ಕುಕಿ ಬುಡಕಟ್ಟು ( kuki tribe ) ಸಮುದಾಯಕ್ಕೆ ಸೇರಿದ ಇಬ್ಬರು ಮಣಿಪುರಿ ( manipuri ) ಮಹಿಳೆಯರನ್ನು ( women ) ನಗ್ನವಾಗಿ ( naked ) ಮೆರವಣಿಗೆ ಮಾಡಿದ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯ ನೀಡಿರುವ ವಿಚಾರಕ್ಕೆ ಸಂಬಂಧ ಪಟ್ಟಂತೆ, ಈ ಆಘಾತಕಾರಿ ವೀಡಿಯೋ ( video ) ಎಲ್ಲೇಡೆ ಹರಿದಾಡಿದ್ದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ( supreme court ) ಇಂದು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ.
ಇನ್ನು ಈ ವೀಡಿಯೋ ಆತಂಕಕ್ಕೆ ಕಾರಣವಾಗಿದೆ ಒಂದು ವೇಳೆ ಈ ವಿಚಾರದಲ್ಲಿ ಸರ್ಕಾರ ಕ್ರಮಕೈಗೊಳ್ಳದೇ ಇದ್ದರೆ, ನ್ಯಾಯಾಲಯವೇ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ( D Y chandrachud ) ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ.
“ಈ ಘಟನೆ ಸ್ವೀಕಾರಾರ್ಹ ಅಲ್ಲ. ಧರ್ಮಗಳ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮುಖವಾಗಿ ಮಹಿಳೆಯರನ್ನು ಸಾಧನವಾಗಿ ಬಳಸಲಾಗುತ್ತಿದೆ. ಇದು ಸಂವಿಧಾನದ ನಿಂದನೆಯಾಗಿದ್ದು, ಈ ವೀಡಿಯೋಗಳು ಭೀತಿಗೆ ಕಾರಣವಾಗುತ್ತಿದೆ,” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿಕೆ ನೀಡಿದ್ದಾರೆ

ಇನ್ನೊಂದು ಮಹತ್ವದ ಬೆಳವಣಿಗೆ ಅಂದರೆ, ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯರನ್ನ ಅಮಾನುಷವಾಗಿ ನಡೆಸಿಕೊಂಡಿದ್ದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಯಾವೆಲ್ಲ ನಡೆಗಳನ್ನ ಅನುಸರಿಸಿದೆ, ಈ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡಿರುವ ಪೀಠ ಪ್ರತಿಕ್ರಿಯೆ ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿಪಡಿಸಲಾಗಿದೆ
ಒಟ್ಟಾರೆಯಾಗಿ ಮಾನವ ಕುಲ ತಲೆತಗ್ಗಿಸುವಂತಹ ಹೀನಾ ಘಟನೆ ನಡೆದಿದ್ದು, ಸರ್ಕಾರಗಳ ದುರಾಢಳಿತದಿಂದಾಗಿ ಇದೀಗ ನ್ಯಾಯಾಲಯವೇ ಈ ಪ್ರಕರಣವನ್ನ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು ಸಂಸ್ತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.