ರಾಮನಗರ ಜಿಲ್ಲೆಯ (Ramnagar district) ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ (Central government) ತಿರಸ್ಕರಿಸಿದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna byregowda) ಪ್ರತಿಕ್ರಿಯಿಸಿದ್ದು ಜಿಲ್ಲೆಯ ಹೆಸರು ಬದಲಾವಣೆಯ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ನಮ್ಮ ರಾಜ್ಯದ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಿಲ್ಲ.ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Bengaluru south) ಎಂದು ಬದಲಾಯಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಆದ್ರೆ ಡಿಕೆಶಿ ಹಾಗೂ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದರೇ, ಆಸ್ತಿಗಳ ಬೆಲೆ ಹೆಚ್ಚಾಗುತ್ತೆ. ಜಿಲ್ಲೆಗೂ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಸಿಗುತ್ತೆ ಎಂದು ಡಿಸಿಎಂ ಡಿಕೆಶಿ ಲೆಕ್ಕಾಚಾರ ಹಾಕಿದ್ದರು.
ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಕಾರಣದಿಂದ ರಾಮನಗರವನ್ನು ದಕ್ಷಿಣ ಬೆಂಗಳೂರು ಎಂದು ಅಭಿವೃದ್ಧಿ ಮಾಡಿದ್ರೆ ಅಲ್ಲಿಗೂ ಕೂಡ ಕೈಗಾರಿಕೆ, ಹೂಡಿಕೆಗಳು ಬರುತ್ತೆ ಎಂದು ಕೂಡ ಲೆಕ್ಕಾಚಾರವಿತ್ತು.ಆದರೇ, ಡಿಕೆಶಿ ಲೆಕ್ಕಾಚಾರದಂತೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ.