ನಟ ಧ್ರುವ ಸರ್ಜಾ (Drug’a sarja) ವಿರುದ್ಧ ನಿರ್ದೇಶಕರಿಂದ ವಂಚನೆ ಆರೋಪ ಕೇಳಿಬಂದಿರುವ ಹಿನ್ನಲೆ ಇದೀಗ ತಮ್ಮ ಮೇಲಿನ ಈ ಆರೋಪಕ್ಕೆ ಧ್ರುವ ಸರ್ಜಾ ಆಪ್ತ ಬಳಗ ಪ್ರತಿಕ್ರಿಯಿಸಿದೆ. ಆರೋಪ ಮಾಡಿರುವ ನಿರ್ದೇಶಕ ರಾಘವೇಂದ್ರ ಹೆಗ್ಡೆ (Raghavendra hegde) ಕನ್ನಡದಲ್ಲಿ ಸಿನಿಮಾ ಮಾಡಲು ಒಪ್ಪದೇ ಈ ರೀತಿ ನೋಟೀಸ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಸೈನಿಕರಿಗೆ ಸಂಬಂಧಪಟ್ಟ ಸ್ಟೋರಿ ಮಾಡೋಣ ಎಂದು ಆಗಾಗ ಮೀಟಿಂಗ್..ಚರ್ಚೆ ನಡೆದಿದೆ.ಜೂನ್ 8ರಂದು ನಮ್ಮನ್ನ ಬಂದು ರಾಘವೇಂದ್ರ ಹೆಗ್ಡೆ ಮೀಟ್ ಮಾಡಿ ಮಾತಾಡಿ ಹೋಗಿದ್ದಾರೆ.ಆಗ ಕನ್ನಡದಲ್ಲಿ ಸರಿಯಾಗಿ ಬ್ಯುಸಿನೆಸ್ ಆಗುತ್ತಿಲ್ಲ, ನೇರವಾಗಿ ತಮಿಳು ಅಥವಾ ತೆಲುಗಿನಲ್ಲಿ ಸಿನಿಮಾ ಮಾಡೋಣ ಎಂದಿದ್ದರು ಎಂದು ಹೇಳಿದ್ದರಂತೆ.

8 ವರ್ಷದ ಹಿಂದೆ ರಾಘವೇಂದ್ರ ಹೆಗ್ಡೆ ಅಡ್ವಾನ್ಸ್ ಕೊಟ್ಟಿದ್ರು.ಆ ವೇಳೆ ಮೊದಲು ಕನ್ನಡಕ್ಕೆ ಆದ್ಯತೆ ಕೊಡಿ ಅಂತ ಧ್ರುವ ಸರ್ಜಾ ಹೇಳಿದ್ರು.ಆದ್ರೆ ಅದು ಸಾಧ್ಯವಿಲ್ಲ, ಮೊದಲು ತಮಿಳು ಅಥವಾ ತೆಲುಗಿನಲ್ಲಿ ಮಾಡೋಣ ಎಂದು ರಾಘವೇಂದ್ರ ಒತ್ತಾಯಿಸಿದ್ದರು ಎನ್ನಲಾಗಿದೆ.
ಇದಕ್ಕೆ ಧ್ರುವ ಸರ್ಜಾ ಒಪ್ಪದಿದ್ದಾಗ ಮುಂಬೈ ಕೋರ್ಟ್‌ನಿಂದ ನೋಟಿಸ್ ಕಳಿಸಿದ್ದಾರೆ. ಧ್ರುವಾ ಸರ್ಜಾ ಜೂನ್ 15ಕ್ಕೆ ನೋಟಿಸ್‌ಗೆ ಉತ್ತರವನ್ನ ಕೊಟ್ಟಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿರುವ ಬಗ್ಗೆ ನಟ ಧ್ರುವಾ ಸರ್ಜಾ ಆಪ್ತ ಬಳಗ ಸ್ಪಷ್ಟನೆ ನೀಡಿದೆ.