ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada 12) ಕಾರ್ಯಕ್ರಮ ಪ್ರಾರಂಭವಾದ ದಿನದಿಂದಲೇ ಗಿಲ್ಲಿ ನಟ(Gilli Nata) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ತಮ್ಮ ವಿಭಿನ್ನ ಆಟದ ಶೈಲಿ, ಹಾಸ್ಯಭರಿತ ಮಾತು, ಸಹಸ್ಪರ್ಧಿಗಳೊಂದಿಗೆ ತಾಳ್ಮೆಯ ನಡೆ ಮತ್ತು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಗಿಲ್ಲಿಯನ್ನು ಈ ಸೀಸನ್ನ ಜನಮೆಚ್ಚಿದ ಆಟಗಾರನನ್ನಾಗಿ ಮಾಡಿದೆ.
ಇದನ್ನೂ ಓದಿ: BBK 12: ಇಂದು ಬಿಗ್ ಬಾಸ್ ಫಿನಾಲೆ ದಿಢೀರ್ ರದ್ದು: ಕಾರಣವೇನು?

ಸದ್ಯ ಗೆಲುವಿನ ಹೊಸ್ತಿಲಲ್ಲಿ ಇರುವ ಗಿಲ್ಲಿ ನಟ ಬಿಗ್ ಬಾಸ್ ಇತಿಹಾಸದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದಾರೆ. ಈ ಹಿಂದಿನ ಯಾವುದೇ ಸೀಸನ್ನ ಸ್ಪರ್ಧಿಯೂ ಮಾಡದ ಕೆಲ ವಿಶೇಷ ಸಾಧನೆಗಳಿಗೆ ಗಿಲ್ಲಿ ಸಾಕ್ಷಿಯಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿರುವ ಅವಧಿಯಲ್ಲೇ ಅತೀ ಕಡಿಮೆ ಸಮಯದಲ್ಲಿ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ (1M) ಫಾಲೋವರ್ಸ್ ಪಡೆದ ಮೊದಲ ಸ್ಪರ್ಧಿ ಎಂಬ ದಾಖಲೆ ಗಿಲ್ಲಿಯ ಹೆಸರಿಗೆ ಸೇರಿದೆ. ಅಚ್ಚರಿ ಅಂದರೆ ಹಳೆಯ ಸೀಸನ್ಗಳ ಹಲವಾರು ವಿನ್ನರ್ಗಳಿಗೂ ಈ ಮಟ್ಟದ ಫಾಲೋವರ್ಸ್ ಇಲ್ಲ.

ಈ ಹಿಂದಿನ ಸೀಸನ್ಗಳ ಯಾವುದೇ ಸ್ಪರ್ಧಿಗೂ ಇಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗ ಹಾಗೂ ಪ್ರಚಾರ ಸಿಕ್ಕಿಲ್ಲ. ಟ್ಯಾಟೂಗಳಿಂದ ಹಿಡಿದು, ಗಲ್ಲಿ ಗಲ್ಲಿಗಳಲ್ಲಿ ಬ್ಯಾನರ್ಗಳು, ಕಟ್ಔಟ್ಗಳು, ಸ್ವಯಂ ಪ್ರೇರಿತ ಅಭಿಮಾನಿ ಅಭಿಯಾನಗಳು ಗಿಲ್ಲಿಯ ಜನಪ್ರಿಯತೆಯನ್ನು ಸ್ಪಷ್ಟಪಡಿಸುತ್ತವೆ.

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ನಾಯಕರು ಸ್ಪರ್ಧಿಗೆ ಮತ ಹಾಕುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ಇದೀಗ ಟಾಪ್ 6 ಸ್ಪರ್ಧಿಗಳ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ದಾಖಲೆಗಳು, ಜನಪ್ರಿಯತೆ, ಅಭಿಮಾನಿಗಳ ಬೆಂಬಲ ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್ಗಳನ್ನು ಗಮನಿಸಿದರೆ, ಗಿಲ್ಲಿ ಈ ಸೀಸನ್ನ ವಿನ್ನರ್ ಎಂಬ ಅಭಿಪ್ರಾಯ ಬಲವಾಗುತ್ತಿದೆ.













