ರಾಜ್ಯದಲ್ಲಿ ಮೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೀತಿದ್ದು, ರಾಜ್ಯದಲ್ಲಿ ಲಿಕ್ಕರ್ ಲಾಬಿಯಿಂದ ಕಲೆಕ್ಟ್ ಮಾಡಿದ 900 ಕೋಟಿ ಚುನಾವಣೆ ಹಂಚಲಾಗ್ತಿದೆ ಎಂದು ದಾವಣಗೆರೆಯಲ್ಲಿ R. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಉಪ ಚುನಾವಣೆಯಲ್ಲಿ ಇದೀಗ ಕರಿಯಾ ಅನ್ನೋ ಹೊಸ ಪದ ಪ್ರಯೋಗ ಮಾಡಿದ್ದಾರೆ. ಇದನ್ನ ಬೇರೆ ದೇಶದಲ್ಲಿ ಆಗಿದ್ದರೆ ಅವರನ್ನ ಜೈಲಿಗೆ ಹಾಕೋರು. ಸರ್ಕಾರ ಮೂರು ಕ್ಷೇತ್ರದ ಬೈ ಎಲೆಕ್ಷನ್ ಅಧಿಕಾರಿಗಳ, ಹಣ ಬಲ ಇಟ್ಕೊಂಡು ಮಾಡ್ತಿದೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಅಂತ ದೂರು ನೀಡಿದ್ದೇವೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಲಿಕ್ಕರ್ ಲಾಬಿ ಹೇಳಿಕೆಯಲ್ಲಿ ಏನಿದೆ..? ಎಂದು ಪ್ರಶ್ನಿಸಿರುವ ಅಶೋಕ್, ಪ್ರಧಾನ ಮಂತ್ರಿ ಬಗ್ಗೆ ಮಾತನಾಡುವ ಮೊದಲು ನಿಮ್ಮಲ್ಲಿ ಹೆಗ್ಗಣ ಬಿದ್ದಿದೆ ನೋಡ್ಕೊಳ್ಳಿ ಎಂದಿರುವ ಅಶೋಕ್, ರಾಜಭವನಕ್ಕೆ ಕಂಪ್ಲೇಟ್ ಹೋಗಿದೆ..
ಕಳೆದ 16 ತಿಂಗಳಲ್ಲಿ 16 ಭ್ರಷ್ಟಾಚಾರ ಎಸಗಿದ ಸರ್ಕಾರ ನಿಮ್ಮದು. ಈ ಅಧಿವೇಶನ ಪೂರ್ತಿ ಬ್ರಹ್ಮಾಂಡ ಭ್ರಷ್ಟಾಚಾರ ಬರುತ್ತದೆ. ಅಧಿವೇಶನಕ್ಕೆ ಒಬಾಮಾ ಅವರನ್ನು ಕರೆಸುತ್ತಾರಂತೆ. ಅವರ ಮುಂದೆ ಇವರ ಬ್ರಹ್ಮಾಂಡ ಭ್ರಷ್ಟಾಚಾರ ತೆರೆದಿಡಬೇಕಾ..? ಎಂದು ಪ್ರಶ್ನಿಸಿದ್ದಾರೆ.