
ತನ್ನ ಬ್ಲಾಕ್ ಮೇಲ್ ದಂಧೆ ಬಯಲಿಗೆ ಬರುತಿದ್ದಂತೆಯೇ ಇಬ್ಬರು ಸಹಚರರ ಜತೆ ಮನೆಯಿಂದ ಲ್ಯಾಪ್ ಟಾಪ್ ಹಾಗೂ ಕಾರಿನಲ್ಲಿ ಹೊರಟ ಟಿವಿ ನಿರೂಪಕಿ ದಿವ್ಯಾ ವಸಂತ ಈವರೆಗೂ ಪೋಲೀಸರಿಗೆ ಸಿಕ್ಕಿಲ್ಲ.
ಈಕೆಯ ಲ್ಯಾಪ್ ಟಾಪ್ ನಲ್ಲಿ ನೂರಾರು ವೀಡಿಯೋಗಳಿದ್ದು ಅವುಗಳನ್ನು ಬಳಸಿಯೇ ವೈದ್ಯರು, ಪಬ್ , ಮಸಾಜ್ ಸೆಂಟರ್ ಗಳ ಮಾಲೀಕರನ್ನು ಬ್ಲಾಕ್ ಮೇಲ್ ಮಾಡಲಾಗುತಿತ್ತು ಎಂದು ಪೋಲೀಸರು ಶಂಕಿಸಿದ್ದಾರೆ. ಮೊದಲು ಸಾಮಾನ್ಯ ಟವಿ ನಿರೂಪಕಿ ಆಗಿದ್ದ ದಿವ್ಯಾ ನಂತರ ರಾಜ್ ನ್ಯೂಸ್ ಮುಖ್ಯಸ್ಥ ಎನ್ನಲಾದ ವೆಂಕಟೇಶ್ ಸಂಪರ್ಕಕ್ಕೆ ಬಂದಳು.

ನಂತರ ಇಬ್ಬರೂ ಒಂದಾಗಿ ಶುರುವಿಟ್ಟುಕೊಂಡದ್ದೇ ಬ್ಲಾಕ್‌ಮೇಲ್ ದಂಧೆ. ಕನ್ನಡದಲ್ಲಿ ಪ್ರಮುಖ 5-6 ಚಾನೆಲ್ ಬಿಟ್ಟರೆ ಮಿಕ್ಕ ಎಲ್ಲಾ ಚಾನೆಲ್ ಗಳೂ ನಡೆಯುತ್ತಿರೋದೇ ಕಷ್ಟದಲ್ಲಿ. ಇಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಸರಿಯಾಗಿ ಸಂಬಳ ಸಿಗೋದು ಸಂಶಯವೇ. ಜಾಹೀರಾತು ಆದಾಯ ಗಳಿಕೆಯೂ ಏನೇನೂ ಇಲ್ಲ. ಇಂತಾ ಸಂದರ್ಭದಲ್ಲಿ ಬ್ಲಾಕ್ ಮೇಲ್ ಮಾಡಿದರೆ ಬೇಗನೆ ಹಣಗಳಿಸಬಹುದೆನ್ನುವ ದುರಾಶೆಗೆ ಬಲಿಬಿದ್ದ ದಿವ್ಯಾ ತನ್ನ ಸಹೋದಹ ಸಂದೇಶ್ ನನ್ನೂ ತನ್ನ ಜತೆ ಸೇರಿಸಿಕೊಂಡಳು. ಜತೆಗೆ ಅವನ ಮೂರು ನಾಲ್ಕು ಐನಾತಿ ಮಿತ್ರರೂ ಸೇರಿಕೊಂಡರು.
ಬೆಂಗಳೂರಿನಲ್ಲಿ ದಿನಕ್ಕೆ ಲಕ್ಷಗಟ್ಟಲೆ ಆದಾಯ ಇರುವ ಮಸಾಜ್ ಸೆಂಟರ್ ಗಳು , ಶ್ರೀಮಂತ ಉದ್ಯಮಿಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡತೊಡಗಿತು. ಜತೆಗೇ ಏನೂ ಮಾಡಿಲ್ಲದೆಯೂ ಗೌರವಕ್ಕೆ ಅಂಜಿ ಜನರೂ 20, 50 ಸಾವಿರ ಕೊಡತೊಡಗಿದರು. ಮಸಾಜ್ ಸೆಂಟರ್ ಮಾಲೀಕರಂತೂ ಟಿವಿಯಲ್ಲಿ ಬಂಧರೆ ಕೆಟ್ಟ ಹೆಸರು ಬರುತ್ತೆ ಎಂದು ಹೆದರಿ ಹಣ ನೀಡಿದರು. ಆದರೆ ಸುಲಭ ಹಣದ ರುಚಿ ಕಂಡಿದ್ದ ಈ ಗ್ಯಾಂಗ್ ತಿಂಗಳಿಗೆ ನಮಗೆ ಇಷ್ಟು ಕೊಟ್ಟು ಬಿಡಿ ಎಂದು ಮಂತ್ಲಿ ಹಫ್ತಾ ಫಿಕ್ಸ್ ಮಾಡತೊಡಗಿತು.

ಪೋಲೀಸರ ಪ್ರಕಾರ ಈಗಾಗಲೇ ಈ ಗ್ಯಾಂಗ್ ನೂರರಿಂದ ಇನ್ನೂರು ಜನರ ಬಳಿ ಬೆದರಿಕೆ ಹಾಕಿಯೇ ಹಣ ವಸೂಲಿ ಮಾಡಿಕೊಂಡಿದೆ. ನಿರೂಪಕಿ ದಿವ್ಯಾ ಪ್ರಾಮಾಣಿಕವಾಗಿ ದುಡಿದಿದ್ದರೂ ತನ್ನ ಪ್ರತಿಭೆಯಿಂದಲೇ ತಿಂಗಳಿಗೆ 40-50 ಸಾವಿರ ಗಳಇಸುವುದು ಕಷ್ಟವೇನಾಗಿರಲಿಲ್ಲ. ಆದರೆ ಈಕೆ ಐಷಾರಾಮಿ ಬದುಕಿನ ಚಟಕ್ಕೆ ಬಲಿ ಬಿದ್ದಿದ್ದಳು. ಈಕೆಯ ಒಂದೇ ಗುರಿ ಎಂದರೆ ಕೋಟಿಗಟ್ಟಲೆ ಹಣ ಸಂಪಾದಿಸಬೇಕೆನ್ನುವುದು ಮಾತ್ರಾ ಆಗಿತ್ತು. ಅದಕ್ಕಾಗಿ ಆಯ್ಕೆ ಮಾಡಿಕೊಂಡದ್ದು ದುರ್ಮಾರ್ಗ ಆಗಿದ್ದರೂ ಮುಂದೊಂದು ದಿನ ಇಂತಹ ಗತಿ ಬರುತ್ತೆ ಎಂದು ಕನಸಿನಲ್ಲೂ ಈ ಗ್ಯಾಂಗ್ ಊಹಿಸಿರಲಿಲ್ಲ. ಏಕೆಂದರೆ ಬ್ಲಾಕ್ ಮೇಲ್ ಮಾಡಿದರೆ ಜನ ಹಣ ಕೊಡುತ್ತಾರೆ ಅಥವಾ ನಿರಾಕರಿಸುತ್ತಾರೆ. ಅವರೂ ಉದ್ಯಮದಲ್ಲೇ ಇರುವುದರಿಂದ ಪೋಲೀಸ್ , ಕೋರ್ಟು ಎಂದು ಹೋಗುವುದಿಲ್ಲ ಎಂದೇ ಈ ಗ್ಯಾಂಗ್ ಧೃಢವಾಗಿ ನಂಬಿತ್ತು.
ತನ್ನ ಸಹಚರರೊಂದಿಗೆ ನಾಪತ್ತೆ ಆಗಿರುವ ದಿವ್ಯಾ ಬೆಂಗಳೂರಿನಲ್ಲೇ ಇರುವ ಸುಳಿವು ಪೋಲೀಸರಿಗೆ ಸಿಕ್ಕಿದೆ. ಆದರೆ ಈ ಗ್ಯಾಂಗ್ ಸಿಕ್ಕಿ ಬೀಳುವ ಭಯದಿಂದ ಮೊಬೈಲ್ ಬಳಸುತ್ತಿಲ್ಲ. ಇವರ ಬ್ಯಾಂಕ್ ಖಾತೆಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಪೋಲೀಸರು ನಿಗಾ ವಹಿಸಿದ್ದು ಹಣ ಡ್ರಾ ಮಾಡಿದರೆ ಗೊತ್ತಾಗಲಿದೆ.
ಈ ನಡುವೆ ದಿವ್ಯಾ ಹಾಗೂ ಆರೋಪಿ ರಾಜ್ ನ್ಯೂಸ್ ಮಾಜಿ ಮುಖ್ಯಸ್ಥ ವೆಂಕಟೇಶ್ ಜತೆಯಾಗಿ ಆತ್ಮೀಯವಾಗಿರುವ 6 ಸೆಕೆಂಡ್ ಗಳವೀಡಿಯೋ ನಿನ್ನೆಯಿಂದ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈಕೆ ಎಲ್ಲಿಯೇ ಅಡಗಿದ್ದರೂ , ಏನೇ ಬುದ್ದಿವಂತಿಕೆ ತೋರಿದರೂ ಹೆಚ್ಚೆಂದರೆ ಇನ್ನೆರಡು-ಮೂರು ದಿನ ಅಷ್ಟೇ. ಪೋಲೀಸರು ಹೆಡೆಮುರಿ ಕಟ್ಟುವುದು ನಿಶ್ಚಿತವಾಗಿದೆ.
