• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸುಗ್ಗಿ ಹಬ್ಬಕ್ಕೆ ಸಂತಸದ ಸುದ್ದಿ ಕೊಟ್ಟ “ಛೂಮಂತರ್” ಚಿತ್ರತಂಡ

ಪ್ರತಿಧ್ವನಿ by ಪ್ರತಿಧ್ವನಿ
January 14, 2025
in Top Story, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಶರಣ್ ಅಭಿನಯದ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ

ADVERTISEMENT

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ”‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರ ಕಳೆದ ಜನವರಿ 10ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಸಕ್ಸಸ್ ಮೀಟ್ ನಲ್ಲಿ ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.ಪತ್ರಿಕಾಗೋಷ್ಠಿಗೂ ಮುನ್ನ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಲಾಯಿತು. ನಿರ್ಮಾಪಕ ಯೋಗಿ ದ್ವಾರಕೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Sankranthi Celebration ::ಅದ್ಧೂರಿ ಸಂಕ್ರಾಂತಿ ಸುಗ್ಗಿ-ಹುಗ್ಗಿ ​.. #pratidhvani

ಸಾಕಷ್ಟು ಅಡತಡೆಗಳ ನಡುವೆ ಬಿಡುಗಡೆಯಾದ ನಮ್ಮ ಚಿತ್ರಕ್ಕೆ ಜನರು ನೀಡುತ್ತಿರುವ ಬೆಂಬಲಕ್ಕೆ ಮನತುಂಬಿ ಬಂದಿದೆ. ಈ ಯಶಸ್ಸಿಗೆ ಕಾರಣರಾದ ಚಿತ್ರತಂಡದ ಸದಸ್ಯರಿಗೆ, ಸ್ನೇಹಿತರ ಬಳಗಕ್ಕೆ ಹಾಗೂ ವಿಶೇಷವಾಗಿ ನಿರಂಜನ್ ಮತ್ತು ವೆಂಕಟೇಶ್ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ತರುಣ್ ಶಿವಪ್ಪ.

ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಆದರೆ ಧೈರ್ಯ ಮಾಡಿ ನಮ್ಮ ಚಿತ್ರವನ್ನು ನಿರ್ಮಾಪಕರು ಬಿಡುಗಡೆ ಮಾಡಿದರು‌. ಚಿತ್ರ ಬಿಡುಗಡೆ ಅಷ್ಟು ಸುಲಭವಾಗಿರಲಿಲ್ಲ‌. ಅಂತು ಇಂತು ಸಾಕಷ್ಟು ಶ್ರಮಪಟ್ಟು ಬಿಡುಗಡೆ ಮಾಡಲಾಯಿತು. ಬಿಡುಗಡೆ ನಂತರ ಏನಾಗಬಹುದು? ಎಂಬ ಆತಂಕವಿತ್ತು. ಉತ್ತಮ ಕಂಟೆಂಟ್ ವುಳ್ಳ ಚಿತ್ರಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಮತ್ತೊಮ್ಮೆ ಸಾಬೀತಾಯಿತು. ಚಿತ್ರತಂಡದ ಸದಸ್ಯರು ನನ್ನ ಬಗ್ಗೆ ಆಡಿದ ಮಾತುಗಳಿಗೆ ಮನ ತುಂಬಿ ಬಂತು ಎಂದು ನಾಯಕ ಶರಣ್ ತಿಳಿಸಿದರು.

ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ತರುಣ್ ಶಿವಪ್ಪ ನನ್ನ ಮೇಲೆ ನಂಬಿಕೆಯಿಟ್ಟು ಚಿತ್ರ ಶುರು ಮಾಡಿದರು. ಶರಣ್ ಸೇರಿದಂತೆ ಎಲ್ಲಾ ಕಲಾವಿದರು ಕಥೆ ಮೆಚ್ಚಿಕೊಂಡು ನಟಿಸಲು ಒಪ್ಪಿಕೊಂಡರು. ಚಿತ್ರತಂಡದ ಸದಸ್ಯರು ಸಾಥ್ ನೀಡಿದರು. ಕೊನೆಗೆ ನಮ್ಮ ಚಿತ್ರವನ್ನು ನಾಡಿನ ಜನರು ಒಪ್ಪಿಕೊಂಡರು. ಶುಕ್ರವಾರ ಮಧ್ಯಾಹ್ನದ ನಂತರ ನಮ್ಮ ಚಿತ್ರದ ಬುಕ್ಕಿಂಗ್ ಗಣನೀಯಾಗಿ ಏರಿಕೆಯಾಯಿತು. ಅದನ್ನು ನೋಡಿ ಬಹಳ ಖುಷಿಯಾಯಿತು. ಇದಕ್ಕೆ ಹಿರಿಯ ನಟರಾದ ವಿಷ್ಣುವರ್ಧನ್, ದ್ವಾರಕೀಶ್ ಹಾಗೂ ದೇವರ ಆಶೀರ್ವಾದವೇ ಕಾರಣ. ಕನ್ನಡ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನವನೀತ್.

ಇಂದು ನನ್ನ ಹುಟ್ಟುಹಬ್ಬ. ಇದು ನನ್ನ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬ. ಏಕೆಂದರೆ ನನಗೆ ಗೆಲುವಿನ ಉಡುಗೊರೆ ಸಿಕ್ಕಿದೆ ಎಂದರು ನಟಿ ಅದಿತಿ ಪ್ರಭುದೇವ.

ಈ ಚಿತ್ರದ ಹಿಂದಿನ ಇವೆಂಟ್ ಗಳಲ್ಲೂ ನಾನು ಚಿತ್ರ ಗೆದ್ದೆ ಗೆಲ್ಲುತ್ತದೆ ಎಂದು ಹೇಳುತ್ತಿದ್ದೆ. ಅದು ನಿಜವಾಗಿದೆ. ನನ್ನ ಪಾತ್ರಕ್ಕೆ ಜನರು ನೀಡುತ್ತಿರುವ ಪ್ರಶಂಸೆಗೆ ಸಂತಸವಾಗಿದೆ ಎಂದು ಮೇಘನಾ ಗಾಂವ್ಕರ್ ಹೇಳಿದರು.

ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಎಲ್ಲರೂ ಕುಟುಂಬ ಸಮೇತರಾಗಿ ಬಂದು ನೋಡಿ ಎಂದು ನಟ ಪ್ರಭು ಮುಂಡ್ಕರ್ ತಿಳಿಸಿದರು.

ಹನ್ನೆರಡು ವರ್ಷಗಳ ನಂತರ ನಾನು ಅಭಿನಯಿಸಿರುವ ಚಿತ್ರಕ್ಕೆ ಜನರು ನೀಡುತ್ತಿರುವ ಪ್ರೋತ್ಸಾಹಕ್ಕೆ ಖುಷಿಯಾಗಿದೆ ಎಂದರು ಗುರುಕಿರಣ್. ಸಂಗೀತ ನಿರ್ದೇಶಕ ಅವಿನಾಶ್ ಬಸತ್ಕೂರ್ ಸಹ ಯಶಸ್ಸಿನ ಬಗ್ಗೆ ಮಾತನಾಡಿದರು. .

Tags: Avinash basatkurChoomantharDwarakishgurukiranKannada moviekarvaMeghana GoankarNavneethsharanTarun ShivappaTarun ShudheerVishnuvardhanYogi Dwarkish
Previous Post

ನಿಮಗೊಂದು ಸಿಹಿಸುದ್ದಿ ಮೋಷನ್ ಪೋಸ್ಟರ್ ಲಾಂಚ್..!!

Next Post

ಹಿತ ನೀಡುವ “ಅಪಾಯವಿದೆ ಎಚ್ಚರಿಕೆ” ಚಿತ್ರದ ಚುರುಕು ನೋಟವೇ ಲವ್ ಸಾಂಗ್.

Related Posts

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ
ಸಿನಿಮಾ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

by ಪ್ರತಿಧ್ವನಿ
April 12, 2026
0

ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆಯಾಗಿ ಗುರುತಿಸಿಕೊಂಡಿದ್ದ ಹಿರಿಯ ಗಾಯಕಿ ಆಶಾ ಭೋ (92) ಅವರು ವಿಧಿವಶರಾಗಿದ್ದಾರೆ. ಹೃದಯ ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಶನಿವಾರ...

Read moreDetails
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
Next Post

ಹಿತ ನೀಡುವ "ಅಪಾಯವಿದೆ ಎಚ್ಚರಿಕೆ" ಚಿತ್ರದ ಚುರುಕು ನೋಟವೇ ಲವ್ ಸಾಂಗ್.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada