• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ ; ಮಾಜಿ ಸಿಎಂ ಕುಮಾರಸ್ವಾಮಿ

Any Mind by Any Mind
July 6, 2023
in ರಾಜಕೀಯ
0
ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ ; ಮಾಜಿ ಸಿಎಂ ಕುಮಾರಸ್ವಾಮಿ
Share on WhatsAppShare on FacebookShare on Telegram

ಬೆಂಗಳೂರು: ನಾನು ಯಾವುದಾದರೂ ವರ್ಗಾವಣೆ ವಿಷಯದಲ್ಲಿ ಭಾಗಿಯಾದ ದಾಖಲಾತಿ ನೀಡಿದರೆ ರಾಜಕೀಯ ನಿವೃತ್ತಿ ಆಗುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ADVERTISEMENT

ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಈ ಸರಕಾರ ದಿನದ 24 ಗಂಟೆಯೂ ವರ್ಗಾವಣೆ ದಂಧೆಯನ್ನೇ ನಡೆಸುತ್ತಿದೆ. ಅಭಿವೃದ್ಧಿ ಬದಲು ನಗದು ಅಭಿವೃದ್ಧಿಯಲ್ಲಿ ತೊಡಗಿದೆ. ಇದನ್ನು ಹೇಳಿದರೆ ನಮ್ಮ ಮೇಲೆಯೇ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನನ್ನಲ್ಲಿ ಈ ಸರಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗಳಿಗೆ ಸಂಬಂಧಿಸಿ ನನ್ನಲ್ಲಿ ದಾಖಲೆಗಳಿವೆ. ಅದರಲ್ಲಿ ಯಾರಿಗೂ ಅನುಮಾನ ಬೇಡ. ಅದನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ಮಾಡುತ್ತೇನೆ. ಯಾವಾಗ, ಎಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ, ಅವರು ಎಂದಾದರೂ ದಾಖಲೆ ಬಿಡುಗಡೆ ಮಾಡಿದ್ದರಾ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.

ಅವರು ಎಂದೂ ದಾಖಲೆ ಇಟ್ಟು ಮಾತನಾಡಿದನ್ನು ನಾನು ನೋಡಲೇ ಇಲ್ಲ. ಇದ್ದರೆ ತೋರಿಸಲಿ. ಬಹುಮತದ ಸರಕಾರ ತಂದುಕೊಂಡು ಈ ದಂಧೆಯಲ್ಲಿ ತೊಡಗಿದ್ದಾರೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಮೈಸೂರಿನಲ್ಲಿ ವರ್ಗಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಮನೆಯಲ್ಲಿ ಸಿಎಂ ಪುತ್ರ ಮಲಗಿರುವ ಸಂದರ್ಭದಲ್ಲಿ ಇಷ್ಟಾಗಿದೆ. ಇನ್ನೂ ಹೊರಗೆ ಬಂದರೆ ಏನಾಗಬಹುದು ಎಂದು ಜನ ಕೇಳುತ್ತಿದ್ದಾರೆ. ನಾನು ದ್ವೇಷದ ರಾಜಕೀಯ ಮಾಡ್ತಿಲ್ಲ, ವಿರೋಧ ಪಕ್ಷದ ಸದಸ್ಯನಾಗಿ ನನ್ನ ಕೆಲಸ ಮಾಡ್ತಿದ್ದೇನೆ. ಸತ್ಯ ಹೇಳುವುದೇ ತಪ್ಪಾ? ಎಂದು ಮಾಜಿ ಮುಖ್ಯಮಂತ್ರಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ನಾನು ಓಡಿ ಹೋಗಲ್ಲ, ದಾಖಲೆ ಬಿಟ್ಟೇ ಬಿಡುತ್ತೇನೆ:

ಪೈನ್ ಡ್ರೈವ್ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು; ನಾನು ಹೆದರಿ ಓಡಿ ಹೋಗುವ ವ್ಯಕ್ತಿ ಅಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಕಾಂಗ್ರೆಸ್ ನಾಯಕರು ಏನು ಮಾತಾಡ್ತಾರೆಂದು ನೋಡೋಣ. ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು ಅಂತ ಅವರು ಹೇಳಲಿ. ಆಮೇಲೆ ದಾಖಲೆ ಹೊರ ಬಿಡುತ್ತೇನೆ ಎಂದರು.

Tags: #CMSiddaramaiahdkshivkumarHDKHdKumaraswamyJantha dalJDS
Previous Post

ತೆರೆಗೆ ಬರಲು ಸಿದ್ಧವಾಗಿದೆ ರಾಮ್ ದೀಪ್ ನಿರ್ದೇಶನದ “ಡೈಮಂಡ್ ಕ್ರಾಸ್ ” ಚಿತ್ರ

Next Post

ಕಿಚ್ಚನಿಗೆ ವೃತ್ತಿ ಬದುಕಿನಲ್ಲಿ ಇವತ್ತು ಸ್ಪೆಷಲ್‌ ಡೇ, ಅಭಿಮಾನಿಗಳ ಸೆಲಬ್ರೇಷನ್‌

Related Posts

ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
Top Story

ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

by ಪ್ರತಿಧ್ವನಿ
August 19, 2026
0

ಬೆಂಗಳೂರು: ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಸಂಬಂಧ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ...

Read moreDetails
ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

August 19, 2026
ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

August 19, 2026
ನಂಬಿಕಸ್ಥ ಗೆಳೆಯನನ್ನು ಕಳೆದುಕೊಂಡಿದ್ದೇನೆ: ಬಿ.ಸಿ ನಾಗೇಶ್ ನೆನೆದು ಬಸವರಾಜ ಬೊಮ್ಮಾಯಿ ಭಾವುಕ

ನಂಬಿಕಸ್ಥ ಗೆಳೆಯನನ್ನು ಕಳೆದುಕೊಂಡಿದ್ದೇನೆ: ಬಿ.ಸಿ ನಾಗೇಶ್ ನೆನೆದು ಬಸವರಾಜ ಬೊಮ್ಮಾಯಿ ಭಾವುಕ

August 19, 2026
ನಕಲಿ ಪಿಂಚಣಿದಾರರಿಗೆ ಸರ್ಕಾರದ ಬಿಗ್‌ ಶಾಕ್: ರಾಜ್ಯದಲ್ಲಿ 18 ಲಕ್ಷ ಖಾತೆಗಳು ಸ್ಥಗಿತ

ನಕಲಿ ಪಿಂಚಣಿದಾರರಿಗೆ ಸರ್ಕಾರದ ಬಿಗ್‌ ಶಾಕ್: ರಾಜ್ಯದಲ್ಲಿ 18 ಲಕ್ಷ ಖಾತೆಗಳು ಸ್ಥಗಿತ

August 19, 2026
Next Post
ಕಿಚ್ಚನಿಗೆ ವೃತ್ತಿ ಬದುಕಿನಲ್ಲಿ ಇವತ್ತು ಸ್ಪೆಷಲ್‌ ಡೇ, ಅಭಿಮಾನಿಗಳ ಸೆಲಬ್ರೇಷನ್‌

ಕಿಚ್ಚನಿಗೆ ವೃತ್ತಿ ಬದುಕಿನಲ್ಲಿ ಇವತ್ತು ಸ್ಪೆಷಲ್‌ ಡೇ, ಅಭಿಮಾನಿಗಳ ಸೆಲಬ್ರೇಷನ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada