ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವಂತ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಅನ್ ಲಾಕ್ ಜಿಲ್ಲೆಗಳಲ್ಲಿ ಇಂದಿನಿಂದ ಅಂದರೆ ಮಂಗಳವಾರ ದಿಂದ ಶಿಕ್ಷಕರು ಶಾಲಾ ಚಟುವಟಿಕೆಗೆಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದರೆ ಅನ್ ಲಾಕ್ ಆದರು ಸಾರಿಗೆ ಸಂಚಾರ ಆರಂಭಗೊಳ್ಳದೇ ಶಿಕ್ಷಕರು ತಮ್ಮ ಶಾಲೆಗೆ ತಲುಪಲಾಗದೆ ಕಷ್ಟ ಅನುಭವಿಸುವಂತಾಗಿದೆ.

ಏನಿದು ಸಮಸ್ಯೆ? ಸಚಿವರು ಹೇಳಿದ್ದೇನು?
೧೧ ಜಿಲ್ಲೆಗಳು ಅನ್ ಲಾಕ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಲ್ಲಾ ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಆದೇಶಿಸಿತು. ಆದರೆ ನಿನ್ನೆ ಅಂದರೆ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಮನೆಯಿಂದ ಶಾಲೆಗೆ ತಲುಪಲು ಯಾವುದೆ ಸಾರಿಗೆ ಸೌಲಭ್ಯ ಇಲ್ಲದೆ ಇರುವುದರಿಂದ ಮಹಿಳಾ ಶಿಕ್ಷಕರಿಯರಿಗೆ ಜೂನ್.21ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದ್ದರು.

ಸಚಿವರಿಂದ ಬಂದ ಸೂಚನೆ, ಶಿಕ್ಷಣ ಇಲಾಖೆಯಿಂದ ಬರದೆ ಇರುವುದು ಶಿಕ್ಷಕರಲ್ಲಿ ಗೊಂದಲ.
ಸಚಿವರು ಸುರೇಶ್ ಕುಮಾರ್, ಮನೆಯಿಂದಲೇ ಎಲ್ಲಾ ಶಿಕ್ಷಕಿಯರು ಕೆಲಸ ಮಾಡಿ ಎಂದು ಹೇಳಿ ಹೊರಟುಬಿಟ್ಟರು. ಆದರೆ ಈ ಕುರಿತು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡದೆ ಇರುವುದು ಶಿಕ್ಷಕರಲ್ಲಿ ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ.
ಶಿಕ್ಷಕಿಯರಿಗೆ ಜೊತೆ ಇನ್ನೂ ಹಲವಾರು ಶಿಕ್ಷಕರು ಶಾಲೆಗೆ ತಲುಪಲಾದಗ ಸಮಸ್ಯೆಯಲ್ಲಿದ್ದಾರೆ.
ಸಚಿವ ಸುರೇಶ್ ಕುಮಾರ್, ಶಿಕ್ಷಕಿಯರಿಗೆ ಮಾತ್ರ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಟ್ಟರು ಇನ್ನೂ ಇಲಾಖೆಯಿಂದ ಯಾವುದೆ ಅಧಿಕೃತ ಸೂಚನೆ ಬಂದಿಲ್ಲ. ಮುಂದೆ ಅದು ಬಂದರು ಸಹ ಅನೇಕ ಆರೋಗ್ಯದಿಂದ ಬಳಲುತ್ತಿರುವ ಶಿಕ್ಷಕರು ಶಾಲೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಅಂಗವೈಕಲ್ಯದಿಂದ ಬಳಲುತ್ತಿರುವ ಶಿಕ್ಷಕರು ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ: ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡ ಶಿಕ್ಷಕರು, ಹುಟ್ಟಿನಿಂದಲೇ ಅಂಗವಿಕಲಾಗಿರುವ ಶಿಕ್ಷಕರು ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಬಹುತೇಕ ಈತರದ ಗಂಭೀರ ಸಮಸ್ಯೆ ಇರುವ ವರ್ಗದ ಶಿಕ್ಷಕರಿಗೆ ಒಂದು ಸಾರಿಗೆ ವ್ಯವಸ್ಥೆಯನ್ನು ಅವಲಂಭಿಸಿರುತ್ತಾರೆ. ಇಲ್ಲವೇ ಶಾಲೆಗೆ ತಲುಪಲು ತಮ್ಮ ಮನೆಯ ಸದಸ್ಯರನ್ನು ಅವಲಂಭಿಸಿರುತ್ತಾರೆ. ಇನ್ನೂ ಕೆಲವರಿಗೆ ಬೈಕ್ ಓಡಿಸಲು ಬಂದರೆ ಇನ್ನುಳಿದವರಿಗೆ ಡ್ರೈವಿಂಗ್ ಬರುವವರೆ ಇಲ್ಲ. ಇಂತಹ ಸಮಸ್ಯೆ ಇರುವ ಶಿಕ್ಷಕರು ಹೇಗೆ ತಾನೇ ಶಾಲೆಗೆ ತಲುಪಲು ಸಾಧ್ಯ?.
ದೂರದೂರಿನಿಂದ ಬರುವ ಶಿಕ್ಷಕರು ತಮ್ಮ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ.
ಉದಾಹರಣೆಗೆ, ಬೆಂಗಳೂರಿನಲ್ಲಿರುವ ಒರ್ವ ಶಿಕ್ಷಕ ಚನ್ನಪಟ್ಟಣದ ಒಂದು ಹಳ್ಳಿಯ ಶಾಲೆಗೆ ಬರಬೇಕಾದರೆ ಅಂತಹ ಶಿಕ್ಷಕರು ಸಾರಿಗೆ ವ್ಯವಸ್ಥೆಯನ್ನು ಬಹುಮುಖ್ಯವಾಗಿ ಅವಲಂಭಿಸಿರುತ್ತಾರೆ. ಸಾರಿಗೆ ಸಮಸ್ಯೆಯಾದರೆ ಒಂದೆರಡು ದಿನ ಬೈಕ್ ನಲ್ಲಿ ಬರಬಹುದೇ ಹೊರತು ದಿನನಿತ್ಯ 60-70 ಕಿಲೋಮೀಟರ್ ದೂರ ಪ್ರಯಾಣ ಮಾಡಿ ಬರಲು ಸಾಧ್ಯವೇ ಇಲ್ಲ. ಅದರಲ್ಲೂ 50 ವರ್ಷ ಮೇಲ್ಪಟ್ಟ ಶಿಕ್ಷಕ/ಕಿಯರಿಗೆ ಇದು ಅಸಾಧ್ಯವೇ ಸರಿ. ವಿಪರ್ಯಾಸವೆಂದರೆ ಶಿಕ್ಷಣ ಇಲಾಖೆಯಲ್ಲಿ ಅರ್ಧದಷ್ಟು ಜನ ಈ ವಯೋಮಾನದವರೇ ಆಗಿದ್ದಾರೆ. ಇಂತಹ ಕರೋನ ಪರಿಸ್ಥಿತಿ ಜೊತೆ ಮಳೆಗಾಲದಲ್ಲಿ ಹೇಗೆ ಪ್ರಯಾಣ ಮಾಡಿ ಶಾಲೆಗೆ ತಲುಪಲು ಸಾಧ್ಯ.?

ದಿ ನ್ಯೂಸ್ ಮಿನಿಟ್ ಪ್ರಕಾರ, ರಾಜ್ಯದಲ್ಲಿ 268 ಕ್ಕು ಹೆಚ್ಚು ಶಿಕ್ಷಕರು ಕರೋನದಿಂದಾಗಿ ಬಲಿಯಾಗಿದ್ದಾರೆ ಇದರಲ್ಲಿ ಒಂದಷ್ಟು ಜನ ಚುನಾವಣಾ ಅಧಿಕಾರಿಯಾಗಿದ್ದರು ಎಂದು ತಿಳಿದು ಬಂದಿದೆ. ಸಾವಿಗೀಡಾದ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಬಹುದು, ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ಕೆಲಸ ನೀಡಬಹುದು. ಆದರೆ ಅಮೂಲ್ಯವಾದ ಜೀವ ಮತ್ತೆ ವಾಪಸ್ ತರಲು ಸಾಧ್ಯವೇ ಇಲ್ಲ.
ಹಾಗಾಗಿ ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ, ಅದರಲ್ಲೂ ಈ ಮಳೆಗಾಲದಲ್ಲಿ ಇಂತಹ ಅರ್ಥವಿಲ್ಲದ ಸೂಚನೆಗಳನ್ನು ನೀಡುವ ಬದಲು ಪ್ರಾಕ್ಟಿಕಲ್ ಆಗಿ ಯೋಚಿಸಿ ಶಿಕ್ಷಕರಿಗೆ ಇಲಾಖೆಯಿಂದ ಸೂಚಿಸಬೇಕು ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ತಮ್ಮ ನೋವನ್ನು ಪ್ರತಿಧ್ವನಿ ನ್ಯೂಸ್ ಜೊತೆಗೆ ಹಂಚಿಕೊಂಡಿದ್ದಾರೆ.