ಬೆಂಗಳೂರು (Bengaluru): ರಾಜ್ಯ ಸರ್ಕಾರ 5, 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ಮಾಡುವ ನಿರ್ಧಾರವನ್ನು ಪ್ರಶ್ನಿಸಿದ್ದ ರುಪ್ಸಾಂ ಕರ್ನಾಟಕಕ್ಕೆ ಗೆಲುವು ಸಿಕ್ಕಿದೆ.
ಬೋರ್ಡ್ ಎಕ್ಸಾಂ ಮಾಡಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದು ಮಾಡಿದೆ. ಸುತ್ತೋಲೆ ರದ್ದುಗೊಳಿಸಿ ಕರ್ನಾಟಕ ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಮಾಡಿದೆ. ನ್ಯಾಯಮೂರ್ತಿ ರವಿ ಹೊಸಮನಿ ಆದೇಶ ನೀಡಿದ್ದಾರೆ.
ಡಿಸೆಂಬರ್ 2023ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ರುಪ್ಸಾ ಸಂಘಟನೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ಸರ್ಕಾರ ಹೊರಡಿಸಿದ್ದ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲ ಸುದರ್ಶನ್ ವಾದ ಮಂಡಿಸಿದ್ರು. ಈ ಆದೇಶದ ಮೂಲಕ ಬೋರ್ಡ್ ಎಕ್ಸಾಂಗೆ ತಡೆ ಸಿಕ್ಕಂತಾಗಿದೆ. ಕಳೆದ ಬಾರಿಯೂ ಕೂಡ ಇದೇ ರೀತಿ ಆಗಿತ್ತು. ಆದರೆ ಸುಪ್ರೀಂಕೋರ್ಟ್ನಲ್ಲಿ ತಡೆಯಾಜ್ಞೆ ತಂದು ಪರೀಕ್ಷೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನನೋದನ್ನು ಕಾದು ನೋಡಬೇಕು.
ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಶೇ. 65 ಶಿಕ್ಷಕರ ಕೊರತೆ ಇರುವಾಗ ಗುಣಾತ್ಮಕ ಶಿಕ್ಷಣ ನಿರೀಕ್ಷೆ ಮಾಡುವುದು ತಪ್ಪು. ಮೊದಲಿಗೆ ಶಿಕ್ಷಕರ ಕೊರತೆ ನೀಗಿಸಿ, ಉತ್ತಮ ಪಠ್ಯಪುಸ್ತಕ ಕೊಟ್ಟು ಆ ಬಳಿಕ ಗುಣಾತ್ಮಕ ಶಿಕ್ಷಣ ನಿರೀಕ್ಷೆ ಮಾಡಬೇಕು. ಯಾರು ಪಾಠ ಮಾಡಿರುತ್ತಾರೋ ಅವರೇ ಪ್ರಶ್ನೆ ಪತ್ರಿಕೆ ರೂಪಿಸಿ ಪರೀಕ್ಷೆ ಮಾಡಬೇಕು ಎನ್ನುವುದು CCE ನಿಯಮ. ಒಂದು ವೇಳೆ ನೀವು ಪರೀಕ್ಷೆ ಮಾನದಂಡ ಮಾಡಲು ಮುಂದಾದರೆ ಪರೀಕ್ಷೆ ಭಯದಿಂದ ಮಕ್ಕಳು ಶಾಲೆಗೆ ಬರುವುದಿಲ್ಲ ಎಂದು ಖಾಸಗಿ ಶಾಲಾ ಸಂಘಟನೆಗಳ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಇದು ರುಪ್ಸಾ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ.
#karnataka #Bengaluru #highcourt #boardexam #exam