ಅಂಜನಾದ್ರಿ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳಿ ಹರಕೆ ತೀರಿಸಲು ಮುಂದಾದ ಶಾಸಕರ ಅಭಿಮಾನಿಗಳು. ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿಮಾನಿಗಳು, ರಾಜಾ ವೆಂಕಟಪ್ಪ ನಾಯಕ ಶಾಸಕರಾಗಲೆಂದು ಹರಕೆ ಹೊತ್ತಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ ಈಗ ಗೆದ್ದು ಶಾಸಕರಾಗಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹರಕೆ ತೀರಿಸಲು ಮುಂದಾಗಿದ್ದಾರೆ.
ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಿಂದ ನೂರಾರು ಅಭಿಮಾನಿಗಳು, ಸ್ವಗ್ರಾಮ ಪೇಠ ಅಮ್ಮಾಪುರದಿಂದ ಅಂಜನಾದ್ರಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಪಾದಯಾತ್ರೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು. ಭಜನೆಯೊಂದಿಗೆ ಸಾಗಿದ ಅಭಿಮಾನಿಗಳ ಪಾದಯಾತ್ರೆ ನಡೆಸಿದರು.