ಅಣ್ಣಾ ಹಜಾರೆ ಎಂದು ಕರೆಯಲ್ಪಡುವ ಬಾಬುರಾವ್ ಹಜಾರೆ (ಜನನ 15 ಜೂನ್ 1937) ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಕೂಡ ಹೌದಂತೆ. ಅವರು ಮಹಾರಾಷ್ಟ್ರದ ರಾಲೇಗಾಂವ್ ಸಿದ್ಧಿ ಎಂಬ ಗ್ರಾಮವನ್ನು ಅಭಿವೃದ್ಧಿಪಡಿಸಿದರು ಎಂದೆಲ್ಲ ಪ್ರಚಾರ ಮಾಡಲಾಗಿದೆ. ಆದರೆ ಅಲ್ಲಿ ಅವಿರೋಧ ಆಯ್ಕೆ ಎಂಬ ವಿದ್ಯಮಾನಕ್ಕೆ ಕಾರಣರಾದ ಈ ಮನುಷ್ಯ ತುಳಿತಕ್ಕೆ ಒಳಗಾದವರ ಹಕ್ಕುಗಳನ್ನೇ ಕಿತ್ತುಕೊಂಡು ಬಿಟ್ಟರು.
2011 ರ ಭಾರತೀಯ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು ಎಂದು ಮಾಧ್ಯಮಗಳು ಗೀಚಿ ಬಿಟ್ಟಿವೆ. ಆದರೆ ಆ ಸಂದರ್ಭದಲ್ಲಿ ಅವರು ಬಿಜೆಪಿಯ ಏಜೆಂಟರಾಗಿದ್ದರು.
ಭ್ರಷ್ಟಾಚಾರ ಎಂದರೆ ಕೇವಲ ಹಣದ ವಹಿವಾಟು ಎಂದು ನಂಬಿರುವ ಮಧ್ಯಮ ಮಾತ್ತು ಮೇಲ್ ಮಧ್ಯಮ ವರ್ಗದ ಜನರೆಲ್ಲ ಈ ಹೋರಾಟಕ್ಕೆ ಸಾಥ್ ನೀಡಿದರು. ಅರವಿಂದ್ ಕೇಜ್ರಿವಾಲ್ ಟೀಮ್ ಇದರ ಲಾಭ ಪಡೆದು ದೆಹಲಿಯಲ್ಲಿ ಅಧಿಕಾರ ಪಡೆಯಿತು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ಅಣ್ಣಾ ಹಜಾರೆ ಎಂಬ ಬಿಜೆಪಿಯ ಎಜೆಂಟ್ ನೆರವು ನೀಡಿದ್ದರು. ಅಣ್ಣಾಗೆ ಬೆಂಬಲ ನೀಡಿದ್ದ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ಯುವ ಸಮುದಾಯ ಆಗಲೇ ಬಿಜೆಪಿಯ ಅಂಧ ಭಕ್ತರಾಗಿದ್ದರು. ಇದಕ್ಕೆ ಬಿಜೆಪಿಯ ಐಟಿ ಸೆಲ್ ತುಪ್ಪ ಸುರಿಯುತ್ತ ಬಂದಿತು.
ಈಗೆಲ್ಲಿ ಈ ಅಣ್ಣಾ ಹಜಾರೆ ಎಂಬ ವೇಷಧಾರಿ ಹೋರಾಟಗಾರ?
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಳಿ ಒಮ್ಮೆಯೂ ಸುಳಿಯದ ಈ ಮಹಾಶಯ. ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು, ಆದರೆ ಬಿಜೆಪಿ ಕಣ್ಸನ್ನೆ ಮಾಡಿದ ಕೂಡಲೇ ಪುಣೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೋದಿ ಸರ್ಕಾರ ತರುತ್ತಿರುವ ಮೂರು ಕೃಷಿ ಕಾಯ್ದೆಗಳು ರೈತರ ಪರ ಇವೆ ಎಂದು ಬೊಂಬಡಾ ಹೊಡೆದರು.
ಈ ಯಪ್ಪ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದವ್ರೆ.
ಏಪ್ರಿಲ್ 2011 ರಲ್ಲಿ, ಭ್ರಷ್ಟಾಚಾರದ ಮೇಲಿನ ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ನಂತರ ಸರ್ಕಾರ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿತು ಮತ್ತು ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.
ಆದರೆ, ಈಗಲೂ ಜನ್ ಲೋಕ್‌ಪಾಲ್ ಮಸೂದೆ ಜಾರಿಗೆ ಬಂದಿಲ್ಲ. ಅಣ್ಣಾ ಈ ಬಗ್ಗೆ ಮಾತೇ ಆಡ್ತಿಲ್ಲ!
ಕೇಜ್ರಿವಾಲ್ ಮತ್ತು ಇತರರು ಹೋರಾಡಿ ಜಾರಿಗೆ ತಂದಿರಿಸಿದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ನೇ ಮೋದಿ ಸರ್ಕಾರ ದುರ್ಬಲಗೊಳಿಸಿದೆ.
ಭ್ರಷ್ಟಾಚಾರ ಎಂದರೆ ಟೇಬಲ್ ಕೆಳಗೆ ಪಡೆಯುವ ರೊಕ್ಕದ ವ್ಯವಹಾರ ಮಾತ್ರವಲ್ಲ, ರಫೇಲ್‌ಗಳ ಖರೀದಿಯಲ್ಲಿ ನಡೆಯುವ ಕಿಕ್‌ಬ್ಯಾಕ್ ದಂಧೆಯಷ್ಟೇ ಅಲ್ಲ, ತೈಲ ಹಗರಣ, 3-ಜಿ, 4-ಜಿ ಹಗರಣಗಳಷ್ಟೇ ಅಲ್ಲ ಎಂಬ ಸತ್ಯ ಈ ಅಣ್ಣಾ ಸಾಹೇಬರಿಗೆ ಗೊತ್ತೇ ಇಲ್ಲವೇ? ಈ ದೇಶದ ಜನರನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆದು ಹಾಕುವುದು ಮಹಾನ್ ಪಾಪ ಮತ್ತು ಘೋರ ಭ್ರಷ್ಟಾಚಾರ ಎಂಬುದು ಈ ಜನರಿಗೆ ಗೊತ್ತೇ ಇಲ್ಲವೇ?
ಅವರನ್ನು ಫಾಲೋ ಮಾಡಿದ ಮಧ್ಯಮ ವರ್ಗ ಇವತ್ತು ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದೆ. ಆದರೆ ಈ ಮೂರ್ಖರು ಹುಂಬತನದಲ್ಲಿ ಮತ್ತೆ ಮೋದಿ ಅನ್ನುತ್ತಿದ್ದಾರೆ.
ಯುವ ಜನಾಂಗವೊಂದು ಖಾದಿ ಟೊಪ್ಪಿಗೆಯ ಮುದುಕನ ಬೆಂಬಲಕ್ಕೆ ನಿಂತಿದ್ದರ ಹಿಂದೆ ಬಿಜೆಪಿ ಅಥವಾ ಸಂಘ ಪರಿವಾರದ ಅಜೆಂಡಾ ಇತ್ತು ಅಲ್ಲವೇ?
ಈ ದೇಶದಲ್ಲಿ ರಾಮದೇವ್ ಎಂಬ ಕೊಳಕ ಸನ್ಯಾಸಿಯೂ ಹಿಂದೂತ್ವ ಎಂಬ ಅಮಲನ್ನು ಪ್ರಚಾರ ಮಾಡುತ್ತಾನೆ, ಅಣ್ಣಾ ಹಜಾರೆಯಂತಹ ಗೋಸುಂಬೆಗಳು ಹಿಂದೂತ್ವದ ಪರ ನಿಲ್ಲುತ್ತಾರೆ.
ದೆಹಲಿಯ ರೈತ ಹೋರಾಟ , ಮತ್ತು ನಮ್ಮದೇ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ವರ್ಷ ಕಾಲದಿಂದ ನಡೆಯುತ್ತಿರುವ ನೀರಾವರಿ ಹೋರಾಟ, ಗದಗ ಜಿಲ್ಲೆಯ ನರಗುಂದದಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಮಹದಾಯಿ ಹೋರಾಟಗಳು ಪ್ರಾಮಾಣಿಕತೆ ಉಳಿಸಿಕೊಂಡು ಹೋರಾಟಗಳಿಗೆ ಘನತೆ ತಂದಿವೆ.
ಆದರೆ, ಅಣ್ಣಾ ಎಲ್ಲೂ ಕಾಣುತ್ತಿಲ್ಲ. ಹೋರಾಟಗಳಿಗೇ ಮಸಿ ಬಳಿದ ಈ ಮಹಾಶಯ ಈಗ ಎಲ್ಲ ಮುಚ್ಚಿಕೊಂಡು ತೆಪ್ಪಗಿದ್ದಾರೆ. ಅದು ನಮ್ಮ ಪುಣ್ಯ!