
ಹಿರಿಯ ಪತ್ರಕರ್ತರು, ಚಿಂತಕರು ಹಾಗೂ Indian Express ಪತ್ರಿಕೆಗೆ ಸಂಪಾದಕೀಯ ಬರೆಯುತ್ತಿದ್ದ
ಟಿ.ಜೆ.ಸ್ ಜಾರ್ಜ್ ಇಹಲೋಕವನ್ನು ತ್ಯಜಿಸಿದ್ದಾರೆ. ಇವರನ್ನು ಭಾರತೀಯ ಪತ್ರಿಕೊದ್ಯಮದ ಪಿತಾಮಹವೆಂದು ಕರೆಯುತ್ತಿದ್ದರು. ಇವರಿಗೆ 97 ವರ್ಷ ವಯಸ್ಸಾಗಿತ್ತು.
ಪ್ರಖ್ಯಾತ ಪತ್ರಕರ್ತ̧ರು ಲೇಖಕರು ಮತ್ತು ಅಂಣಕಾರರಾಗಿದ್ದ ಟಿ.ಜೆ.ಎಸ್ ಜಾರ್ಜ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಂಜೆ ಹೃದಾಯಘಾತಕ್ಕೆ ತುತ್ತಾಗಿ ನಿಧನರಾದರೆಂದು ಕುಟಂಬದವರು ತಿಳಿಸಿದರು.
ಇನ್ನೂ ಹಿರಿಯ ಪತ್ರಕರ್ತರ ನಿಧನಕ್ಕೆ ಗಣ್ಯರೆಲ್ಲ ಸಂತಾಪ ಸೂಚಿಸಿದರು.
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇವರ ನಿಧನದ ಸುದ್ದಿ ತಿಳಿಯುತ್ತಿದಂತೆಬ ಸಂತಾಪ ಸೂಚಿಸಿದರು.

ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರು ಟಿಜೆಎಸ್ ಜಾರ್ಜ್ ಎಂದೇ ಖ್ಯಾತರಾಗಿದ್ದರು. 1928 ಮೇ 7 ರಂದು ಕೇರಳದಲ್ಲಿ ಜನಿಸಿದರು. ಇವರು ಮದ್ರಾಸ್ ಕ್ರಿಶ್ವಿಯನ್ ಕಾಲೇಜಿನಿಂದ ಇಂಗ್ಲೀಷ್ ಸಾಹಿತ್ಯದಲ್ಲಿ
ಪದವಿ ಪಡೆದುಕೊಂಡರು. ನಂತರ ಮುಂಬೈನ ಫ್ರೀ ಪ್ರೆಸ್ ಜರ್ನಲ್ ನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಅವರು ಪತ್ರಕರ್ತ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಜಾರ್ಜ್ ಅವರು ಇವರು Indian Express ದಿನ ಪತ್ರಿಕೆಗೆ ಸಂಪಾದಕೀಯವನ್ನು ಬರೆಯುತ್ತಿದ್ದರು. ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಧಾರ್ಮಿಕ ಅಸಹಿಷ್ಟುತೆ ಸೇರಿದಂತೆ ಹಲವು
ವಿಚಾರಗಳು ಬಗ್ಗೆ ಧ್ವನಿ ಎತ್ತುತ್ತಿದ್ದರು ʼ ಪಾಯಿಂಟ್ ಆಫ್ ವ್ಯೂʼ ಎಂಬ ಸಾಪ್ತಾಹಿಕ ಅಂಕಣವನ್ನು
25 ವರ್ಷಗಳು ಕಾಲ ಸಂಪಾದಕೀಯನ್ನು ಬರೆಯುತ್ತಿದ್ದರು.
ಭಾರತೀಯ ಪತ್ರಿಕೋದ್ಯಮ ಸೇರಿದಂತೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡೆಗಳನ್ನು ಪರಗಣಿಸಿದ ಕೇಂದ್ರ ಸರ್ಕಾರ ಅವರಿಗೆ 2011 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
2019ರಲ್ಲಿ ಕೇರಳದ ಅತ್ಯುನ್ನತ ಮಾಧ್ಯಮದ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಿತು.
ಟಿಜೆಸ್ ಜಾರ್ಜ್ ರವರು Hongkong ನಲ್ಲಿ ಏಷ್ಯಾವೀಕ್ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಿಎಂ ಸಂತಾಪ
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ರವರು ಟ್ವೀಟ್ ಮಾಡಿ ಹಿರಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿಜೆಎಸ್ ಅವರ ನಿಧನದಿಂದ ದು:ಖತನಾಗಿದ್ದೇನೆ. ಅವರ ಹರಿತವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗಿಂತ ಹೆಚ್ಚು ಕಾಲ ಭಾರತೀಯ ಪತ್ರಿಕೊದ್ಯಮವನ್ನು ಶ್ರೀಮಂತಗೊಳಿಸಿದ್ದರು.













