ಉಡುಪಿ (udupi ) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು(kolluru ) ಸಮೀಪ ಅರಶಿಣಗುಂಡಿ ಜಲಪಾತದ ( arahinagundi Falls) ಸಮೀಪ ಜಾರಿ ಬಿದ್ದು ಯುವಕ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ.
ಭದ್ರಾವತಿ ಮೂಲದ ಶರತ್ (23) ಜಲಪಾತದ ವೀಕ್ಷಣೆಗೆಂದು ಕೊಲ್ಲೂರು ಸಮೀಪದ ಅರಿಶಿಣಗುಂಡಿ ಜಲಪಾತಕ್ಕೆ ಬಂದಿದ್ದರು,
ಈ ವೇಳೆ ಜಲಪಾತ ವೀಕ್ಷಣೆ ಮಾಡುತ್ತಿದ್ದಾಗ ಜಾರಿ ಬಿದ್ದು ನೀರಿನಲ್ಲಿ ಶರತ್ ಕೊಚ್ಚಿ ಹೋಗಿದ್ದರು, ಇದಾದ ಬಳಿಕ ಸತತವಾಗಿ ಒಂದು ವಾರಗಳ ಕಾಲ ಕಾರ್ಯಾಚರಣೆಯನ್ನು ನಡೆಸಲಾಗಿದ್ದು ಇದೀಗ ಶರತ್ ಮೃತದೇಹ ಪತ್ತೆಯಾಗಿದೆ.
ಪುಸ್ತಕ ವಿಮರ್ಶೆ ಓದಿ ; ಪುಸ್ತಕ ವಿಮರ್ಶೆ | ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ
ಮೃತ ಯುವಕ ಶರತ್ ಪತ್ತೆಗಾಗಿ ಮುಳುಗು ತಜ್ಞರು, ಸೇರಿದಂತೆ ಹಲವು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಳೆದ ಒಂದು ವಾರದಿಂದ ಹಗಲು ರಾತ್ರಿ ಎನ್ನದೇ ಶೋಧ ಕಾರ್ಯಾಚರಣೆ ನಡೆಸಿದ್ದರು,
ಇದೀಗ ಈ ಪ್ರಕರಣ ದುರಂತ ಅಂತ್ಯ ಕಂಡಿದ್ದು ಶರತ್ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ