ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಆಗಿದೆ. ಆದರೆ ಮೇ 1 ರಂದು ಕೊಲೆ ನಡೆದಿದ್ದು, ಮಾರ್ಚ್ 31, 2025ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಫಿಕ್ಸ್ ಆಗಿತ್ತು ಮುಹೂರ್ತ ಎನ್ನುವುದು ಇದೀಗ ಬೆಳೆಕಿದೆ ಬಂದಿದೆ. ಮಾರ್ಚ್ ಅಂತ್ಯದಲ್ಲೇ ಸುಹಾಸ್ ಶೆಟ್ಟಿ ತಲೆ ಉರುಳಿಸಲು ಹಂತಕರು ಪ್ಲಾನ್ ಮಾಡಿದ್ದರು. ಸುಹಾಸ್ ಶೆಟ್ಟಿ ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಫಿಕ್ಸ್ ಪೋಸ್ಟ್ ಹಾಕಿದ್ದರು ಹಂತಕರು, ಟಾರ್ಗೆಟ್ ಫಿಕ್ಸ್ ಮಾಡಿ ಸ್ವತಃ ಸುಹಾಸ್ ಶೆಟ್ಟಿಗೆ ಟ್ಯಾಗ್ ಮಾಡಿತ್ತು ಹಂತಕರ ಟೀಂ. ಆಗಲೇ ಟ್ಯಾಗ್ ಮಾಡಿದ್ದ ವಿಡಿಯೋ ಡೌನ್ ಲೋಡ್ ಮಾಡಿಕೊಂಡಿದ್ದ ಸುಹಾಸ್ ಶೆಟ್ಟಿ. ಟಾರ್ಗೆಟ್ ಕಿಲ್ಲರ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಸುಹಾಸ್ ಶೆಟ್ಟಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿತ್ತು.
2022ರ ಜುಲೈ 28ರಂದು ಸುರತ್ಕಲ್ನಲ್ಲಿ ಕೊಲೆಯಾದ ಫಾಜಿಲ್ ಫೋಟೋ ಜೊತೆಗೆ ಸುಹಾಸ್ ಶೆಟ್ಟಿ ಫೋಟೊ ಹಾಕಿ ಟಾರ್ಗೆಟ್ ದಿನಾಂಕ ನಿಗದಿ ಮಾಡಿದ್ದರು. ರಿವೇಂಜ್ ಸೂನ್ ಎಂದು ಸುಹಾಸ್ ಶೆಟ್ಟಿ ಫೋಟೋ ಹಾಕಿ ಪೋಸ್ಟ್ ಮಾಡಿದ್ದರು. ಮಂಗಳೂರಿನಲ್ಲಿ 2018ರ ಜನವರಿ 3ರಂದು ನಡೆದಿದ್ದ ಬಶೀರ್ ಹತ್ಯೆ ಆರೋಪಿ ರಿವೇಂಜ್ ಬಗ್ಗೆಯೂ ಪೋಸ್ಟ್ ಮಾಡಲಾಗಿತ್ತು. ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ ರಿವೇಂಜ್ ಸೂನ್ ಎಂದು ಪೋಸ್ಟ್ ಹಾಕಲಾಗಿತ್ತು. ಇದೀಗ ಫಾಜಿಲ್ ಹತ್ಯೆ ಪ್ರಕರಣದ ಆರೋಪಿ ಸುಹಾಸ್ ಹತ್ಯೆ ಮಾಡಿದ್ದಾರೆ ಹಂತಕರು.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಳಕೆ ಆಗಿದ್ದ ಮೂರು ವಾಹನಗಳ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಸುಹಾಸ್ ಶೆಟ್ಟಿಗೆ ಸೇರಿದ ಇನ್ನೋವಾ ಕಾರ್, ಕೊಲೆಗೆ ಆರೋಪಿಗಳು ಬಳಸಿದ ಸ್ವಿಫ್ಟ್ ಕಾರ್, ಮೀನು ಸಾಗಾಟದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರಿನನಲ್ಲಿ ಮಾರಕಾಸ್ತ್ರಗಳು ಪತ್ತೆ ಆಗಿವೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಸಿಸಿಟಿವಿ ಫೂಟೆಜ್ ವಶಕ್ಕೆ ಪಡೆದಿದ್ದೇವೆ, ಕೆಲವು ಆರೋಪಿಗಳ ಮುಖಗಳನ್ನು ಕೂಡ ಪತ್ತೆ ಮಾಡಿದ್ದೇವೆ ಎಂದು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ. ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ ಅನ್ನುವ ಬಗ್ಗೆ ನಾನು ಈಗಲೇ ಹೇಳಲ್ಲ. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿದೆ. ಆರೋಪಿಗಳು ಯಾರೇ ಇದ್ರು ಬಂಧಿಸುತ್ತೇವೆ. ಜನರು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಬಗ್ಗೆ ಪೋಸ್ಟ್ ಹಾಕಿದ್ದ ವಿಚಾರವಾಗಿ, ನಾವು ಎಲ್ಲಾ ಪೋಸ್ಟ್ಗಳನ್ನೂ ಗಮನಿಸಿದ್ದೇವೆ. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ ಅನುಪಮ್ ಅಗರವಾಲ್.

ಎ.ಜೆ.ಆಸ್ಪತ್ರೆ ಶವಾಗಾರದ ಬಳಿ ಎಡಿಜಿಪಿ ಆರ್.ಹಿತೇಂದ್ರ ಮಾತನಾಡಿ, ಶವ ಪರೀಕ್ಷೆ ಮುಗಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು. ಮೆರವಣಿಗೆ ಅವಕಾಶ ಕೇಳಿಲ್ಲ, ಒಂದು ವೇಳೆ ಮನವಿ ಮಾಡಿದ್ರೆ ಸ್ಥಳೀಯ ಪೊಲೀಸರು ನಿರ್ಧಾರ ಮಾಡ್ತಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಮಾಹಿತಿ ಸಂಗ್ರಹಿಸಿದ್ದೇವೆ. ಆರೋಪಿಗಳು ಯಾರು ಅಂತ ನಮಗೆ ಗೊತ್ತಾಗಿದೆ. ತಂಡ ರಚನೆ ಮಾಡಿ ವಶಕ್ಕೆ ಪಡೆಯುವ ಕೆಲಸ ಆಗ್ತಿದೆ. ಐವರು ಎಸ್ಪಿಗಳ ಸಹಿತ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ವದಂತಿಗೆ ಕಿವಿ ಕೊಡಬೇಡಿ ಎಂದಿರುವ ಎಡಿಜಿಪಿ, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಮಾರ್ಚ್ ಅಂತ್ಯಕ್ಕೇ ಫಿಕ್ಸ್ ಆಗಿತ್ತು ಮುಹೂರ್ತ.. ಫೇಸ್ಬುಕ್ನಲ್ಲಿ ಆಗಿತ್ತು ಸ್ಕೆಚ್ ಪೋಸ್ಟ್