ರಾಜ್ಯದಲ್ಲಿ ನೂತನ ಸರ್ಕಾರ ಬಂದಿದೆ, ಈಗಾಗ್ಲೆ ಹೊಸ ಅಧಿಕಾರಿಗಳ ನೇಮಕ ಪ್ರಕೃಯೆ ಸೇರಿದ ಹಾಗೆ ಕಾರ್ಯಾಂಗದಲ್ಲಿ ಹೊಸ ಬದಲಾವಣೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುನ್ನುಡಿಯನ್ನ ಬರೆದಿದೆ.
ಇದು ಪ್ರತಿ ಬಾರಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಾಡುವ ಸಹಜವಾದ ಪ್ರಕ್ರಿಯೆಗಳು, ಆದ್ರೆ ಈ ಪ್ರಕ್ರಿಯೆಗಳಿಗೆ ಒಂದಷ್ಟು ಸಮಯವಕಾಶವನ್ನ ತೆಗೆದುಕೊಳ್ಳುವ ಕೆಲಸವನ್ನ ಕೆಲವೊಂದು ಸರ್ಕಾರಗಳು ಮಾಡುತ್ತವೆ. ಆದ್ರೆ ಈ ಬಾರಿ ಕಾಂಗ್ರೆಸ್ ಈ ಎಲ್ಲಾ ಪ್ರಕ್ರಿಯೆಗಳಿಗೆ ಚುರುಕು ನೀಡುವ ಮೂಲಕ ಬಿಜೆಪಿಗೆ ಶಾಕ್ ನೀಡಿದೆ.

ಹೌದು.. ಈ ಹಿಂದಿನ ಸರ್ಕಾರ ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೆ ಒಳಪಡುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಂದಿನ ಹಣ ಬಿಡುಗಡೆ ಹಾಗು ಪಾವತಿಗಳನ್ನ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಆದೇಶವನ್ನು ಹೊರಡಿಸಿದೆ

ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಕಾಮಗಾರಿಗಳಿಗೆ ಹಾಗೂ ಹಳೆ ಯೋಜನೆಗಳಿಗೆ ಸಂಪೂರ್ಣ ತಡೆ ಹಿಡಿದಂತಾಗುತ್ತದೆ. ಇದೀಗ ಸೋಲಿನ ರುಚಿ ಕಂಡಿರುವ ಬಿಜೆಪಿಗೆ ಮತ್ತೊಂದು ಬಹುದೊಡ್ಡ ಆಘಾತವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದೆ











