ಕಳೆದ ತಿಂಗಳುಗಳ ಹಿಂದಷ್ಟೇ ಚನ್ನಪಟ್ಟಣ ರಾಜಕೀಯ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ್ದ ಚನ್ನಪಟ್ಟಣದ ಮಾಜಿ ಶಾಸಕ, ಹಾಲಿ ಪರಿಷತ್ ಸಮಸ್ಯೆ ಸಿಪಿ ಯೋಗೇಶ್ವರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಚನ್ನಪಟ್ಟಣದಲ್ಲಾಗುತ್ತಿರುವ ಭೂ ಅಕ್ರಮದ ಬಗ್ಗೆ ಧ್ವನಿ ಎತ್ತುವ ಮೂಲಕ ಸಿಪಿ ಯೋಗೇಶ್ವರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಈ ಕುರಿತು ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಮನವಿ ಮಾಡಿರುವ ಅವರ ಪತ್ರದಲ್ಲಿ, ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಚನ್ನಪಟ್ಟಣ ತಾಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು ಭೂಮಾಫಿಯಾದವರೋಡನೆ ಶಾಮೀಲಾಗಿ ವಿವಿಧ ಕಡೆ ಬೆಲೆಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆಮಾಡಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಬಂಧಿಸಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿರುತ್ತದೆ.
ಮುಂದುವರೆದು, ಅದುದರಿಂದ ಚನ್ನಪಟ್ಟಣ ತಾಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಸೇರಿ ನಡೆಸಿರುವ ಈ ಭೂ ಅಕ್ರಮದ ಹಗಲು ದರೋಡೆಯ ತನಿಖೆಯನ್ನು ಉನ್ನತ ಮಟ್ಟದ ಯನಿಖಾ ಸಂಸ್ಥೆಗೆ ವಹಿಸಿ ಬೆಲೆ ಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭುಮಿಯನ್ನು ಉಳಿಸುವುದರ ಜೊತೆಗೆ ತಪ್ಪಿತಸ್ತತನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕೋರುತ್ತೇನೆ ಎಂದು ಬರೆದಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಇದ್ದು, ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಕೊಡಬೇಕಿತ್ತು. ಆದರೆ 25 ಕೋಟಿ ಬೆಲೆಬಾಳುವ 23.10 ಎಕರೆ ಸರ್ಕಾರಿ ಗೋಮಾಳ ಜಾಗದ ನಕಲಿ ದಾಖಲೆ ಪತ್ರ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಾರಾಟ ಮಾಡಿದ್ದು ಈಗ ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸರ ಅತಿಥಿಯಾಗಿದ್ದಾರೆ.ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿ.ಎಂ ಭೇಟಿ ಮಾಡಿ ಮಾಜಿ ಸಚಿವರಾದ ಸಿ.ಪಿ ಯೋಗೇಶ್ವರ್ ಮನವಿ ಸಲ್ಲಿಸಿದ್ದಾರೆ.