ಟಾಲಿವುಡ್‌ನ(tollywood) ಡಾರ್ಲಿಂಗ್ ಪ್ರಭಾಸ್(prabhas) ನಟನೆಯ ʻಆದಿಪುರುಷ್ʼ(adipurush) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟಿ ಕೃತಿ ಸನೋನ್(kruti sanon) ಸೀತೆಯಾಗಿ ಪ್ರಭಾಸ್‌ಗೆ ಜೋಡಿಯಾಗಿದ್ದಾರೆ. ನಟ ಸೈಫ್ ಅಲಿ ಖಾನ್(saif ali khan) ರಾವಣನಾಗಿ ತೆರೆ ಮೇಲೆ ಅಬ್ಬರಿಸಲಿದ್ದಾರೆ.

ʻಆದಿಪುರುಷ್ʼ(adipurush) ಚಿತ್ರತಂಡ, ಚಿತ್ರದ ಟ್ರೇಲರ್‌ರನ್ನ(trailer) ಸ್ಪೆಶಲ್ ಆಗಿ ರಿಲೀಸ್ ಮಾಡ್ಬೇಕು, ಟ್ರೇಲರ್ ಮೂಲಕ ಧೂಳೆಬ್ಬಿಸಬೇಕು ಅಂತೆಲ್ಲ ಪ್ಲ್ಯಾನ್ ಮಾಡಿಕೊಂಡಿತ್ತು. ಆದ್ರೀಗ ಚಿತ್ರತಂಡಕ್ಕೆ ಕೆಲ ಕಿಡಿಗೇಡಿಗಳಿಂದ ತೀವ್ರ ಬೇಸರವಾಗಿದೆ.

ಹೌದು.. ಮೇ 8ರ ಸಂಜೆಯೇ ಅಭಿಮಾನಿಗಳಿಗಾಗಿ ವಿಶೇಷವಾಗಿ ʻಆದಿಪುರುಷ್ʼ(adipurush) ಸಿನಿಮಾದ ಟ್ರೇಲರ್ ಪ್ರದರ್ಶನ ಮಾಡಲಾಯ್ತು. ಹೈದರಾಬಾದ್ನ ಆಯ್ದ ಕೆಲವು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಬಿತ್ತರವಾದ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟರು. ಆದರೆ ಕೆಲವರು ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ(social media) ಹರಿಬಿಟ್ಟಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಬೇಸರವಾಗಿದೆ.

ಮೇ 9ರ ಸಂಜೆ 5 ಗಂಟೆಗೆ ಟ್ರೇಲರ್(trailer) ರಿಲೀಸ್ ಮಾಡುವುದಾಗಿ ಈ ಮೊದಲು ಚಿತ್ರತಂಡ ಘೋಷಿಸಿತ್ತು. ಆದರೆ ಲೀಕ್ ಬಿಸಿ ತಟ್ಟಿರುವುದರಿಂದ ಮೂರು ಗಂಟೆ ಮುಂಚಿತವಾಗಿ ಅಂದರೆ 1.53ಕ್ಕೆ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ(film team) ಮುಂದಾಗಿದೆ. ಟಿ-ಸೀರಿಸ್ ಯೂಟ್ಯೂಬ್ ಚಾನೆಲ್ ಮೂಲಕ ‘ಆದಿಪುರುಷ್’(adipurush) ಟ್ರೇಲರ್ ರಿಲೀಸ್ ಆಗಲಿದೆ.