ತಮಿಳುನಾಡಿನಲ್ಲಿ ಒಂದೇ ದಿನ ಮಹಾನ್ ದುರಂತಕ್ಕೆ ಸಾಕ್ಷಿಯಾಗುವ ಸಂದರ್ಭ ಎದುರಾಗಿತ್ತು. ತಮಿಳುನಾಡಿನ ತಿರುಚಿ ಏರ್‌ಪೋರ್ಟ್‌ನಿಂದ ದುಬೈನಾ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಸಂಜೆ 5.45ರ ಸುಮಾರಿಗೆ ಟೇಕ್ ಆಫ್ ಆದ ಬಳಿಕ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 141 ಜನರನ್ನು ಹೊತ್ತು ಸಾಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡ ಬಳಿಕ ಸುಮಾರು 3 ಗಂಟೆಗಳ ಕಾಲ ತಿರುಚಿ ಏರ್‌ಪೋರ್ಟ್ ಮೇಲೆಯೇ ಸುತ್ತಾಡಿತ್ತು.
20ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಏರ್‌ಪೋರ್ಟ್ ಬಳಿ ಸಿದ್ಧ ಮಾಡಲಾಯ್ತು. 18 ಅಗ್ನಿಶಾಮಕ ವಾಹನಗಳನ್ನು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಕೊಳ್ಳಲಾಯ್ತು. ಮತ್ತೊಂದು ಕಡೆ ವಿಮಾನ ಅಪಘಾತಕ್ಕೆ ಒಲಗಾದರು ಹೆಚ್ಚಿನ ಹಾನಿಯಾಗದಂತೆ ಆಕಾಶದಲ್ಲೇ ಸುತ್ತುವ ಮೂಲಕ ಎಲ್ಲಾ ಇಂಧನ ಖಾಲಿ ಮಾಡುವ ನಿರ್ಧಾರ ಮಾಡಲಾಯ್ತು. ತಿರುಚಿಗೆ ಬರುವ ವಿಮಾನಗಳನ್ನು ತಡೆದು AXB613 ಬೋಯಿಂಗ್ 737ನಲ್ಲಿ ವಿಮಾನ ಗಸ್ತು ತಿರುವಂತೆ ಮಾಡಲಾಯ್ತು. ಅಂತಿಮವಾಗಿ ಹೈಡ್ರೋಲಿಕ್ ಗೇರ್ ಸಮಸ್ಯೆಯನ್ನು ಸರಿ ಮಾಡುವ ಯತ್ನವೂ ಜೊತೆ ಜೊತೆಗೆ ನಡೀತಿತ್ತು. ಬಳಿಕ ಪೈಲಟ್ ಎದೆಗುಂದದೆ ವಿಮಾನವನ್ನ ಲ್ಯಾಂಡ್ ಮಾಡುವ ನಿರ್ಧಾರಕ್ಕೆ ಬಂದು ಯಶಸ್ಸು ಸಾಧಿಸಿದ್ರು.
ಏರ್ ಇಂಡಿಯಾ ವಿಮಾನದಲ್ಲಿ ಬರೋಬ್ಬರಿ 141 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ATC ( Air Traffic Control ) ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ವಿಮಾನದ ಪೈಲಟ್ ಬೆಲ್ಲಿ ಲ್ಯಾಂಡಿಂಗ್ ಮಾಡುವುದಕ್ಕೆ ಪರ್ಮಿಷನ್ ಕೊಡಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಆದ ಚಮತ್ಕಾರ ಎನ್ನುವಂತೆ ಬೆಲ್ಲಿ ಡ್ಯಾನ್ಸ್ ಬದಲಿಗೆ ಸಾಮಾನ್ಯ ಲ್ಯಾಂಡಿಂಗ್ ಮಾಡುವುದಕ್ಕೆ ಪೈಲಟ್ ಯಶಸ್ವಿ ಆಗಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ. ಆತಂರಿಕ ತನಿಖೆಗೆ ಕೇಂದ್ರ ಸರ್ಕಾರ ಆದೇಶ ಮಾಡಿದೆ.
ಸಂಜೆ 5.45ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ ರಾತ್ರಿ 8.15ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಮೂಲಕ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಎದುರಾಗಿದ್ದ ಆತಂಕ ನಿವಾರಣೆ ಆಗಿದೆ. ಇನ್ನು ಬೆಲ್ಲಿ ಲ್ಯಾಂಡಿಂಗ್ ಮಾಡಲು ನಿರ್ಧಾರ ಮಾಡಿದ್ದ ಕಾರಣಕ್ಕೆ ಫೈರ್ ಎಂಜಿನ್ ಹಾಗು ಆಂಬ್ಯುಲೆನ್ಸ್‌ಗಳನ್ನು ಮೊಕ್ಕಾಂ ಮಾಡಲಾಗಿತ್ತು. ತಮಿಳುನಾಡು ಸರ್ಕಾರ ತುರ್ತು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿತ್ತು. ಸಿಎಂ ಎಂ.ಕೆ ಸ್ಟಾಲಿನ್ ತುರ್ತು ಸಭೆ ನಡೆಸಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಡಲಾಗಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗದಂತೆ ಸಾಮಾನ್ಯ ಲ್ಯಾಂಡಿಂಗ್ ಮಾಡಿದ್ದು ನೂರಾರು ಜನರ ಮೊಗದಲ್ಲಿ ಸಂತಸ ಮನೆ ಮಾಡುವಂತೆ ಆಯ್ತು.