ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮತ್ತೊಮ್ಮೆ ರಕ್ಷಣಾ ಸಚಿವರಾಗಿದ್ದಕ್ಕೆ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೂ ಸೇರಿದಂತೆ ಸಚಿವ ಹೆಚ್.ಸಿ.ಮಹಾದೇವಪ್ಪ ಹಾಗೂ ದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಅವರು ಅಭಿನಂದನೆ ಸಲ್ಲಿಸಿದರು.
ರಕ್ಷಣಾ ಮಂತ್ರಿಗೆ ಸಿಎಂ ಸಿದ್ದು ಪತ್ರ :ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಉಪ ನಗರ ರೈಲ್ವೆ ಯೋಜನೆಗೆ ಅನುಕೂಲವಾಗುವಂತೆ ಸ್ಥಳ ನಿಗದಿ ಕುರಿತಾಗಿಯೂ ಮನವಿ ಪತ್ರದಲ್ಲಿ ಸಿಎಂ & ಟೀಂ ಮನವಿ ಮಾಡಿದೆ.
ಮುಖ್ಯಮಂತ್ರಿ @siddaramaiah ಅವರು ಇಂದು ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ @rajnathsingh ಅವರನ್ನು ಸೌಹಾರ್ದಯುತವಾಗಿ ಭೇಟಿಮಾಡಿದರು.
— CM of Karnataka (@CMofKarnataka) July 30, 2024
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ @DKShivakumar, ಸಮಾಜ ಕಲ್ಯಾಣ ಸಚಿವರಾದ @CMahadevappa ಹಾಗೂ ದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿಗಳಾದ ಡಾ. ಟಿ.ಬಿ.ಜಯಚಂದ್ರ ಅವರು ಉಪಸ್ಥಿತರಿದ್ದರು. pic.twitter.com/L4jgbbKGFT
ಇದಲ್ಲದೇ , ಸಿಲಿಕಾನ್ ಸಿಟಿಯ ಈಜಿಪುರ ಒಳ ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ರಸ್ತೆ ನಿರ್ಮಾಣಕ್ಕೆ ಬೇಕಾಗಿರುವ ರಕ್ಷಣಾ ಇಲಾಖೆಗೆ ಸೇರಿರುವ 17.50 ಎಕರೆ ಹೆಚ್ಚುವರಿ ರಕ್ಷಣಾ ಭೂಮಿಯ ಅಗತ್ಯೆಯ ಸಮಸ್ಯೆ ಬಗೆಹರಿಸಿ ಎಂದು ಪತ್ರದ ಮೂಲಕ ಕೋರಲಾಗಿದೆ.ಸರ್ಜಾಪುರ ಮುಖ್ಯ ರಸ್ತೆಯಿಂದ ಮಾಸ್ಟರ್ ಪ್ಲಾನ್ 2015 (24 ಎಂಆರ್‌ಎಫ್) ಪ್ರಕಾರ ರಸ್ತೆ ರಚನೆಗೆ ಅಗತ್ಯೆವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.