅಗತ್ಯ ಇಲ್ಲಾ. MLA ಎಲೆಕ್ಷನ್ ನಲ್ಲಿ ಕುಮಾರಸ್ವಾಮಿ ಗಾಡಿ ನಿಂತೋಗಿತ್ತು. ಅದ್ಯಾವ ದೇವ್ರು ಪೂಜೆ ಮಾಡಿದ್ರೊ ಗೊತ್ತಿಲ್ಲ ಬಿಜೆಪಿ ಸೇರ್ಕೊಂಡು ಮಂಡ್ಯದಲ್ಲಿ ಗೆದ್ಬುಟ್ರು. ಪಾಪ ಕುಮಾರಣ್ಣನ ಕಂಪನಿ ಮುಳುಗ್ತಿದೆ ಅಂತ ಮಂಡ್ಯ ಜನನೂ ಓಟು ಹಾಕಿದ್ರು. ನರೇಂದ್ರ ಮೋದಿಯವ್ರು ಕೂಡ ದೊಡ್ಡ ಪೋಸ್ಟ್ ಕೊಟ್ಟಿದ್ದಾರೆ. ಬೆಳಗ್ಗೆದ್ರೆ ಕುಮಾರಸ್ವಾಮಿ ನ್ಯಾಷನಲ್ ನ್ಯೂಸ್ ನಲ್ಲಿ ಬರಬೇಕು. ನಮ್ಮವು ಕುಮಾರಸ್ವಾಮಿ ಕೆಲಸ ಕೊಡಿಸ್ತಾನೆ ಅಂತ ಕಾಯ್ತಾವೆ ಅವು ಹಿಂಗೆ ಕಾಯ್ತನೇ ಕುಂತಿರ್ಬೇಕು. ಹೋಗಿ ಬಂದು ಮೂಗಿತಕ್ ಬಂದ ಅನ್ನೋ ಹಾಗೆ ಕುಮಾರಸ್ವಾಮಿ ವಾರದಲ್ಲಿ ಮೂರು ದಿನ ಮಂಡ್ಯ, ಬೆಂಗಳೂರು ಅಂತ ಕುಂತವ್ರೆ.
ಮೂಡ ಕೇಸು ಅಥವಾ ಡಿಕೆ ಶಿವಕುಮಾರ್ ಪುಕ್ಕ ಕೆರೆಯೋದು ಇಷ್ಟು ಬಿಟ್ರೆ ಬೇರೇನೂ ಮಾಡ್ತಿಲ್ಲ. ಬೇರೆ ದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಕಂಪನಿಗಳನ್ನ ಕರೆತನ್ನಿ ನಿಮಗೂ ವ್ಯವಹಾರ ಆಗತ್ತೆ ಅದರಲ್ಲಿ ಚೆನ್ನಾಗಿ ಪಳಗಿದಿರಿ. ಕುಮಾರಸ್ವಾಮಿ 2 ಬಾರಿ ಲಾಟ್ರಿ ಸಿಎಂ ಆಗಿದ್ದೀರಿ. ಮಂಡ್ಯ, ಕರ್ನಾಟಕದ ಜನ ಮಂಗಮುಂಡೆತವು ಆಕಡೆ ಈಕಡೆ ಓಟ್ ಮಾಡಿದ್ರೆ ಏನಾದರೂ ಬ್ಯಾಲೆನ್ಸ್ ಮಾಡಿ ಮತ್ತೆ ಸಿಎಂ ಆಗಬಹುದು ಅಂತ ಕುಮಾರಸ್ವಾಮಿ ಕನಸು ಕಾಣ್ತಾವ್ರೆ. ಕುಮಾರಸ್ವಾಮಿ ಇನ್ನೆರಡು ತಿಂಗಳಲ್ಲಿ ಮಂತ್ರಿಯಾಗಿ ಉಳಿಯಲ್ಲ ಅಂತ ಯಾರೋ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ನೀವ್ಯಾಕೆ ಬೆಂಗಳೂರಿಗೆ ಬರ್ತಿರಾ ಸ್ವಾಮಿ? ನೀವು ದೇಶ ಸುತ್ತಿ ಸ್ವಾಮಿ.

ಮಂಡ್ಯ ಜಿಲ್ಲೆಯ ಎಲ್ಲಾ ಪಕ್ಷದವ್ರಿಗೂ ಕರೆ ಕೊಡ್ತಿನಿ ನೀವು ಗಂಡಸ್ರಾಗಿ ಬಳೆ ತೊಟ್ಟುಕೊಳ್ಳಬೇಡಿ ಕಣ್ರೋ. ನಿಮ್ಮ ಮನೆಗೆ ಯಾರಾದರೂ ಬಂದು ಸೇರ್ಕೊಂಡ್ರೆ ಸುಮ್ನಾಗ್ತಿರಾ.? ಸೇರ್ಕೋಳೊರು ಬಹಳ ನೈಸಾಗಿ, ಪಾಲೀಷಾಗಿ ಮಾತನಾಡಿ ಸೇರ್ಕೋತಾರೆ ಎಚ್ಚೆತ್ಕೊಳಿ. ನಮ್ಮ ಜಿಲ್ಲೆಯವ್ರು ಬಳೆ ತೊಟ್ಕೊಂಡು ಹೆಂಗಸ್ರಾಗಬೇಡಿ, ಗಂಡಸ್ರಾಗ್ರಪ್ಪ ಅಂತಿದ್ದೀನಿ ಅಷ್ಟೇ.