ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಪತ್ನಿಯನ್ನ ಕೊಂದು ಅಪಘಾತದ ನಾಟಕವಾಡಿದ್ದ ಪತಿಯ ಬಣ್ಣ ಬಯಲಾಗಿದೆ. ಬಾಗಲೂರಿನ ಮಿಟ್ಟಗಾನಹಳ್ಳಿಯ 64 ವರ್ಷದ ಅನಂತ್ ಎಂಬಾತ ಪತ್ನಿ ಗಾಯತ್ರಿಯನ್ನ ಕೊಲೆ ಮಾಡಿ ನಾಟಕವಾಡಿ ಸಿಕ್ಕಿಬಿದ್ದಿರೋ ಪತಿ.
ಯಲಹಂಕದ ಬೊಮ್ಮಸಂದ್ರದ ಬಳಿ ವಾಸವಿದ್ದ ದಂಪತಿ ಮಧ್ಯೆ ಆಗಾಗ ಜಗಳ ಆಗ್ತಿತ್ತು. ನಿನ್ನೆ ಸಂಜೆ ಮಿಟ್ಟಗಾನಹಳ್ಳಿ ಬಳಿಯ ಸೈಟ್ ನೋಡಲು ಪತ್ನಿಯನ್ನ ಕರೆದೊಯ್ದಿದ್ದ ಪತಿ ಅನಂತ್, ಸೈಟ್ ಬಳಿ ಪತ್ನಿಯ ತಲೆ ಮೇಲೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆ ಬಳಿಕ ಅಪಘಾತ ಅಂತ ಅಂಬುಲೆನ್ಸ್ ಗೆ ಪೋನ್ ಮಾಡಿ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದ.
ಘಟನೆ ಬಗ್ಗೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಗೆ ಅಪಘಾತದ ವರದಿ ಬಂದಿತ್ತು. ಈ ಕುರಿತು ಪರಿಶೀಲನೆ ಚಿಕ್ಕಜಾಲ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಪರಿಶೀಲನೆ ವೇಳೆ ಗಾಯತ್ರಿ ಸಾವು ಅಪಘಾತದಿಂದ ಆಗಿದ್ದಲ್ಲ ಕೊಲೆ ಎಂಬುದು ಗೊತ್ತಾಗಿದೆ.
ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಪೊಲೀಸರು ಪತಿ ಅನಂತ್ ಪೊಲೀಸರ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.









