
ಈ ಹಿಂದೆ ಕಲಿವೀರ, ಕನ್ನಡದೇಶದೊಳ್ ಚಿತ್ರ ಮಾಡಿದ ನಿರ್ದೇಶಕ ಅವಿರಾಮ್ ಕಂಠೀರವ ಮತೊಮ್ಮೆ ವಿಬ್ಬಿನ್ನ ಕಥೆ ಹಂದರ ಹೊಂದಿರುವ ಕರಳೆ ಎಂಬ ಚಿತ್ರವನ್ನು ನಿರ್ದೇಶನ ಮಾಡಲು ಹೊರಟ್ಟಿದಾರೆ,
ಇದು ನೈಜ ಘಟನೆ ಆಧಾರಿತ ಚಿತ್ರ ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣ ಸಜ್ಜಾಗಿದೆ.

ಇದು ಮಹಿಳಾ ಪ್ರದಾನ ಚಿತ್ರವಾಗಿದ್ದು ಇತ್ತೀಚಿಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಗೊಳಿಸಿದೆ ಪೋಸ್ಟರ್ ಏಲ್ಲಾಕಡೆ ಬಾರಿ ಮೆಚ್ಚುಗೆ ಗಳಿಸಿದೆ, ಸಮಾಜದ ವಾಸ್ತವ ಅಂಶಗಳನ್ನೇ ಇಲ್ಲಿ ಚಿತ್ರೀಸಲಾಗುತಿದೆ, ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ ಎಂದು ನಿರ್ದೇಶಕರ ಮಾತು

ಈಗಾಗಲೇ ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನೆಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ, ಚೈನೀಸ್ ಭಾಷೆಯಲ್ಲಿ ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನೆಡೆಸುತ್ತಿದ್ದಾರೆ, ಎರಡು ದೇಶಗಳಲ್ಲಿ ನೆಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಚೈನೀಸ್ ಭಾಷೆಯಲ್ಲಿ
ಸಿನಿಮಾ ನಿರ್ಮಿಸುತ್ತಿದ್ದೇವೆ,
ಭಾರತದ ಪ್ರಮುಖ ಭಾಷೆ ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೈನಾದ ಚೈನೀಸ್ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ ಕರಳೆ ಚಿತ್ರಕ್ಕಿದೆ. ಡಾರ್ಕ್ ಶೇಡ್ ನಲ್ಲಿ ಮೇಕಿಂಗ್ ಮಾಡಲಾಗುತಿದೆ, ಈಗಾಗಲೇ 52 ದಿನಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ ಇನ್ನು 20 ದಿನಗಳ ಶೋಟಿಂಗ್ ಬಾಕಿಯಿದೆ, ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡುತೇವೆ ಎಂದು ಚಿತ್ರತಂಡ ಹೇಳುತಿದೆ.
