
ಕಾಲ ಕೆಡೋದಿಲ್ಲ…
ಕಾಲ ಓಡುತ್ತೆ, ಓಡುತ್ತಲಿರುತ್ತದೆ…
ಗಡಿಯಾರ ಬದಲಾಗಬಹುದು ಕಾಲ ಅಲ್ಲ..
ಕಾಲ ಹಾಗೆಯೇ ಇರುತ್ತೆ,,,,
ಅದೇ ಸೂರ್ಯ,
ಅದೇ ಚಂದ್ರ,
ಅದೇ ನಕ್ಷತ್ರಗಳು,
ಅದೇ ಬಾನು,
ಅದೇ ಭೂಮಿ..
ಇಲ್ಲಿ ಪ್ರಶ್ನೆ ಏನೆಂದರೆ.
ಸತ್ಯವಂತರು ಯಾರು ಎಲ್ಲರೂ ಕರ್ಮಿಷ್ಟರೆ…ಅವರವರ ಕರ್ಮ ಅವರಿಗೆ. ಹೀಗಾಗಿ ಸತ್ಯವಂತರು ಖಂಡಿತ ಕಡಿಮೆ ಇದ್ದಾರೆ…
ಕಾಲ ಎಂದು ಕೆಟ್ಟು ಹೋಗುವುದಿಲ್ಲ. ಬೆಳಿಗ್ಗೆ ಸೂರ್ಯ ಹುಟ್ಟುತ್ತದೆ. ಸಂಜೆ ಮುಳುಗುತ್ತದೆ. ಮರುದಿನ ಯಥಾ ಪ್ರಕಾರ.
ಕಾಲಕ್ರಮೇಣ ಬದಲಾವಣೆ ಆಗುತ್ತಾ ಹೋಗುವುದು ಜನರು ಮಾತ್ರ.
ಅವಿಷ್ಕಾರಗಳು, ಮಾನವ ಸಹಜ ಗುಣ. ಏಕತಾನತೆ ಇಷ್ಟ ಪಡುವುದಿಲ್ಲ. ಭಿನ್ನ ಭಿನ್ನತೆ ಇಷ್ಟ ಪಡುತ್ತಾರೆ.
ಹೆಚ್ಚು ಸೌಕರ್ಯ ಅಪೇಕ್ಷಿಸುತ್ತಾನೆ.

ಅದ್ದರಿಂದ ಬದಲಾವಣೆ ಆಗುತ್ತಾ ಹೋಗುವುದು ಜೀವನ ಶೈಲಿಯಲ್ಲಿ. ಅದನ್ನೆ ಕೆಲವರು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳಬಹುದು. ಇಲ್ಲಿ ಬದಲಾವಣೆ ಆಗಿದ್ದು, ಬದುಕುವ ರೀತಿಯಲ್ಲಿ ಮತ್ತು ಅವನ ಪರಿಸರದಲ್ಲಿ.
ಇನ್ನು ಕೊಲೆ, ದರೋಡೆ, ಕಳ್ಳತನ, ಸ್ವಾರ್ಥ , ಕಪಟ , ಮೋಸ, ವಂಚನೆ, ಕ್ರೋಧ, ಮತ್ಸರ, ಹೊಡೆದಾಟ, ಕಿತ್ತಾಟ….ಎಲ್ಲವೂ ಮುಂಚಿನಿಂದ ಇದ್ದದ್ದೆ. ಅದರೆ , ಮಾನವನ ಜೀವನ ಶೈಲಿ ಬದಲಾವಣೆ ಆದ ಹಾಗೆ, ಅವುಗಳ ಪ್ರಕಾರದಲ್ಲಿ ಸಹ ಬದಲಾವಣೆ ಆಗಿರಬಹುದು. ಹಿಂದೆ ಸೈಕಲ್ಲಿನಲ್ಲಿ ಬಂದು ಕಳ್ಳತನ ಮಾಡಿದರೆ, ಈಗ ಕಾರು, ಬೈಕು, ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಾರೆ. ಅದೇ ರೀತಿ ಈಗ ಸೈಬರ್ ವಂಚನೆ , ಹೊಸ ವಿಧಾನದ ವಂಚನೆ ಎಂದು ಹೇಳಬಹುದು.

ರಾಮಯಣ, ಮಹಾ ಭಾರತ, ದೇವತೆಗಳು ರಾಕ್ಷಸರ ಯುದ್ದ, ಸತ್ಯ ಹರಿಶ್ಚಂದ್ರ ಸತ್ಯಕ್ಕಾಗಿ ಕಷ್ಟ ಪಟ್ಟಿದ್ದು, ನಳ ದಮಯಂತಿ ಕಥೆ, ವಾಲ್ಮೀಕಿ, ಬೇಡನಾಗಿದ್ದಾಗ , ದರೋಡೆ ಮಾಡುತ್ತಿದ್ದುದು, ಕೃಷ್ಣನ , ಅವಸಾನದ ನಂತರ, ಅರ್ಜುನ ಅವನ ಹೆಂಡತಿಯರನ್ನು ಕರೆದುಕೊಂಡು ಬರುತ್ತಿದ್ದಾಗ , ಅಡ್ಡಗಟ್ಟಿದ ವ್ಯಾದರು ( ಕಾಡುಕಳ್ಳರು) ಅರ್ಜುನನ್ನು ಸೊಲಿಸಿ , ಹೆಣ್ಣುಮಕ್ಕಳನ್ನು ಅಪಹರಿಸಿದ್ದು… ಹೀಗೆ ಒಂದಲ್ಲಾ ಹಲವಾರು ಕಥೆಗಳಲ್ಲಿ ಇರುವುದು ಸತ್ಯ, ಸುಳ್ಳು, ವಂಚನೆ, ಇವೆ ಆಗಿದೆ. ಧರ್ಮ ಸ್ಪಾಪನೆ ಅಂದರೆ ಸತ್ಯ ಸುಳ್ಳಿನ ನಡುವೆ ನಡೆದ ಸಂಘರ್ಷ. ಈಗ ಬೇರೆ ರೀತಿ ಇದೆಯಷ್ಟೇ.

ಅದ್ದರಿಂದ ಕಾಲ ಇದ್ದ ಹಾಗೆ ಇರುತ್ತದೆ. ಜನ ಮಾಡಿಕೊಳ್ಳುವ ಎಡವಟ್ಟುಗಳಿಗೆ ಬೈದಾಡಿ ಕೊಳ್ಳಲು, ಸಿಟ್ಟು, ಅಸಹನೆ ತೊಡಿಕೊಳ್ಳಲು ಕಾಲ ಒಂದು ಕಾರಣ ಅಷ್ಟೇ.
ನವೀನ ಹೆಚ್ ಎ ಹನುಮನಹಳ್ಳಿ ಕೆಆರ್ ನಗರ