“The tendency of resisting the required changes within us is called as rigidity….”!
ಈ ಮೇಲಿನ ಸಾಲಿನ ಅರ್ಥ: “ಕಾಲಕ್ಕೆ ತಕ್ಕಂಥೆ ನಮ್ಮೊಳಗೆ ಆಗಬೇಕಾದ ಅಗತ್ಯ ಬದಲಾವಣೆಯನ್ನು ನಿರೋಧಿಸುವ ಪ್ರವ್ರತ್ತಿಗೆ ಬಿಗಿತನ ಎನ್ನುತ್ತೇವೆ.” ಈ ಗುಣ ಯಾರಲ್ಲಿ ಹೆಚ್ಚು ಕಂಡುಬರುತ್ತದೊ ಅವರು ತಮ್ಮ ಬದುಕಿನ ಉದ್ದೇಶಿತ ಗುರಿ ಮುಟ್ಚುವಲ್ಲಿ ಯಶಸ್ಸು ಕಾಣಲಾರರು. ಈ ಗುಣ ಹೆಚ್ಚಾಗಿ ಯಾರಲ್ಲಿ ಕಂಡುಬರುತ್ತದೆ ಎನ್ನುವುದನ್ನು ನಾವು ಕೂಲಂಕುಶವಾಗಿ ಗಮನಿಸಿ ವಿಶ್ಲೇಷಿಸುವ ತಗತ್ಯವಿದೆ. ಮೊದಲು ಬಲಪಂಥೀಯರು ಮತ್ತು ಪ್ರಗತಿಪರರ ನಡುವಿನ ವ್ಯತ್ಯಾಸವನ್ನು ವಿವರಿಸಿ ನಾನು ಕೆಲವೊಂದು ಪ್ರಾಸಂಗಿಕ ಘಟನೆಗಳನ್ನು ಉದಾಹರಿಸುತ್ತ ಈ ಚರ್ಚೆಯನ್ನು ಮುಂದುವರೆಸುತ್ತೇನೆ.
ಬಲಪಂಥೀಯರು ಮತ್ತು ಪ್ರಗತಿಪರರ ಲಕ್ಷಣಗಳು
🔸ಬಲಪಂಥಿಯರು ಭಾವನಾತ್ಮಕ ವಿಷಯಗಳನ್ನು ಎತ್ತಿ ಜನರನ್ನು ಬಲೆಗೆ ಹಾಕುತ್ತಾರೆ.
🔹ಪ್ರಗತಿಪರರಿಗೆ ಜನರ ಭಾವನೆಗಳು ಅರ್ಥವಾಗುವುದಿಲ್ಲ ಮತ್ತು ಅವರು ಭಾವನೆಗಳನ್ನು ಕೆರಳಿಸುವುದಿಲ್ಲ.
🔸 ಬಲಪಂಥಿಯರು ಹಸಿಹಸಿ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮರು.
🔹 ಪ್ರಗತಿಪರರು ಸತ್ಯವನ್ನೇ ಜನರಿಗೆ ಪರಿಣಾಮಕಾರಿಯಾಗಿ ಹೇಳಲಾಗದ ಸೋಮಾರಿಗಳು.
🔸 ಬಲಪಂಥಿಯರದ್ದು ಪರಿಸ್ಥಿತಿಯ ದುರ್ಲಾಭ ಪಡೆದು ಅಪಪ್ರಚಾರ ಮಾಡುವಲ್ಲಿ ಎತ್ತಿದ ಕೈ.
🔹ಪ್ರಗತಿಪರರು ಪರಿಸ್ಥಿತಿಯ ದುರ್ಲಾಭ ಪಡೆಯುವುದಿಲ್ಲ ಮತ್ತು ಪ್ರಚಾರವೂ ಮಾಡುವುದಿಲ್ಲ.
🔸 ಬಲಪಂಥಿಯರು ತಮ್ಮ ಕಾರ್ಯಸಾಧನೆಗೆ ಎಲ್ಲ ಬಗೆಯ ಅಡ್ಡ ಹಾದಿಯನ್ನು ತುಳಿಯುತ್ತಾರೆ.
🔹ಪ್ರಗತಿಪರರು ಇರುವ ನೇರ ಹಾದಿಯಲ್ಲೇ ನಡೆಯಲಾಗದಷ್ಟು ದುರ್ಬಲರು.
🔸ಬಲಪಂಥಿಯರಿಗೆ ಸಿದ್ಧಾಂತವೇ ಇಲ್ಲ. ಯಾವುದೇ ರೀತಿಯಲ್ಲಾಗಲಿ ತಮ್ಮ ಕಾರ್ಯ ಸಾಧಿಸಬಲ್ಲರು.
🔹ಪ್ರಗತಿಪರರಿಗೆ ಅತಿಯಾದ ಸಿದ್ಧಾಂತಗಳ ಭಾರವೇ ಅವರನ್ನು ನಿಷ್ಕ್ರೀಯಗೊಳಿಸಬಲ್ಲವು.
ಒಬ್ಬ ಬಲಪಂಥಿಯ ಸಾಂಪ್ರದಾಯವಾದಿಗೆ ಹೆಚ್ಚಿನ ವಿದ್ಯಾಬ್ಯಾಸಕ್ಕೆಂದು ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ ಎಂದಿಟ್ಟುಕೊಳ್ಳಿ. ಅಲ್ಲಿ ಹೋಗಿ ವಿದ್ಯಾಭ್ಯಾಸ ಮುಗಿದ ಮೇಲೆ ಆತನಿಗೆ ಅಲ್ಲೇ ನೆಲೆಸುವ ಅವಕಾಶವೂ ದೊರೆಯುತ್ತದೆ. ಆಗ ಆತ ತನ್ನ ಧರ್ಮದ ಸಾಗರೋಲಂಘನೆಯ ನಿಬಂಧನೆಯನ್ನು ಸುಲಭವಾಗಿ ಮುರಿಯುತ್ತಾನೆ. ಅಲ್ಲಿಗೆ ಹೋದ ಮೇಲೆ ಮಾಂಸಾಹಾರ ಮತ್ತು ಮಧ್ಯ ಸೇವಿಸುವ ಪ್ರಸಂಗ ಬಂದಾಗಲೂ ಆತ ಅದನ್ನು ತನ್ನ ಸಂಪ್ರದಾಯದ ನೆಲೆಗಟ್ಟಿನಲ್ಲಿ ನಿರಾಕರಿಸುವುದಿಲ್ಲ. ಮುಂದೆ ಆತ ವಿದೇಶದಲ್ಲಿ ನೆಲೆಸಿ, ಅಲ್ಲೊಂದು ಭೌವ್ಯ ಮಂದಿರ ಕಟ್ಟಿಸಲು ಮುಂದಾಗುತ್ತಾನೆ ಹಾಗು ತನ್ನ ಧಾರ್ಮದ ಪ್ರಚಾರದಲ್ಲಿ ತೊಡಗುತ್ತಾನೆ. ಹಾಗೆ ಮಾಡುವ ಮೂಲಕ ಆತ ತನ್ನ ಧರ್ಮದ ಕಟ್ಟಳೆಗಳನ್ನು ಮುರಿದುಕೊಂಡೂ ಕೂಡ ಉದ್ದೇಶಿತ ಗುರಿಯನ್ನು ಮುಟ್ಚುತ್ತಾನೆ.

ಆದರೆ ಅದೇ ಒಬ್ಬ ಎಡಪಂಥೀಯ/ಪ್ರಗತಿಪರ/ಉದಾರವಾದಿ ಚಿಂತಕ ತಾನು ಅಂದುಕೊಂಡಿದ್ದನ್ನು ಸಾಧಿಸುವ ಅವಕಾಶ ಒದಗಿ ಬಂದಾಗಲೂ ತಾನು ನಂಬಿದ ಸಿದ್ಧಾಂತಗಳನ್ನು ಮೀರಿ ಆ ಅವಕಾಶವನ್ನು ಆತ ಬಳಸಿಕೊಳ್ಳಲು ಹಿಂದೇಟು ಹಾಕುತ್ತಾನೆ. ಹಾಗಾಗಿ ಆತ ತನ್ನ ಉದ್ದೇಶಿತ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗುವುದಿಲ್ಲ. ನಾವು ಪಾದಾಚಾರಿಯಾಗಿ ರಸ್ತೆಯಲ್ಲಿ ನಡೆಯುವಾಗ ಎಡಗಡೆಯಲ್ಲೇ ನಡೆಯುತ್ತೇವೆ. ಆದರೆ ಎದುರಿಗೆ ತಲೆ ಕೆಟ್ಟ ಕುಡುಕನೊಬ್ಬ ನಮ್ಮ ಮೇಲೆ ಟ್ರಕ್ ಹಾಯಿಸಲು ಬಂದಾಗ ನಾವು ಪಕ್ಕಕ್ಕೆ ಸರಿದರೆ ಬದುಕಿಕೊಳ್ಳುತ್ತೇವೆ. ಇಲ್ಲ, ನಾವು ಸರಿಯಾದ ಬದಿಯಲ್ಲಿದ್ದೇವೆಂದುಕೊಂಡು ಅಲ್ಲೇ ನಿಂತರೆ ಜೀವ ಕಳೆದುಕೊಳ್ಳುತ್ತೇವೆ. ಇದೇ ಬಲಪಂಥಿಯ ಸಂಪ್ರಧಾಯವಾದಿಗಳಿಗು ಮತ್ತು ಪ್ರಗತಿಪರರಿಗೂ ಇರುವ ಮೂಲಭೂತವಾದ ವ್ಯತ್ಯಾಸ.
ಬಲಪಂಥಿಯರ ಈ ಅವಕಾಶವಾದಿ ಹೊಂದಾಣಿಕೆಯ ಪ್ರವ್ರತ್ತಿ ಅಥವ ಪ್ಯಾಟರ್ನನ್ನು ನಾವು ಬುದ್ದನ ಕಾಲದಿಂದಲೂ ನೋಡುತ್ತ ಬಂದಿದ್ದೇವೆ. ಬುದ್ಧನ ಆಗಮನಕ್ಕಿಂತ ಮೊದಲು ಹಸುವಿನ ಮಾಂಸವು ಈ ಬಲಪಂಥಿಯ ಆರ್ಯರ ಪ್ರಧಾನ ಆಹಾರವಾಗಿತ್ತು ಎಂದು ಆರ್ಯರ ಧರ್ಮಗ್ರಂಥಗಳಾದ ವೇದ/ಶಾಸ್ತ್ರ/ಮನುಸ್ಮ್ರತಿ/ಮಹಾಕಾವ್ಯಗಳು ಉಲ್ಲೇಖಿಸುತ್ತವೆ. ಆದರೆ ಬುದ್ಧನ ತರುವಾಯ ದಿಢೀರನೆ ಹಸುವನ್ನು ಮಾತೆ ಎಂದು ದೈವತ್ವಕ್ಕೇರಿಸಿದ್ದರ ಹಿಂದಿನ ಹುನ್ನಾರ ಬಹಳಷ್ಟು ಜನರಿಗೆ ಅರ್ಥವಾಗುವುದಿಲ್ಲ. ಅಂಹಿಂಸಾ ತತ್ವದ ಕಡೆ ಆಕರ್ಶಿತರಾಗಿ ನೆಲಮೂಲದ ಜನಪದೀಯ ಸಮುದಾಯಗಳ ಬೌದ್ಧ ಧರ್ಮದ ಕಡೆಗಿನ ವಲಸೆಯನ್ನು ತಡೆಯಲೆಂದೇ ತಕ್ಷಣಕ್ಕೆ ತಮ್ಮ ಆಹಾರವಾಗಿದ್ದ ಹಸುವನ್ನು ಮಾತೆಯಾಗಿಸಿ ದೈವತ್ವಕ್ಕೇರಿಸಿದ ಆರ್ಯರ ಅವಕಾಶವಾದಿ ಹೊಂದಾಣಿಕೆ ಬಹುಶಃ ಈ ನೆಲದ ಪ್ರಗತಿಪರರು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಕೇವಲ ಅವಲೋಕಿಸಿ ಸುಮ್ಮನೆ ಕೂಡುವುದಕ್ಕಿಂತ ತಮ್ಮ ಸ್ಥಾಪಿತ ಸಿದ್ಧಾಂತಗಳನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳುವುದು ಕೂಡ ಅಷ್ಟೇ ಅಗತ್ಯವಾಗಿದೆ.
ಮುಂದೆ ಮೊಘಲರು ಈ ದೇಶದ ಮೇಲೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದಾಗ ಹಾಗು ಅವರು ಇಲ್ಲಿಯೇ ನೆಲೆ ನಿಂತು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಅವರಿಗೆ ಒತ್ತಾಸೆಯಾಗಿ ನಿಂತು ಸಹಾಯ ಮಾಡಿದವರು ಇದೇ ಸನಾತನಿ ಆರ್ಯರು ಎನ್ನುವ ಸತ್ಯ ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಅಕ್ಬರನ ಆಸ್ಥಾನದ ಮಂತ್ರಿ ಬೀರಬಲ್ಲನಿಂದ ಹಿಡಿದು ಹೈದರಾಲಿ/ಟಿಪ್ಪುನ ಆಸ್ಥಾನದ ದಿವಾನ್ ಪೂರ್ಣಯ್ಯನವರೆಗೆ, ಅಷ್ಟೇ ಅಲ್ಲದೆ ಆರಂಭದಲ್ಲಿ ಬ್ರಿಟೀಷ್ ವಸಹಾತುಶಾಹಿ ಆಡಳಿತದೊಂದಿಗೂ ಕೂಡ ಸಂಪ್ರದಾಯವಾದಿ ಆರ್ಯರು ಹೇಗೆಲ್ಲ ಪರಕೀಯ ಮತ್ತು ಸ್ಥಳೀಯ ಆಳರಸರ ದಿವಾನಗಿರಿ, ಚಮಚಾಗಿರಿ ಮಾಡಿಕೊಂಡು ಹೊಂದಾಣಿಕೆಯ ಬದುಕು ಬಾಳಿದರು ಎನ್ನುವುದನ್ನು ಗಮನಿಸಬೇಕು. ಹಾಗೊಂದು ವೇಳೆ ಹೊಂದಾಣಿಕೆ ಮಾಡಿಕೊಂಡಿರದಿದ್ದರೆ ತಾವು ಹುಟ್ಟುಹಾಕಿದ್ದ ಚಾತುರ್ವಣ ವ್ಯವಸ್ಥೆ ಮತ್ತು ಆ ವ್ಯವಸ್ಥೆಯ ಮೂಲಕ ಭಾರತೀಯ ಬಹುಜನರ ಮೇಲಿನ ಅವರ ನಿಯಂತ್ರಣ ಜೀವಂತವಾಗಿ ಉಳಿಯುತ್ತಿರಲಿಲ್ಲ.
ಛತ್ರಪತಿ ಶಿವಾಜಿ ಮಹಾರಾಜರನ್ನು ಹಿಂದೂ ಸಾಮ್ರಾಟನೆಂದು ವಿಜ್ರಂಭಿಸಿ ಜನರ ನಡುವೆ ಬಿಂಬಿಸುತ್ತಿರುವ ಬಲಪಂಥಿಯರು ಅದೇ ಶಿವಾಜಿಯನ್ನು ಹೇಗೆಲ್ಲ ಕಾಡಿದ್ದರು ಎನ್ನುವುದು ಇಂದಿನ ಬಹಳಷ್ಟು ಯುವಕರಿಗೆ ತಿಳಿದಿಲ್ಲ. ಶಿವಾಜಿ ತನ್ನ ಸ್ವಂತ ಬಲದ ಮೇಲೆ ಕಟ್ಟಿದ ಬ್ರಹತ್ ಸಾಮ್ರಾಜ್ಯವನ್ನು ದ್ವಂಸ ಮಾಡಲು ಸಾಂಪ್ರದಾಯವಾದಿಗಳು ಮಾಡಿದ ಹುನ್ನಾರ ಒಂದೆರಡಲ್ಲ. ಶಿವಾಜಿ ಶೂದ್ರ ಎನ್ನುವ ಕಾರಣಕ್ಕಾಗಿ ಆತನ ಪಟ್ಟಾಭಿಷೇಕ ನೆರವೇರಿಸಲು ನಿರಾಕರಿಸಿದ್ದ ಸಾಂಪ್ರದಾಯವಾದಿಗಳು ಆತ ಒಡ್ಡಿದ ಹಣದ ಆಮೀಷಕ್ಕೆ ಮಣಿದು ಘಾಗಾ ಭಟ್ಟ ಎಂಬ ಕಾಶಿಯಿಂದ ತರಲಾದ ಪುರೋಹಿತ ಶಿವಾಜಿಯ ಹಣೆಗೆ ತನ್ನ ಎಡಗಾಲು ಹೆಬ್ಬೆರಳಿನಿಂದ ತಿಲಕವಿಟ್ಟು ಅಮಂಗಳವಾಗಿ ಪಟ್ಟಾಭಿಷೇಕ ನೆರವೇರಿಸುತ್ತಾನೆ. ಆನಂತರ ಅದು ಶಾಸ್ತ್ರೋಕ್ತವಾಗಿರಲಿಲ್ಲವೆಂದು ತಕರಾರು ತೆಗೆದು ಮತ್ತೊಮ್ಮೆ ಪಟ್ಟಾಭಿಷೇಕ ಮಾಡುವ ನೆಪದಲ್ಲಿ ಶಿವಾಜಿಯ ಬೊಕ್ಕಸವೆಲ್ಲ ಬರಿದಾಗಿಸಿದ ಪ್ರಸಂಗ ನಮ್ಮ ಯುವಜನರು ಅರಿತುಕೊಳ್ಳಬೇಕಿದೆ.
ಔರಂಗಜೇಬ್ ಮತ್ತು ಅಫಜಲಖಾನನೊಂದಿಗೆ ಸೇರಿ ಶಿವಾಜಿಯನ್ನು ಕೊಲ್ಲಲು ಪ್ರಯತ್ನಿಸಿ ಕೊನೆಗೆ ತಾನೇ ಶಿವಾಜಿ ಕೈಯಲ್ಲಿ ಹತನಾದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎನ್ನುವ ಸನಾತನಿಯ ಬಗ್ಗೆ ಇಂದಿನ ನಕಲಿ ದೇಶಭಕ್ತರು ಮಾತನಾಡುವುದೇ ಇಲ್ಲ. ಮೊಘಲ್ ದೊರೆ ಔರಂಗಜೇಬ್ ದುಷ್ಟನಾಗಿದ್ದರೆ ಆತನ ಹತ್ತಿರ ಚಾಕರಿ ಮಾಡಿ ಶಿವಾಜಿಯ ಹತ್ಯೆಗೆ ಪ್ರಯತ್ನಿಸಿದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿಯ ಬಗ್ಗೆ ಇಂದಿನ ನಕಲಿ ದೇಶಭಕ್ತರು ಮೌನವಾಗಿರುವುದೇಕೆ ಎಂದು ನಮ್ಮ ಯುವಕರು ಪ್ರಶ್ನಿಸಬೇಕಿದೆ. ಮೊಘಲರು ನಮ್ಮ ದೇಶಕ್ಕೆ ಮಾರಕವಾಗಿದ್ದರೆ, ಟಿಪ್ಪು ಇಲ್ಲಿ ಅರಾಜಕತೆಯ ಆಡಳಿತ ಮಾಡಿದ್ದರೆ, ಈ ನೆಲದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯಭಾರ ಮಾಡುತ್ತಿದ್ದಿದ್ದರೆ ಪೂರ್ಣಯ್ಯನಂತವರು ಅವರ ಆಸ್ತಾನದಲ್ಲಿ ಸುಖದಿಂದ ಮೌನವಾಗಿ ದಿವಾನಗಿರಿ ಮಾಡಿದ್ದೇಕೆ ಎಂದು ನಮ್ಮ ಯುವ ಜನರು ಈ ನಕಲಿ ದೇಶಭಕ್ತರ ಕುತ್ತಿಗೆ ಪಟ್ಟಿ ಹಿಡಿದು ಪ್ರಶ್ನಿಸಬೇಕಿದೆ. ಅಂದರೆ, ಆ ಮೋಘಲರ ಪಾಪ ಕೃತ್ಯಗಳಲ್ಲಿ ಈ ಸನಾತನಿ ಆರ್ಯರ ಪಾಲೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಟಿಪ್ಪು ಬ್ರಿಟೀಷರೊಂದಿಗೆ ಹೋರಾಡುವಾಗ ಮರಾಠ ಪೇಶ್ವೆಗಳು ಮತ್ತು ನಿಝಾಮರು ಬ್ರಿಟೀಷರನ್ನು ಬೆಂಬಲಿಸಿದ್ದರು. ಅಷ್ಟಾದರೂ ಪೇಶ್ವೆಗಳ ದುರಾಡಳಿತದ ಬಗ್ಗೆ ಚಕಾರವೆತ್ತದ ಈ ನಕಲಿ ದೇಶಭಕ್ತರನ್ನು ನಾವು ಸಂಪೂರ್ಣವಾಗಿ ಸಂಶಯದಿಂದ ನೋಡಬೇಕಿದೆ. ಈ ನೆಲದ ಶ್ರೇಷ್ಠ ಚಿಂತಕ, ವಿಚಾರವಾದಿ ಸ್ವಾಮಿ ವಿವೇಕಾನಂದರು ಶೂದ್ರರಾಗಿದ್ದು ಅವರು ಹಿಂದೂ ಸನ್ಯಾಸಿಯಾಗಲು ಅರ್ಹರಲ್ಲ ಎಂದು ಅಂದಿನ ಕಲ್ಕತ್ತ ಹೈಕೋರ್ಟಿನಲ್ಲಿ ದಾವೆ ಹೂಡಿದವರು, ಆನಂತರ ಅವರಿಗೆ ಚಿಕ್ಯಾಗೊ ಸರ್ವ ಧರ್ಮ ಸಮ್ಮೇಳಕ್ಕೆ ಹೋಗಲು ಪ್ರಾಯೋಜಕತ್ವದ ಪತ್ರ ಕೊಡಲು ಹಿಂದೇಟು ಹಾಕಿದ್ದವರು ಮತ್ತು ಚಿಕ್ಯಾಗೊಯಿಂದ ಮರಳಿ ಬಂದಾಗ ವಿವೇಕಾನಂದರನ್ನು ಸ್ವಾಗತಿಸಲು ನಿರಾಕರಿಸಿದ ಸಂಪ್ರದಾಯವಾದಿ ಸಂತಾನಿಗಳು ಇಂದು ವಿವೇಕಾನಂದರ ಭಾವಚಿತ್ರ ಮತ್ತು ಹೆಸರನ್ನು ಬಳಸಿಕೊಂಡು ಅವರನ್ನು ಹಿಂದೂ ಸನ್ಯಾಸಿ ಎಂದು ಬಿಂಬಿಸುತ್ತಿದ್ದಾರೆ. ಅಸಲಿಕೆ ವಿವೇಕಾನಂದರು ಸನಾತನಿಗಳ ವಿರುದ್ಧ ಪ್ರತಿಪಾದಿಸಿದ ವಿಚಾರಗಳನ್ನು ಇದೇ ಸನಾತನಿಗಳು ಇಂದು ಮುಚ್ಚಿಟ್ಟುಬಿಟ್ಟಿದ್ದಾರೆ. ಇದನ್ನೇ ಸನಾತನಿಗಳ ಸಮಯಸಾಧಕ ಹೊಂದಾಣಿಕೆ ಎಂದು ಕರೆಯುವುದು.
ಅದಷ್ಟೇ ಅಲ್ಲದೆ ಅಂದು ಝಾನ್ಸಿ ರಾಣಿಗೆ ಮೋಸ ಮಾಡಿ ಬ್ರಿಟೀಷರಿಗೆ ಬೆಂಬಲಿಸಿದ್ದ ಅಂದಿನ ಗ್ವಾಲಿಯರ್ ಸಂಸ್ಥಾನದ ಅರಸರು, ಕಿತ್ತೂರಿನ ಸಂಸ್ಥಾನದ ಗುಟ್ಟುಗಳನ್ನ ಅಲ್ಲಿನ ಮಲ್ಲಪ್ಪ ಶೆಟ್ಟಿಗೆ ಆಮೀಷವೊಡ್ಡುವ ಮೂಲಕ ತಿಳಿದುಕೊಂಡು ಬ್ರಿಟೀಷರಿಗೆ ಸಹಾಯ ಮಾಡಿದ ಅಂದಿನ ಧಾರವಾಡ ಕಲೆಕ್ಟರ್ ಕಚೇರಿಯ ಗುಮಾಸ್ತನಾಗಿದ್ದ ವೆಂಕಟರಾವ್ ಹಾವೇರಿ, ಸಂಗೊಳ್ಳಿ ರಾಯಣ್ಣ ನಿರಾಯುಧನಾಗಿ ಕೆರೆಯಲ್ಲಿ ಸ್ನಾನ ಮಾಡುವಾಗ ಬ್ರಿಟೀಷರಿಗೆ ಹಿಡಿದುಕೊಟ್ಟ ಮತ್ತೊಬ್ಬ ಕುಲಕರ್ಣಿ, ಹಲಗಲಿ ಬೇಡರಿಗೆ ಮೋಸ ಮಾಡಿದ ಅಂದಿನ ಮುಧೋಳದ ಕೃಷ್ಣರಾವ್ ಕಾರಭಾರಿ, ಡಾ. ಅಂಬೇಡ್ಕರ್ ಅವರು ಬ್ಯಾರಿಸ್ಟರ್ ಓದಿ ಭಾರತಕ್ಕೆ ಬಂದಾಗ ಉದ್ಯೋಗ ಸಿಗದಂತೆ ನೋಡಿಕೊಂಡವರು, ಹೀಗೆ ಭಾರತದ ಅನೇಕ ಸ್ವಾತಂತ್ರ ಹೋರಾಟಗಾರರನ್ನು ಮತ್ತು ದೇಶಿ ಸಾಮ್ರಾಜ್ಯಗಳನ್ನು ನುಂಗಿ ನೀರು ಕುಡಿದ ಕುಖ್ಯಾತಿ ಈ ಸನಾತನಿಗಳಿಗೆ ಸಲ್ಲುತ್ತದೆ.
ಅಂದು ಕನಕದಾಸರನ್ನು ಮಂದಿರದೊಳಗೆ ಬಿಟ್ಟುಕೊಳ್ಳಲು ನಿರಾಕರಿಸಿದ ಸನಾತನಿಗಳು ಮುಂದೆ ಕನಕದಾಸರ ಸಮುದಾಯದ ಭಕ್ತರನ್ನು ಆಕರ್ಶಿಸಿ ತಮ್ಮ ದೇವಾಲಯದ ಆದಾಯ ವೃದ್ಧಿಸಿಕೊಳ್ಳಲು ಅದೇ ಕನಕದಾಸರ ಹೆಸರಿನಲ್ಲಿ ಒಂದು ಕಾಲ್ಪನಿಕ ಕಥೆ ಸೃಷ್ಠಿಸಿ ಕಿಂಡಿಯೊಂದನ್ನು ತೆರೆದರು. ಡಾ. ಬಾಬಾಸಾಹೇಬರನ್ನು ಆರಂಭದಿಂದಲೂ ದ್ವೇಷಿಸಿದ ಸನಾತನಿಗಳು ಮುಂದೆ ತಮ್ಮ ಮಗಳನ್ನೇ ಬಾದಾಸಾಹೇಬರಿಗೆ ಧಾರೆ ಎರೆದುಕೊಟ್ಟದ್ದನ್ನೂ ನಾವು ಬಲ್ಲೆವು. ಮುಸ್ಲಿಮ್ ದ್ವೇಷವನ್ನೇ ತಮ್ಮ ರಾಜಕೀಯದ ಸರಕಾಗಿಸಿಕೊಂಡ ಸನಾತನಿಗಳ ಮನೆ ಅಳಿಯಂದಿರೆಂದರೆ ಇಬ್ಬರು ಬಿಜೆಪಿ ನಾಯಕರಾದ ಮುಖ್ತಾರ ಅಬ್ಬಾಸ್ ನಖ್ವಿ ಮತ್ತು ಶಾನವಾಜ್ ಹುಷೇನ್. ಈ ಲವ್ ಜಿಹಾದ್ ಆರಂಭಗೊಂಡಿದ್ದು ಮೊಘಲ್ ದೊರೆ ಅಕ್ಬರ್ ಮತ್ತು ಜೋಧಾ ಮದುವೆಯಿಂದ.
ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಸುಬ್ರಮಣ್ಯಂ ಸ್ವಾಮಿಯಿಂದ ಹಿಡಿದು ಅನೇಕ ಸನಾತನಿ ಪುಢಾರಿಗಳು, ಮತ್ತು ಸೆಲೆಬ್ರಿಟಿಗಳ ಅಳಿಯಂದಿರು ಮುಸಲ್ಮಾನರು ಎನ್ನುವ ಸಂಗತಿ ಅಚ್ಚರಿಯದ್ದೇನಲ್ಲ. ಅಷ್ಟೇ ಅಲ್ಲದೆ ಗೋವನ್ನು ಮಾತೆ ಎಂದು ಎಲ್ಲರನ್ನು ನಂಬಿಸುವ ನಾಟಕ ಮಾಡುತ್ತಲೇ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವವರೂ ಸನಾತನಿಗಳೆ ಎನ್ನುವ ಸಂಗತಿಯೂ ಆಶ್ಚರ್ಯದ್ದಲ್ಲ. ನನ್ನ ಅನೇಕ ಸನಾತನಿ ಸ್ನೇಹಿತರ ಮನೆಯ ಹೆಣ್ಮಕ್ಕಳು ಮದುವೆಯಾಗಿದ್ದು ಮುಸ್ಲಿಮ್ ಅಥವಾ ದಲಿತ ಯುವಕರನ್ನು. ನಾವು ಅವರನ್ನು ತಮಾಷೆಯಾಗಿ ಕಿಚಾಯಿಸಿದಾಗ ನನ್ನ ಸ್ನೇಹಿತರು ಯಾವುದೇ ಮುಜುಗರ ಪಡದೆ ಹೇಳುವುದೇನೆಂದರೆ “ಜಾತಿ ಕೆಟ್ಟರೂ ಸುಖ ಸಿಗಬೇಕು” ಎನ್ನುವ ಅವಕಾಶವಾದಿ ಹೊಂದಾಣಿಕೆಯ ಸಿದ್ಧ ಸಿದ್ಧಾಂತವನ್ನು.
ಮುಂದೆ ಬ್ರಿಟೀಷರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು, ಸ್ವಾತಂತ್ರ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುವ ಘನಂದಾರಿ ಕೆಲಸ ಮಾಡಿದವರಲ್ಲಿ ಈ ಸನಾತನಿಗಳದ್ದೇ ಸಿಂಹಪಾಲು. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ನೇತಾಜಿ ಸುಭಾಷಚಂದ್ರ್ ಭೋಸ್ ಅವರ ಅಝಾದ್ ಹಿಂದ್ ಫೌಜಿಗೆ ಹಿಂದೂಗಳು ಸೇರಬಾರದು, ಅದರ ಬದಲಿಗೆ ಬ್ರಿಟೀಷರ ಸೈನಕ್ಕೆ ಸೇರಬೇಕು ಎಂದು ಕರೆ ಕೊಟ್ಟವರು ವಿ ಡಿ ಸಾವರಕರ್. ದೇಶ ವಿಭಜನೆಯ ಬೇಡಿಕೆ ಇಟ್ಟಿದ್ದ ಮುಸ್ಲಿಮ್ ಲೀಗ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಂದಿನ ಹಿಂದೂ ಮಹಾಸಭಾ ಪಕ್ಷದ ನಾಯಕ ಶಾಮಾಪ್ರಸಾದ್ ಮುಖರ್ಜಿ ಪ್ರಾಂತೀಯ ಸರಕಾರ ರಚನೆ ಮಾಡಿದ್ದು ಮತ್ತು ಬಂಗಾಳ ವಿಭಜನೆಗೆ ಪಟ್ಟು ಹಿಡಿದು ದೇಶ ವಿಭನೆಗೆ ಮೊಟ್ಟ ಮೊದಲ ಬಾರಿ ಧ್ವನಿ ಎತ್ತಿದ್ದು ಇದೇ ಶಾಮಾಪ್ರಸಾದ್ ಮುಖರ್ಜಿ ಎನ್ನುವ ಸತ್ಯ ಸಂಗತಿ ನಮ್ಮ ಯುವಜನರು ಅರಿತುಕೊಳ್ಳಬೇಕು.

ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಬಂಗಾಳದಲ್ಲಿ ಬ್ರಿಟೀಷ್ ಸರಕಾರ ಇಂದಿನ ಇಂದಿರಾ ಕ್ಯಾಂಟಿನ್ ಮಾದರಿಯ ಉಚಿತ ಉಪಹಾರ ಮಂದಿರಗಳನ್ನು ಆರಂಭಿಸಿದಾಗ, ದಲಿತರು ಮತ್ತು ಶೂದ್ರರನ್ನು ಅಲ್ಲಿ ಅಡಿಗೆ ಮಾಡುವ ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಅಪಾರ ಸಂಖ್ಯೆಯ ಬಡ ಬಂಗಾಳಿಗಳ ಸಾವಿಗೆ ಕಾರಣವಾಗಿದ್ದು ಇದೇ ಶಾಮಾಪ್ರಸಾದ್ ಮುಖರ್ಜಿ ಎನ್ನುವ ಸಂಗತಿ ನಮ್ಮ ಯುವ ಜನತೆ ತಿಳಿದುಕೊಳ್ಳಬೇಕು. ಮುಂದೇ ಸ್ವಾತಂತ್ರಾ ನಂತರ ಇಂದಿರಾ ಹೇರಿದ ತುರ್ತು ಪರಿಸ್ಥಿತಿಯನ್ನು ಮತ್ತು ಇಂದಿರಾ ಸಾವಿನ ನಂತರ ಸಂಭವಿಸಿದ ಸಿಖ್ ಸರಮೇಧದ ಕಾರ್ಯಗಳನ್ನು ಈ ನಕಲಿ ದೇಶಭಕ್ತರು ಬೆಂಬಲಿಸಿದ್ದರು ಎನ್ನುವ ಸಂಗತಿ ಕೂಡ ನಾವು ಮರೆಯಬಾರದು. ಕಾಲಕಾಲಕ್ಕೆ ಬಂದ ಆಡಳಿತಗಳೊಂದಿಗೆ ಒಂದಿಲ್ಲೊಂದು ಬಗೆಯ ಹೊಂದಾಣಿಕೆ ಮಾಡಿಕೊಂಡು ತಮ್ಮ ಕಾರ್ಯ ಸಾಧಿಸಿಕೊಂಡ ಸನಾತನಿಗಳ ಕುಟಿಲತೆ ಹಾಗು ಸಮಯಸಾಧಕ ಹೊಂದಾಣಿಕೆಯ ಹುನ್ನಾರ ಪ್ರಗತಿಪರರು ಗಮನಿಸಬೇಕು.
ಸತತ 95 ವರ್ಷಗಳಿಂದ ಸನಾತನಿಗಳು ದೇಶಭಕ್ತಿಯ ಹೆಸರಿನಲ್ಲಿ ತಮ್ಮ ಸ್ವಹಿತಾಸಕ್ತಿ ಕಾಯುವ ಸಂಸ್ಥೆಯೊಂದನ್ನು ಕಟ್ಟಿ ಅದರ ಅಭ್ಯುದಯಕ್ಕೆ ಬಳಸಿದ್ದು ನಮ್ಮ ನೆಲಮೂಲದ ಬಹುಜನರ ಹಣ ಮತ್ತು ಮಾನವ ಸಂಪನ್ಮೂಲ ಎನ್ನುವುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಹನ್ನೆರಡನೇ ಶತಮಾನದಿಂದ ಹಿಡಿದು ಇಂದಿನ ವರೆಗೆ ಉದ್ದಕ್ಕೂ ಲಿಂಗಾಯತರನ್ನು ತುಳಿಯುತ್ತ ಅವರ ಮಠಗಳು, ಪುಢಾರಿಗಳು, ಮತದಾರರು ಮತ್ತು ಯುವಶಕ್ತಿಯನ್ನು ಬಳಸಿಯೇ ಕರ್ನಾಟಕವನ್ನು ಕೈವಶ ಮಾಡಿಕೊಂಡಿದ್ದು ಮತ್ತು ಇದೇ ಮಾದರಿಯ ಪ್ರಯೋಗ ಪ್ರತಿಯೊಂದು ರಾಜ್ಯಗಳಲ್ಲಿ ಮಾಡಿದ ಸನಾತನಿಗಳು ಇಂದು ಇಡೀ ಭಾರತದ ಆಡಳಿತ ಚುಕ್ಕಾಣಿ ಹಿಡಿದು ದೇಶದ ಆರ್ಥಿಕತೆ, ನೈತಿಕತೆ, ಉದ್ಯೋಗ, ಮೀಸಲಾತಿ, ಜನತಂತ್ರ, ಸಂವಿಧಾನ, ಸಹಿಷ್ಣತೆ, ಸಹಬಾಳ್ವೆ, ಬಹುತ್ವ ಪರಂಪರೆ, ಎಲ್ಲವುಗಳಿಗೆ ಅಪಾಯವನ್ನ ತಂದೊಡ್ಡಿದ್ದಾರೆ. ಕಾಲಕಾಲಕ್ಕೆ ಅವಕಾಶವಾದಿ ಹೊಂದಾಣಿಕೆ ಮಾಡಿಕೊಳ್ಳುತ್ತ, ಸೋತಂತೆ ನಟಿಸುತ್ತ ಸತತ ಗೆಲ್ಲುತ್ತ ಸಾಗುತ್ತಿದ್ದರೂ ಪ್ರಗತಿಪರರೆಂದು ಕರೆದುಕೊಳ್ಳುವ ನಾವು ಅತಿಯಾದ ಸೈದ್ಧಾಂತಿಕ ಬಿಗಿತನದ ಭಾರಕ್ಕೆ ಕುಸಿದು ಸೋಲುತ್ತ ಹೋಗುತ್ತಿದ್ದೇವೆ. ಆದರೂ ಪ್ರಗತಿಪರರು/ಎಡಪಂಥೀಯರು ಬುದ್ದಿ ಕಲಿಯುವ ಸ್ಥಿತಿಯಲಿಲ್ಲ.
ಈ ಪ್ರಗತಿಪರರು ಕೆಲಸಕ್ಕೆ ಬಾರದ ನಾಸ್ತಿಕತೆಯ ಬಗ್ಗೆ ಚರ್ಚಿಸುತ್ತ ವಾಟ್ಸಪ್ ಗುಂಪುಗಳಲ್ಲಿ ಕಾಲಹರಣ ಮಾಡುತ್ತಿದ್ದರೆ ಬಲಪಂಥೀಯ ಸನಾತನಿಗಳು ಜನರ ಆಸ್ತಿಕತೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತ ಅವರ ಮಿದುಳಿಗೆ ದೇಶಭಕ್ತಿ, ಧರ್ಮದ ವಿಷವನ್ನುಣ್ಣಿಸುಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಪ್ರಗತಿಪರರು ಸೆಮಿನಾರ್, ಚರ್ಚಾಕೂಟ, ವಾಟ್ಸಪ್ ಗುಂಪುಗಳಲ್ಲಿ ಮಾತ್ರ ಕ್ರೀಯಾಶೀಲರಾಗಿದ್ದರೆ ಬಲಪಂಥೀಯ ಸನಾತನಿಗಳು ಫೀಲ್ಡಿಗಿಳಿದು ಜನರ ಹತ್ತಿರಕ್ಕೆ ಹೋಗಿ ಅವರನ್ನು ಬ್ರೇನ್ವಾಷ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಪ್ರಗತಿಪರರು ಎಂದಿಗೂ ಫೀಲ್ಡಿಗಿಡಿದು ಕೆಲಸ ಮಾಡಿದ್ದನ್ನು ನಾನು ನೋಡಿಲ್ಲ. ಹಾಗೆ ಮಾಡುವ ಕೆಲವು ಪ್ರಗತಿಪರರನ್ನು ಕೂಡ ಹಿಯಾಳಿಸುತ್ತ ಒಣ ಸಿದ್ಧಾಂತಗಳನ್ನೇ ಹೇಳುತ್ತ ಕುಳಿತುಕೊಂಡಿದ್ದಾರೆ. ಆ ಕಾರಣಗಳಿಂದಲೇ ಪ್ರಗತಿಪರರು ಉದ್ದೇಶಿತ ಗುರಿ ಮುಟ್ಟುವಲ್ಲಿ ವಿಫಲರಾಗುತ್ತಿರುವುದು. ಭಾರತದಲ್ಲಿ ಎಡಪಂಥೀಯರು ಮತ್ತು ಪ್ರಗತಿಪರರು ಸೋಲುತ್ತಿರುವುದು ತಮ್ಮ ಭಯಂಕರ ನಾಸ್ತಿಕವಾದ, ಅತಿಯಾದ ಸಿದ್ಧಾಂತಗಳ ಭಾರ, ಕಾಲಕ್ಕೆ ತಕ್ಕಂತೆ ತನ್ನ ಕಾರ್ಯತಂತ್ರಗಳನ್ನು ನವೀಕಕರಿಸಿಕೊಳ್ಳಲಾಗದ ಸೋಮಾರಿತನ ಮತ್ತು ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳದ rigidity ಯಿಂದ.
ಎಡಪಂಥೀಯರ ನಾಸ್ತಿಕವಾದ ಮತ್ತು ಸೈದ್ಧಾಂತಿಕ rigidity ಅಂದು ಹಿರಿಯ ಕಮ್ಯುನಿಸ್ಟ್ ನಾಯಕ ಜ್ಯೋತಿಬಸು ಅವರಿಗೆ ಒಲಿದು ಬಂದಿದ್ದ ಪ್ರಧಾನಿ ಹುದ್ದೆಯನ್ನು ತಿರಸ್ಕರಿಸಲು ಕಾರಣವಾಗಿದ್ದರೆ ಇಂದು ಕನ್ಹಯ್ಯಕುಮಾರನಂತ ಯುವ ಪ್ರತಿಭೆಯನ್ನು ಆರಂಭದಲ್ಲೇ ನಿರುತ್ಸಾಹಗೊಳಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಪ್ರಗತಿಪರತೆ ಎಂದರೆ ನಾಸ್ತಿಕವಾದ ಮತ್ತು ಎಡಪಂಥದ ಸಿದ್ಧಾಂತ ಎನ್ನುವ ಸಿಮೀತ ಗ್ರಹಿಕೆಯಲ್ಲೇ ಕಳೆದು ಹೋಗಿರುವ ಕಮ್ಯುನಿಸ್ಟರು ಮತ್ತು ಬುದ್ದಿಜೀವಿಗಳು ಈ ನೆಲದ ಮಹಾರಾಷ್ಟ್ರದಲ್ಲಿ ಹುಟ್ಟಿದ ಭಕ್ತಿಪಂಥದ ಪ್ರಗತಿಪರ ವಾರ್ಕಾರಿ ಪರಂಪರೆ ಮತ್ತು ಕರ್ನಾಕಟದಲ್ಲಿ ಹುಟ್ಟಿದ ಲಿಂಗಾಯತ ಉದಾರವಾದಿ ವಚನ ಚಳುವಳಿಯನ್ನು ಬಳಸಿಕೊಂಡು ಆಯಾ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಸ್ಥಳೀಯರನ್ನು ಆಕರ್ಶಿಸಲು ಸೋತದಷ್ಟೇ ಅಲ್ಲದೆ ಬಂಗಾಳದಲ್ಲೂ ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ.
ನಾಸ್ತಿಕವಾದವೇ ಪ್ರಗತಿಪರ ಚಳುವಳಿಯ ಮೂಲ ಧಾತು ಎಂಬ ಓಬಿರಾಯನ ಕಾಲದ ಸಲವಕು ಸಿದ್ಧಾಂತವನ್ನು ಪ್ರತಿಪಾದಿಸುವ ಉದಾರವಾದಿಗಳು ಸಮಯಾಸಮಯಕ್ಕೆ ಬಲಪಂಥಿರಂತೆ ಹೊಂದಾಣಿಕೆ ಮಾಡಿಕೊಳ್ಳದೆ ಮತ್ತು ಸೂಕ್ತವಾದ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು ಜನರೊಂದಿಗೆ ಬೆರೆತು ತಮ್ಮ ಸಿದ್ಧಾಂತಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳದೆ ಹೋದರೆ ಮುಂದೊಂದು ದಿನ ಬಲಪಂಥಿಯ ಸನಾತನಿಗಳು ಈ ದೇಶದ ಬಹುಜನರನ್ನು, ಬಹುತ್ವ ಸಂಸ್ಕ್ರತಿಯನ್ನು, ಸಂವಿಧಾನವನ್ನು, ಜನತಂತ್ರ ವ್ಯವಸ್ಥೆಯನ್ನ ನುಂಗಿ ನೀರು ಕುಡಿಯುವ ದಿನಗಳು ದೂರವಿಲ್ಲ. ಈ ಸಂಭಾವ್ಯ ದುರ್ದಿನಗಳಿಗೆ ಮುಖ್ಯ ಕಾರಣ ಪ್ರಗತಿಪರರ ಒಣ ಸಿದ್ಧಾಂತ, ಪರಸ್ಪರ ಕಿತ್ತಾಟ, ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಾರದ ಅಸೂಕ್ಷ್ಮತೆ, ಮತ್ತು ಯುವಜನತೆಯ ಅಪೇಕ್ಷೆಗಳ ಮಟ್ಟಕ್ಕೆ ಇಳಿದು ಸ್ಪಂದಿಸಲಾಗದ ದುರ್ಬಲತೆಗಳೇ ಕಾರಣವಾಗುವುದರಲ್ಲಿ ಸಂಶಯವಿಲ್ಲ.









