• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ

ಪ್ರತಿಧ್ವನಿ by ಪ್ರತಿಧ್ವನಿ
November 12, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಆರೋಗ್ಯ ವಿಮೆ ವ್ಯಾಪ್ತಿಗೆ 500 ದಶಲಕ್ಷ ಜನರು; ಇದು ಜಗತ್ತಿನಲ್ಲಿಯೇ ದಾಖಲೆ ಎಂದ ಕೇಂದ್ರ ಸಚಿವ HD ಕುಮಾರಸ್ವಾಮಿ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜ್ ಘಟಿಕೋತ್ಸವ.

ADVERTISEMENT

ಬೆಂಗಳೂರು: ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಹುದೊಡ್ಡ ಕ್ರಾಂತಿ ಆಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ 14ನೇ ಬ್ಯಾಚ್ ನ (2023) ಘಟಿಕೋತ್ಸವದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು ಅವರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಂಡಿದೆ. ಶ್ರೀಸಾಮಾನ್ಯನಿಗೂ ಅತ್ಯಂತ ಸುಲಭ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಪ್ರಧಾನಿಗಳ ಸಾಮಾಜಿಕ ಕಾಳಜಿ ಹಾಗೂ ದೂರದೃಷ್ಟಿಯಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿ ಬೆಳೆದಿದ್ದು, ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಈಗ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಗುಣಮಟ್ಟದ ವೈದ್ಯ ಸೇವೆ ದೊರೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳು ಜಾರಿಗೆ ಬಂದಿವೆ. ಅದರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಒಂದು. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಆರೋಗ್ಯ ಸೇವಾ ಯೋಜನೆ. ದೇಶದ 500 ದಶಲಕ್ಷ ಜನರು ಆರೋಗ್ಯ ವಿಮೆ ವ್ಯಾಪ್ತಿಗೆ ಬಂದಿದ್ದಾರೆ. ಜತೆಗೆ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪಿಎಂ ಆತ್ಮನಿರ್ಭರ್ ಸ್ವಾಸ್ಥ ಭಾರತ್ ಯೋಜನೆ, ಡಿಜಿಟಲ್ ಆರೋಗ್ಯ ಮಿಷನ್, ಮಿಶನ್ ಇಂದ್ರಧನುಷ್, ಜನೌಷಧಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಅನೇಕ ಸರಿಸಾಟಿ ಇಲ್ಲದ ಕಾರ್ಯಕ್ರಮಗಳನ್ನು ಮೋದಿ ಸರ್ಕಾರ ಜಾರಿ ಮಾಡಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.

ವೈದ್ಯಕೀಯ ಕ್ಷೇತ್ರ ಅತ್ಯಂತ ಮಹತ್ವದ್ದು, ಶ್ರೇಷ್ಠವಾದದ್ದು ಆಗಿದ್ದು, ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯವನ್ನೇ ಅಲ್ಲ, ಇಡೀ ದೇಶದ ಆರೋಗ್ಯ ಕಾಪಾಡುತ್ತಾರೆ ಎಂದ ಅವರು; ಈ ದಿನ ವೈದ್ಯ ಪದವಿ ಪಡೆಯುತ್ತಿರುವ ಎಲ್ಲರೂ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಸಮಾಜಮುಖಿ ಸೇವೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.

ರಾಜರಾಜೇಶ್ವರಿ ವೈದ್ಯ ಕಾಲೇಜಿನ ಸಂಸ್ಥಾಪಕ ಕುಲಪತಿ ಡಾ.ಎ.ಸಿ.ಷಣ್ಮುಗಂ, ಕಾಲೇಜಿನ ಅಧ್ಯಕ್ಷ ಅರುಣ್ ಕುಮಾರ್, ಡೀನ್ ಡಾ.ಸತ್ಯಮೂರ್ತಿ, ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ ಮುಂತಾದವರು ಉಪಸ್ಥಿತರಿದ್ದರು.

ಇದೇ ಕೇಂದ್ರ ಸಚಿವರು ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಿಸಿ ಶುಭ ಕೋರಿದರು.

Tags: BJPCongress PartyH D KumaraswamyRaja Rajeshwari Collegeಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೋರ್ಟ್ ಗಳು ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿವೆ ?! ವಿವಾದಕ್ಕೆ ಕಾರಣವಾದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ !  

Next Post

ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಎಲ್ಲೆಲ್ಲಿ ನಡೀತು.. ಸಿಕ್ಕಿಬಿದ್ದವರು ಯಾರು..?

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
Next Post
ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಎಲ್ಲೆಲ್ಲಿ ನಡೀತು.. ಸಿಕ್ಕಿಬಿದ್ದವರು ಯಾರು..?

ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಎಲ್ಲೆಲ್ಲಿ ನಡೀತು.. ಸಿಕ್ಕಿಬಿದ್ದವರು ಯಾರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada