ಡಂಜೊದ ಸಹ-ಸಂಸ್ಥಾಪಕ ಮತ್ತು ಚೀಫ್ ಟೆಕ್ನಾಲಜಿ ಆಫೀಸರ್ (ಸಿಟಿಒ) ಮುಕುಂದ್ ಝಾ ಅವರು ಡೆಲಿವರಿ ಸ್ಟಾರ್ಟ್‌ಅಪ್ ಅನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಕಳೆದ ಒಂದು ವಾರದಲ್ಲಿ ಕಂಪನಿ ತೊರೆಯುತ್ತಿರುವ ಎರಡನೇ ಸಹ ಸಂಸ್ಥಾಪಕರು ಇವರಾಗಿದ್ದಾರೆ.
2015ರಲ್ಲಿ ಡಂಜೋ ಸೇರಿಕೊಂಡಿದ್ದ ಸಹ ಸಂಸ್ಥಾಪಕ ದಲ್ವೀರ್ ಸೂರಿ ಅವರು ಕಂಪನಿ ತೊರೆಯುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು. ಇದೀಗ ಈ ಸಾಲಿಗೆ ಇನ್ನೋರ್ವ ಸಹ ಸಂಸ್ಥಾಪಕರು ಸೇರಿಕೊಂಡಿದ್ದು, ಡಂಜೋದ ಬಿಕ್ಕಟ್ಟು ದಿನ ದಿನಕ್ಕೂ ಉಲ್ಬಣಿಸುತ್ತಿದೆ.
ಮುಕುಂದ್ ಝಾ ಅವರ ಮುಂದಿನ ನಡೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರು ಕಂಪನಿಯ ಕಾರ್ಯಾಚರಣೆಗಳಿಂದ ಹಿಂದೆ ಸರಿದಿದ್ದಾರೆ ಎಂದು ಡಂಜೋದಾ ಆಂತರಿಕ ಮೂಲಗಳು ತಿಳಿಸಿವೆ. ಮುಂದಿನ ವಾರಗಳಲ್ಲಿ ಅವರು ಕಂಪನಿ ತೊರೆಯುತ್ತಿರುವ ಬಗ್ಗೆ ಔಪಚಾರಿಕ ಪ್ರಕಟಣೆ ಬರಬಹುದು ಎಂದು ಈ ಮೂಲಗಳು ಹೇಳಿವೆ.