• Home
  • About Us
  • ಕರ್ನಾಟಕ
Tuesday, July 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಸೃಷ್ಟಿಸುವುದೇ ಹಿಂದುತ್ವ ರಾಜಕಾರಣದ ಹುನ್ನಾರ!

ನವೀನ್‌ ಸೂರಿಂಜೆ by ನವೀನ್‌ ಸೂರಿಂಜೆ
January 25, 2022
in ಅಭಿಮತ
0
ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಸೃಷ್ಟಿಸುವುದೇ  ಹಿಂದುತ್ವ ರಾಜಕಾರಣದ ಹುನ್ನಾರ!
Share on WhatsAppShare on FacebookShare on Telegram

ನಾರಾಯಣ ಗುರುಗಳನ್ನು ಅವಮಾನಿಸಿದ್ದಲ್ಲದೇ ಈಗ ಅದೇ ನೆಪವನ್ನು ಹಿಡಿದುಕೊಂಡು ಬಿಲ್ಲವರ ಏಕೈಕ ಮುಖ್ಯಮಂತ್ರಿ, ನಾರಾಯಣ ಗುರುಗಳ ಪ್ರಖರ ಅನುಯಾಯಿ ಪಿಣರಾಯಿ ವಿಜಯನ್ ರವರನ್ನು ಗುರಿಯಾಗಿಸುವ ಪ್ರಯತ್ನವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ನಾರಾಯಣ ಗುರುಗಳ ಪ್ರಖರ ಅನುಯಾಯಿ ಬಿಲ್ಲವ ರಾಜಕಾರಣಿಗಳನ್ನು ಮುಗಿಸುವ ಹಿಂದುತ್ವ ರಾಜಕಾರಣದ ಅಬಿಚುವಲ್ ಕೃತ್ಯವನ್ನು ಪಿಣರಾಯಿ ವಿಜಯನ್ ಮೇಲೆ ವಿಫಲ ಪ್ರಯೋಗ ಮಾಡಲಾಗುತ್ತಿದೆ ಎಂಬುದನ್ನು ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಇದು ಬಿಲ್ಲವರನ್ನು ಏಕಕಾಲದಲ್ಲಿ ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಮಾಡುವ ಹಿಂದುತ್ವದ ಹಳೇ ತಂತ್ರಗಾರಿಕೆಯ ಭಾಗವಷ್ಟೆ.

ADVERTISEMENT

ಹಿಂದುತ್ವ ರಾಜಕಾರಣದ ಮೊದಲ ಗುರಿ ಮುಸ್ಲೀಮರು ಎಂದು ಮೇಲ್ನೋಟಕ್ಕೆ ಭಾಸವಾಗುವಂತಿದ್ದರೂ ನಿಜವಾಗಿ ಹಿಂದುತ್ವದ ಮೊದಲ ಗುರಿ ಬಿಲ್ಲವ ಸೇರಿದಂತೆ ಹಿಂದೂ ಸಮುದಾಯದ ಹಿಂದುಳಿದ ವರ್ಗಗಳು. ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ಮುಸ್ಲಿಂ, ಕ್ರಿಶ್ಚಿಯನ್ನರ ವಿರುದ್ದ ಕೊಲ್ಲು ಮತ್ತು ಕೊಲ್ಲಲ್ಪಡು ಎಂಬ ಸೂತ್ರದಂತೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಹಿಂದುತ್ವ ಶಕ್ತಿಗಳು ನಡೆಸುವ ಕೋಮುಗಲಭೆಗಳಲ್ಲಿ ಕೊಲ್ಲುವವರು ಮತ್ತು ಕೊಲ್ಲಲ್ಪಡುವವರು ಬಿಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುತ್ವ ನಾಯಕರಿಗೆ ಹಿಂದುಳಿದ ವರ್ಗಗಳೆಂದರೆ ಒಂದು ರೀತಿಯಲ್ಲಿ ಮೇಲ್ವರ್ಗದ ಕೈಯ್ಯಲ್ಲಿರುವ ಅಂಕದ ಕೋಳಿಯಂತೆ.

ಕರಾವಳಿಯ ಕೋಮುಗಲಭೆಯಲ್ಲಿ ಸತ್ತವರ ಪಟ್ಟಿ ನೋಡಿ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಸುಖಾನಂದ ಶೆಟ್ಟಿಯ ಶವಯಾತ್ರೆಯಲ್ಲಿ ಮತ್ತೆ ಪೊಲೀಸ್ ಶೂಟೌಟ್ ಆಗಿ ಇಬ್ಬರು ಬಿಲ್ಲವ ಯುವಕರು ನನ್ನೆದುರೇ ಪ್ರಾಣ ಕಳೆದುಕೊಂಡಿದ್ದರು. ಬಂಟ್ವಾಳದಲ್ಲಿ ಸಾವಿಗೀಡಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರನ್ನು ಬಂಧಿಸಿದ್ದಾರೆ. ಈ ಮೂವರು ಯುವಕರೂ ಕೂಡಾ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ. ಎಲ್ಲಾ ಕೋಮುಗಲಭೆ, ಆ ಬಳಿಕ ನಡೆಯುವ ಪ್ರತಿಕಾರಗಳಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳೇ ಕೊಲೆಗಾರರ ಪಟ್ಟಿಯಲ್ಲೂ, ಸಾವಿಗೀಡಾದವರ ಪಟ್ಟಿಯಲ್ಲೂ ಏಕಕಾಲದಲ್ಲಿ ಯಾಕಿರುತ್ತಾರೆ ? ಯಾಕೆ ಬಂಟ ನಾಯಕರು ಈ ಎರಡೂ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ? ಯಾಕೆ ಹಿಂದುತ್ವ ನಾಯಕತ್ವವನ್ನು ವಹಿಸಿಕೊಂಡ, ಹಿಂದುತ್ವದ ನೇರ ಲಾಭದಾರ ಸಮುದಾಯವಾಗಿರುವ ಬ್ರಾಹ್ಮಣರ ಹೆಸರುಗಳು ಈ ಪಟ್ಟಿಯಲ್ಲಿಲ್ಲ ಎಂಬುದನ್ನು ಯೋಚಿಸಿದರೆ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಯಾಕೆ ತಿರಸ್ಕರಿಸಲಾಯಿತು ಎಂಬುದಕ್ಕೆ ಉತ್ತರ ಸಿಗುತ್ತದೆ.

ಹೋಂ ಸ್ಟೇ ಅಟ್ಯಾಕ್ ನಲ್ಲಿ ಹಿಂದೂ ಜಾಗರಣಾ ವೇದಿಕೆಯ 43 ಯುವಕರನ್ನು ಬಂಧಿಸಲಾಯ್ತು. ಅದರಲ್ಲಿ ಎಷ್ಟು ಬಂಟರು ? ಎಷ್ಟು ಬ್ರಾಹ್ಮಣರಿದ್ದರು ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಕೇವಲ ಇಬ್ಬರು ಬಂಟರು ಮತ್ತು ದೊಡ್ಡ ೦ ಸಂಖ್ಯೆಯ ಬ್ರಾಹ್ಮಣರು. 43 ಆರೋಪಿಗಳ ಪೈಕಿ 39 ಯುವಕರು ಬಿಲ್ಲವರಾಗಿದ್ದರು. ಅದಕ್ಕೂ ಮೊದಲು ಅಮ್ನೇಶಿಯಾ ಪಬ್ ದಾಳಿ ಪ್ರಕರಣ ನಡೆಯಿತು. ಅಮ್ನೇಶಿಯಾ ಪಬ್ ಅಟ್ಯಾಕ್ ಪ್ರಕರಣದಲ್ಲಿ 30 ಶ್ರೀರಾಮ ಸೇನೆಯ ಯುವಕರನ್ನು ಬಂಧಿಸಲಾಗುತ್ತದೆ. ಆ ಪಟ್ಟಿಯಲ್ಲೂ ಮೂವರು ಬಂಟರು ಮತ್ತು 28 ಜನ ಬಿಲ್ಲವರು. ಸಂಪತ್ ಪೂಜಾರಿ, ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ರಮೇಶ್ ಕೋಟ್ಯಾನ್ ಎಂದು ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಣ್ಣಿಗೆ ರಾಚುತ್ತದೆ.

ಇದೆಲ್ಲವನ್ನು ಈಗ ಯಾಕೆ ನೆನಪಿಸಿಕೊಳ್ಳಬೇಕು ಎಂದರೆ ಈಗ ಬಿಲ್ಲವರನ್ನು ತುಳಿಯುವ ರಾಜಕಾರಣ ಶುರುವಾಗಿದೆ. ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ತಿರಸ್ಕರಿಸಿರುವುದು ಬಿಲ್ಲವರು ರಾಜಕೀಯವಾಗಿ ಚಿಂತಿಸುವಂತೆ ಮಾಡಿದೆ. ಎಲ್ಲಾ ಪಕ್ಷ, ಸಿದ್ದಾಂತ ಬೇದವನ್ನು ಮರೆತು ಬಿಲ್ಲವ ಸಮುದಾಯದೊಳಗೆ ಖಂಡನೆ ವ್ಯಕ್ತವಾಗುತ್ತಿದೆ. ಇದು ಹಿಂದುತ್ವ ರಾಜಕಾರಣಕ್ಕೆ ಭಯ ಮೂಡಿಸಿದ್ದರಿಂದಲೇ ಸ್ತಬ್ಧಚಿತ್ರ ತಿರಸ್ಕಾರದ ತಪ್ಪನ್ನು ಬಿಲ್ಲವ ಸಮುದಾಯದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. “ಜನಾರ್ಧನ ಪೂಜಾರಿಯವರು ಕೇಂದ್ರ ಸಚಿವರಾಗಿದ್ದರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗಲೇ ಯಾಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಮಾಡಿಸಿರಲಿಲ್ಲ? ” ಎಂದು ಜನಾರ್ಧನ ಪೂಜಾರಿಯವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತೆಯೇ ಕೇರಳ ಸಿಎಂ ಪಿಣರಾಯಿ ವಿಜಯನ್ ರನ್ನು ಆರೋಪಿಯನ್ನಾಗಿಸುವ ಯತ್ನ ನಡೆಸುತ್ತಿದ್ದಾರೆ. ಇದು ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಏಕಕಾಲದಲ್ಲಿ ಸೃಷ್ಟಿಸುವ ಹಿಂದುತ್ವ ರಾಜಕಾರಣದ ಹುನ್ನಾರ ಎಂಬುದನ್ನು ಕರಾವಳಿಯ ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಳ್ಳಬೇಕಷ್ಟೆ.

Tags: BJPCongress PartyThe creed of Hindutva politics is to create the villagers as murderersಎಚ್ ಡಿ ಕುಮಾರಸ್ವಾಮಿಕರೋನಾನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

UP Election | ಪ್ರಿಯಾಂಕಾರ ‘ಮಹಿಳಾ ಗ್ಯಾಂಬಿಟ್’ ಕಾಂಗ್ರೆಸ್ಗೆ ಹೊಸ ಆರಂಭ ನೀಡಲಿದೆಯೇ?

Next Post

ಹಳೆಯ ಮುಖಗಳು ಸಾಕು; ಹೊಸಬರಿಗೆ ಅವಕಾಶ ಕೊಡಿ : ಎಂ.ಪಿ.ರೇಣುಕಾಚಾರ್ಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಹಳೆಯ ಮುಖಗಳು ಸಾಕು; ಹೊಸಬರಿಗೆ ಅವಕಾಶ ಕೊಡಿ : ಎಂ.ಪಿ.ರೇಣುಕಾಚಾರ್ಯ

ಹಳೆಯ ಮುಖಗಳು ಸಾಕು; ಹೊಸಬರಿಗೆ ಅವಕಾಶ ಕೊಡಿ : ಎಂ.ಪಿ.ರೇಣುಕಾಚಾರ್ಯ

Please login to join discussion

Recent News

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 
Top Story

ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada