ಹೆಚ್ಚಾಗಿ ನಾವೂ ಹಣ್ಣುಗಳನ್ನು ತಿಂದು ಅದರ ಸಿಪ್ಪೆಯನ್ನ ಎಸೆಯುತ್ತೀವಿ.. ಆದರೆ ಹಣ್ಣಿಗಿಂತ ಸಿಪ್ಪೆಯಲ್ಲಿ ದೇಹಕ್ಕೆ ಬೇಕಾದಂತಹ ಸಾಕಷ್ಟು ಪೊಟ್ಯಾಸಿಯಮ್, ಮೆಗ್ನೀಸಿಯಮ್,ಖನಿಜಾಂಶಗಳು ಸಿಪ್ಪೆಯಿಂದ ದೊರೆಯುತ್ತದೆ..ಇದರಿಂದ ಆರೋಗ್ಯ ಸಮಸ್ಯೆಗಳಯ ದೂರವಾಗುತ್ತವೆ..
ಕಿತ್ತಳೆ ಹಣ್ಣಿನ ಸಿಪ್ಪೆ(Orange peel)
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಹಾಕಿಡಿ,ಇದನ್ನು ವಾರಕ್ಕೆ ಒಮ್ಮೆ ಒಂದು ಟಿ ಸ್ಪೂನ್ (One Tea Spoon) ಅಷ್ಟು ಕಿತಳೆ ಪುಡಿ ಹಾಗೂ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ, ಇದರಿಂದ ಮುಖದಲ್ಲಿರುವ ಮೊಡವೆಗಳನ್ನು ಶಮನ ಮಾಡುತ್ತದೆ, ಪಿಗ್‌ಮೆಂಟೇಶನ್ ಕಡಿಮೆಯಾಗುತ್ತದೆ, ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ ಮತ್ತು ಹೊಳೆಯುವ ತ್ವಜೆ ನಿಮ್ಮದಾಗುತ್ತದೆ.ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್ ಸಿ ಅಂಶ ದೊರಕುತ್ತದೆ..ಹಾಗೂ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಕಲ್ಲಂಗಡಿ (Watermelon)
ಬೇಸಿಗೆಯಲ್ಲಿ ಈ ಹಣ್ಣು ಸಿಗುತ್ತದೆ.. ಜನ ಹಣ್ಣನ್ನು ಸೇವಿಸಿ ತೊಗಟೆಯನ್ನು ಬಿಸಾಡುತ್ತಾರೆ.. ಆದರೆ ಹಣ್ಣಿಗಿಂತ ತೊಗಟೆಯಲ್ಲಿ ದೇಹಕ್ಕೆ ಬೇಕಾದಷ್ಟು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ ಮತ್ತು ಸಿ (Vitamin A & C) ಅನ್ನು ಹೊಂದಿರುತ್ತದೆ.. ನಮ್ಮ ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆದು ಹಾಕುತ್ತದೆ.. ಹಾಗೂ ಜೀರ್ಣಕ್ರಿಯೆಗೆ ಉತ್ತಮ ಮದ್ದು.
ದಾಳಿಂಬೆ(Pomegranate)
ಇವು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಅಂಶವನ್ನು ಹೆಚ್ಚು ಹೊಂದಿದೆ.ಹಾಗೂ ದೇಹದಲ್ಲಿರು ಬೇಡದ ಮತ್ತು ವಿಷಕಾರಿ ಅಂಶವನ್ನು ತೆಗೆದು ಹಾಕುತ್ತದೆ..ಮುಖ್ಯವಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಗಂಟಲು ನೋವನ್ನು ನಿವಾರಣೆ ಮಾಡುತ್ತದೆ..ದಾಳಿಂಬೆ ಸಿಪ್ಪೆಯನ್ನು ರುಬ್ಬಿ ನಂತ್ರ ಒಂದು ಲೋಟ ನೀರಿನೊಂದಿಗೆ ಬೆರೆಸಿ ಗಾರ್ಗಲ್ ಮಾಡಿ,ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಈ ಮೇಲ್ಕಂಡ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ..