ಕರೋನಾದ ಮತ್ತೊಂದು ರೂಪಾಂತರವು ಶೀಘ್ರದಲ್ಲೇ ಬರಬಹುದು, ಈ ರೂಪಾಂತರವು ಓಮಿಕ್ರಾನ್‌ಗಿಂತ ವೇಗವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಭಿಪ್ರಾಯ ಪಟ್ಟಿದೆ.
ಹೌದು,ಸಂಶೋಧಕರ ಪ್ರಕಾರ, ಓಮಿಕ್ರಾನ್ ಕರೋನದ ಕೊನೆಯ ರೂಪಾಂತರವಲ್ಲ ಎಂದಾದರೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ಪ್ರಕಾರ, ಕರೋನ ಮತ್ತೊಂದು ರೂಪಾಂತರ ಬರಬಹುದು ಅದು ಓಮಿಕ್ರಾನ್ ಗಿಂತ ವೇಗವಾಗಿ ಹರಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಆತಂಕ ಹುಟ್ಟುಹಾಕಿದೆ. ಓಮಿಕ್ರಾನ್ ರೂಪಾಂತರಗಳನ್ನು ಹೊಂದಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ವಾರ ವಿಶ್ವಾದ್ಯಂತ 2.1 ಮಿಲಿಯನ್ ಕರೋನಾ ಪ್ರಕರಣಗಳು ದಾಖಲಾಗಿವೆ ಎಂದು WHO ಗುರುವಾರ ತಿಳಿಸಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯಿಂದಾಗಿ, ಕೋವಿಡ್ ಮೂರನೇ ಅಲೆಯ ತೀವ್ರತೆಯನ್ನು ಅಂದಾಜು ಮಾಡಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು.
ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಮಾರಿಯಾ ವ್ಯಾನ್ ಕೆರ್ಖೋವ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓಮಿಕ್ರಾನ್ ನಿಂದಾಗಿ ಕರೋನಾ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ರೂಪಾಂತರವು ಹಿಂದಿನ ರೂಪಾಂತರಗಳಂತೆ ಅಪಾಯಕಾರಿ ಅಲ್ಲ. ಆದರೆ ಮುಂದಿನ ಕೆಲವು ದಿನಗಳಲ್ಲಿ, ಓಮಿಕ್ರಾನ್ ಗಿಂತ ಹೆಚ್ಚು ಶಕ್ತಿಶಾಲಿ ರೂಪಾಂತರಗಳು ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಮುಂದುವರೆದು, ‘ಹೊಸ ರೂಪಾಂತರಿ ಹೇಗೆ ವರ್ತಿಸುತ್ತವೆ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ. ಹೊಸ ರೂಪಾಂತರವು ಹೆಚ್ಚು ಅಪಾಯಕಾರಿಯಾಗಿದೆಯೇ? ಸಾವಿನ ಸಂಖ್ಯೆ ಹೆಚ್ಚಲಿದೆಯೇ? ಅದು ಓಮಿಕ್ರಾನ್‌ಗಿಂತ ಕಡಿಮೆ ಅಪಾಯಕಾರಿಯೇ? ಇಂತಹ ಅನೇಕ ಪ್ರಶ್ನೆಗಳು ಜಗತ್ತನ್ನು ಕಾಡುತ್ತಿವೆ. ಆದರೆ ಕರೋನಾ ಏಕಾಏಕಿ ಕಾಲಾನಂತರದಲ್ಲಿ ದುರ್ಬಲಗೊಳ್ಳುವುದಿಲ್ಲ ಎಂಬುದನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು. ಜನರು ಮೈಮರೆಯಬಾರದು, ಮುಂದೆ ಬರುವ ರೂಪಾಂತರಿ ಕಡಿಮೆ ಪ್ರಮಾಣದ್ದು ಎಂಬ ಭ್ರಮೆಯಲ್ಲಿ ಯಾರು ಇರಬಾರದು ಎಂದು ಎಚ್ಚರಿಸಿದ್ದಾರೆ.