ಐದು ವರ್ಷಗಳ ಹಿಂದೆ.. ಅಂದ್ರೆ 2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushanth singh rajaput) ಆತ್ಮಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇತ್ತ ಬಾಲಿವುಡ್‌ನಲ್ಲಿ (Bollywood) ಕೂಡ ತೀವ್ರ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದ ಸುಶಾಂತ್ ಸಾವು ಭಾರೀ ಚರ್ಚೆ ಮತ್ತು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಈ ಸಂಧರ್ಭದಲ್ಲಿ ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಎಂಬ ಅನುಮಾನ ಮತ್ತು ಆರೋಪವಿತ್ತು. ಹೀಗಾಗಿ ಈ ಕೇಸ್‌ನ ಬೆನ್ನುಬಿದ್ದ ಸಿಬಿಐ (CBI) ನಾಲ್ಕು ವರ್ಷ ತನಿಖೆ ನಡೆಸಿ ಈಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದೆ.

ಈ ಕೇಸ್ ನಲ್ಲಿ ಇದ್ದ ಅನುಮಾನಗಳ ಪ್ರಕಾರ ಸುಶಾಂತ್ ಸಿಂಗ್ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಸಿಬಿಐ ತನ್ನ ವರದಿಯಲ್ಲಿ ಹೇಳಿದೆ. ನಟ ಸುಶಾಂತ್ ಸಿಂಗ್ ಸಾವಿಗೆ ಇತರರು ಪ್ರಚೋದನೆ ನೀಡಿರುವ ಬಗ್ಗೆಯಾಗಲೀ ಅಥವಾ ಒತ್ತಡ ಹಾಕಿರುವ ಬಗ್ಗೆಯಾಗಲಿ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ಹೇಳಿದೆ.

ಇನ್ನುಳಿದಂತೆ ಸುಶಾಂತ್ ಸಿಂಗ್ ವ್ಯಾಟ್ಸಾಪ್ ಸಂದೇಶ, ಮೆಸೇಜ್, ಫೋನ್ ಕಾಲ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ಕೂಡ ಸಿಬಿಐ ಪರೀಕ್ಷಿಸಿದೆ. ಆದ್ರೆ ಈ ವರದಿಯಲ್ಲೂ ಯಾವುದೇ ಮೆಸೇಜ್ ಡಿಲೀಟ್ ಅಥವಾ ಎಡಿಟ್ ಮಾಡಿರೋದು ತಿಳಿದುಬಂದಿಲ್ಲ ಅಂತ ಸಿಬಿಐ ಕೋರ್ಟ್‌ಗೆ ವರದಿ ಸಲ್ಲಿಸಿದೆ.