ಈ ಹಿಂದೆ ಮುಡಾ ಪ್ರಕರಣದಲ್ಲಿ (Muda case) ಪ್ರಾಸಿಕ್ಯೂಷನ್ (Prosecution) ಅನುಮತಿಯ ಬಗ್ಗೆ ಹೈಕೋರ್ಟ್ ನೀಡಿದ್ದ ತೀರ್ಪನ್ನು, ರಾಜಕೀಯವಾದ ತೀರ್ಪು ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Minister zameer ahemad khan) ನೀಡಿದ್ದ ಹೇಳಿಕೆ ತೀವ್ರ ಚರ್ಚೆ ಮತ್ತು ಟೀಕೆಗೆ ಗುರಿಯಾಗಿತ್ತು. ಈ ಬೆನ್ನಲ್ಲೇ ಈಗ ಯತೀಂದ್ರ ಸಿದ್ದರಾಮಯ್ಯ (Yatindra siddaramaiah) ಹೇಳಿಕೆ ಕೂಡ ಚರ್ಚೆಗೆ ಗ್ರಾಸವಾಗಿದೆ.
ಈಗೀಗ ಕೋರ್ಟ್ ಗಳೂ ಸಹ ಕೇಂದ್ರ ಸರ್ಕಾರದ (Central government) ಮಾತನ್ನು ಕೇಳುವ , ಕೇಂದ್ರ ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಕಾರ್ಯಕ್ರಮದಲ್ಲಿ ಮುಡಾ ಪ್ರಕರಣ ಕುರಿತು ಮಾತನಾಡಿದ ಯತೀಂದ್ರ, ನಾವು ತಪ್ಪು ಮಾಡಿಲ್ಲ, ನಮಗೆ ಯಾವುದೇ ತನಿಖೆಯ ಯಾವುದೇ ಭಯ ಇಲ್ಲ ಎಂದಿದ್ದಾರೆ.
ಒಂದೆಡೆ ಕೇಂದ್ರ ಸರ್ಕಾರ, ದೇಶದ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು (BJP & jds) ಕೂಡ ಭ್ರಷ್ಟಾಚಾರ ಮಾಡಿದ್ದಾರೆ. ಆದರೆ ಈ ಬಗ್ಗೆ ಹಲವಾರು ದೂರುಗಳಿದ್ರೂ ರಾಜ್ಯಪಾಲರು (Governor) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯತೀಂದ್ರ ಆರೋಪಿಸಿದ್ದಾರೆ.