
ಮಹಾರಾಷ್ಟ್ರ :ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದ್ರೆ ಭಾರೀ ಅಚ್ಚುಮೆಚ್ಚು. ಆದ್ರೆ ಈಗಿನ ಬಂಗಾರದ ರೇಟ್ ಕೇಳಿದ್ರೆ, ಕೊಂಡುಕೊಳ್ಳೋದಿರಲಿ, ಆ ಬ್ಯಾಗೇಕ್ ಯೋಚನೆ ಮಾಡಿದು ಕಷ್ಟ ಬಿಡಿ.ಒಂದು ಗ್ರಾಂ ಚಿನ್ನಕ್ಕೆ ಬರೋಬ್ಬರಿ 6 ಸಾವಿರಕ್ಕೂ ಹೆಚ್ಚು ಬೆಲೆಯಿದೆ.
ಆದ್ರೆ 1959 ರಲ್ಲಿ ಒಂದು ತೊಲ ಬಂಗಾರದ ರೇಟ್ ಎಷ್ಟಿತ್ತು ಗೊತ್ತಾ ?!
ಹೀಗೆ ನೆಟ್ಟಿಗರೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹಿಂದಿನ ಹಳೆಯ ಚಿನ್ನದ ಬಿಲ್ ಒಂದನ್ನ ಅಪ್ಲೋಡ್ ಮಾಡಿ, ಆಗ ಒಂದು ತೊಲ ಚಿನ್ನದ ಬೆಲೆ ಎಷ್ಟಿತ್ತು ನೋಡಿ ಎಂದು ಬರೆದುಕೊಂಡಿದ್ದಾರೆ. ಈ ಬಿಲ್ ಪ್ರಕಾರ 1959 ರಲ್ಲಿ ಒಂದು ತೊಲ ಅಂದ್ರೆ 11.66 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಮಾತ್ರ.
ಇದನ್ನುಕ್ ಕಂಡ ಜನ, ಅಯ್ಯೋ ದೇವ್ರೆ 113 ರೂಪಾಯಿಗೆ ಒಂದು ತೊಲ ಚಿನ್ನ ಬರ್ತಿತ್ತಾ. ಈಗ ನೋಡಿದ್ರೆ ಆ ಮೊತ್ತಕ್ಕೆ ಸರಿಯಾಗಿ ಒಂದು ದೊಡ್ಡ ಚಾಕೊಲೇಟ್ ಕೂಡ ಬರೋದಿಲ್ಲವಲ್ಲ ಅಂತ ಬೇಸರದ ಜೊತೆಗೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ.