
ತುಮಕೂರು: ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ ಎರಡು ಕೆಳ ಹಂತದ ಸೇತುವೆಗಳನ್ನ ಮಾಡ್ತಿದ್ದಿವಿ. ರಾಜ್ಯ ಸರ್ಕಾರದಿಂದ ಬಿಡಿಕಾಸು ಕೊಟ್ಟಿಲ್ಲ. ರೈಲ್ವೇ ಅಭಿವೃದ್ದಿ ಯೋಜನೆಗಳಿಗೆ ರಾಜ್ಯ-ಕೇಂದ್ರ ಸರ್ಕಾರಗಳಿಂದ ಶೇಕಡ 50 ರಷ್ಟು ಹಣ ಹೂಡಿಕೆ ಹಂಚಿಕೆಯಿತ್ತು. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲ್ಲ ಅನ್ನೋದನ್ನ ಅರ್ಥ ಮಾಡ್ಕೊಂಡು. ಬ್ರಿಡ್ಜ್ ಗಳ ನಿರ್ಮಾಣಕ್ಕೆ ನೂರಕ್ಕೆ ನೂರಷ್ಟು ಹಣ ಕೇಂದ್ರ ಸರ್ಕಾರ ನೀಡುತ್ತಿದೆ ಎಂದಿದ್ದಾರೆ.

ಸಿದ್ದಗಂಗಾ ಶ್ರೀಗಳ ಆರಾಧನ ಗುರುವಂದನಾ ಕಾರ್ಯಕ್ರಮಕ್ಕೆ ನಿತಿನ್ ಗಡ್ಕರಿಗೆ ಆಹ್ವಾನ ನೀಡಿದ್ದೇನೆ. ನಾವು ರೈಲು ಬಿಡಲು ಬಂದಿಲ್ಲ. ರೈಲನ್ನು ಟ್ರಾಕ್ ನಲ್ಲಿ ಓಡಿಸಲು ಬಂದಿದ್ದೇನೆ. ಬೆಂಗಳೂರಿನಲ್ಲಿದ್ದ ಭೂಸ್ವಾಧೀನಾಧಿಕಾರಿ ತುಮಕೂರಿಗೆ ಬಂದ್ರೆ, ರಾಜ ಬಂದಂಗೆ ಆಗ್ತಿತ್ತು. ರೈತರಿಗೆ ಹಣ ಕೊಡೊದ್ರಲ್ಲಿ ಹಲ್ಕಾ ಕೆಲಸ ಆಗ್ತಿತ್ತು. ಭೂಸ್ವಾಧೀನ ಕಚೇರಿ ತುಮಕೂರಿನಲ್ಲೇ ಪ್ರಾರಂಭವಾಗಿದೆ. ತುಮಕೂರು ಮೆಟ್ರೋಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಅದ್ಕೇನು ಮಾಡ್ಬೇಕು ಮಾಡ್ತಿದ್ದೆವೆ. ಸರ್ಕ್ಯೂಲರ್ ರೈಲು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. 287 ಕಿಲೋ ಮೀಟರ್ ವಿಸ್ತಿರ್ಣದ ಸರ್ಕ್ಯೂಲರ್ ರೈಲು ಜಾಲ ಮಾಡಲಾಗುತ್ತದೆ ಎಂದಿದ್ದಾರೆ.

ಮೆಮೋ ರೈಲನ್ನ ತುಮಕೂರಿನಿಂದ ಬೆಂಗಳೂರಿಗೆ ಮಾಡಿದ್ದೇವೆ. ಇದೀಗ ಮೈಸೂರಿಗೂ ವಿಸ್ತರಣೆ ಮಾಡಿದ್ವಿ. ಬೆಂಗಳೂರು- ತುಮಕೂರು – ಹಾಸನ- ಮೈಸೂರು ನಡುವೆ ನಮೋ ರ್ಯಾಪಿಡ್ ರೈಲು ತರಲು ಚಿಂತನೆ ಮಾಡಿದ್ದೇನೆ.. ತುಮಕೂರು ರೈಲ್ವೇ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡುವ ವಿಚಾರದ ಬಗ್ಗೆಯೂ ಮಾತನಾಡಿ, ಭಾರತ ಸರ್ಕಾರದ ಗೃಹ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಕಾಗದ ಬರೆದಿದ್ದೇವೆ.. ನಾನೇ ಸ್ವತಃ ನಾಲ್ಕೈದು ಬಾರಿ ಹೋಗಿದ್ದೇನೆ. ಯಾಕೋ ಏನೊ ಗೊತ್ತಿಲ್ಲ ಸಿದ್ದರಾಮಯ್ಯ ಅವರಿಗೆ ಅದಕ್ಕೆ ಸೈನ್ ಹಾಕ್ಬೇಕು ಅಂತ ಅನ್ನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತ ಪುಣ್ಯಾತ್ಮ ನಡೆದಾಡುವ ದೇವರ ಹೆಸರನ್ನ ರೈಲ್ವೆ ನಿಲ್ದಾಣಕ್ಕೆ ಇಡುತ್ತೇವೆ ಅಂದಾಗ , ಯಾರೋ ವೆಂಕ, ಸೀನ ಮಾತನಾಡ್ತಾರೆ. ನನಗೇನು ಲಾಸ್ ಇಲ್ಲ, ಭಗವಂತ ನೋಡ್ಕೊಳ್ತಾನೆ. ನಾಲ್ಕಾರು ಬಾರಿ ನಾನೇ ಹೋಗಿದ್ದೇನೆ, 95 ಕೋಟಿನಾ ಈಗಾಗ್ಲೇ ಅನುದಾನ ಬಿಡುಗಡೆ ಮಾಡಿದ್ದೀವಿ. ಟೆಂಡರ್ ಗೂ ಬಂದಿದೆ. ಪುಣ್ಯಾತ್ಮನ ಹೆಸರಿಡಲು ಐದಾರು ತಿಂಗಳು ತೆಗೆದುಕೊಂಡರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿ, ಫೈನಾನ್ಸ್ ಸೆಕ್ರೆಟರಿ ಜೊತೆಗೆ ಮಾತನಾಡಿ ಆಯ್ತು. ಇದಕ್ಕೆ ಮುಂದೊಂದು ದಿನ ಬೆಲೆ ತೆರಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ರಾಜ್ಯ- ಕೇಂದ್ರ ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡ್ಬೇಕಾಗುತ್ತೆ. 9 ತಿಂಗಳಾದ್ರೂ ರಾಜ್ಯ ಸರ್ಕಾರದ ಕೆಲಸಕ್ಕೆ ಹೋಗ್ತಿಲ್ಲ. ನನಗೆ ಬೇಡ ನೀವು ಮಾಡ್ಕೊಳ್ಳಿ ಅಂತ ಹೇಳಿದ್ದೀನಿ ಎಂದು ಮಾಜಿ ಸಂಸದ ಜಿ.ಎಸ್ ಬಸವರಾಜುಗೆ ಕಾಲೇಳೆದ ವಿ.ಸೋಮಣ್ಣ, ಬಸವರಾಜು ಅವರಿಗೆ ನಾನೇ ಕರೆದೆ. ನಾನು ಇರೋ ತನಕ ನಮ್ಮ ಜೊತೆಗೆ ಇರಿ. ನಿಮ್ಮ ಮಾರ್ಗದರ್ಶನ ಪಡಿತ್ತೀವಿ. ಹಾಗಂತ ನೂರಕ್ಕೆ ನೂರರಷ್ಟು ನಿಮ್ಮ ಮಾತು ಕೇಳೋನಲ್ಲ. ನಾನು ಸ್ವಲ್ಪ ಹಿಂಗೆ ಚಂಡಾಳ. ನನ್ನದೇ ಆದ ದೂರ ದೃಷ್ಟಿಯಿದೆ, 40 ವರ್ಷದ ಅನುಭವವಿದೆ ಎಂದಿದ್ದಾರೆ.

ಇನ್ನೂ ತುಮಕೂರಿನ ಲಕ್ಕಿ ಮನೆಯನ್ನ ಕೇಡವಲು ನಿರ್ಧಾರ ಮಾಡಿದ್ದು, ಚುನಾವಣೆ ವೇಳೆ ಖರೀದಿಸಿದ ಮನೆ ಡೆಮಾಲಿಷ್ ಮಾಡಿ, ಅದೇ ಜಾಗದಲ್ಲಿ ಹೊಸ ಮನೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಮೂರ್ನಾಲ್ಕು ತಿಂಗಳಲ್ಲಿ ಅದನ್ನ ಮಾಡುತ್ತೇನೆ. ಅಲ್ಲಿ ಜನರು ಕುಳಿತು ಕೊಳ್ಳಲು ಆಗಲ್ಲ. ನಾನು ಬೇರೆ ಕಡೆ ಕಟ್ಟಲು ನೋಡಿದೆ. ಆ ಮನೆಯಿಂದ ಗೆದಿದ್ದೀರಾ ಅಲ್ಲೇ ಮನೆ ಕಟ್ಟಿ ಅಂತ ನಮ್ಮ ಶ್ರೀಮತಿಯವರು ಹೇಳಿದ್ದಾರೆ. ಹಾಗಾಗಿ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡ್ತೇವೆ ಎಂದಿದ್ದಾರೆ ಸೋಮಣ್ಣ.