ವಿಜಯಪುರ: ಕಣ್ಣು ಹೊಡೆದು ಚುಡಾಯಿಸಿದ ಯುವಕನಿಗೆ (Physical Abuse) ಮಹಿಳೆಯೊಬ್ಬರು ಚಪ್ಪಲಿ ಏಟು ನೀಡಿದ್ದಾರೆ. ವಿಜಯಪುರನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.ಬಸ್‌ಗಾಗಿ ಕಾದು ನಿಂತಿದ್ದ ಮಹಿಳೆಗೆ ಕಣ್ಣು ಹೊಡೆದು ಸನ್ನೆ ಮಾಡಿದ್ದಾನೆ. ಮೊದಮೊದಲು ಮಹಿಳೆ ಇದನ್ನೂ ನಿರ್ಲಕ್ಷ್ಯ ಮಾಡಿದ್ದಾರೆ.ಆದರೆ ಯಾವಾಗ ಅಸಭ್ಯವಾಗಿ ವರ್ತನೆ ಮಾಡಲು ಶುರು ಮಾಡಿದ್ದನ್ನೋ ಸಿಟ್ಟಿಗೆದ್ದ ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು, ಯುವಕನಿಗೆ ಹೊಡೆದಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಸಹ ಪ್ರಯಾಣಿಕರು ಇದಕ್ಕೆ ಸಾಥ್ ನೀಡಿದ್ದಾರೆ.ಇತ್ತ ಚಪ್ಪಲಿ ಏಟು ತಿಂದ ಕಾಮುಕ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.ಮಹಿಳೆ ಹಾಗೂ ಯುವಕನ ಹೆಸರು ತಿಳಿದುಬಂದಿಲ್ಲ. ಸದ್ಯ ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.