ಬೆಂಗಳೂರು : ಬಿಜೆಪಿ ಸ್ಟಾರ್ ಪ್ರಚಾರಕ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಸಿನಿಮಾಗಳು ಹಾಗೂ ಜಾಹೀರಾತುಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂದು ಸಲ್ಲಿಸಲಾದ ಮನವಿಗಳನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ನಟ ಕಿಚ್ಚ ಸುದೀಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಇದಾದ ಬಳಿಕ ಸುದೀಪ್ ಜಾಹೀರಾತು ಹಾಗೂ ಸಿನಿಮಾಗಳನ್ನು ತೆರೆ ಮೇಲೆ ಪ್ರದರ್ಶಿಸಲು ಅವಕಾಶ ನೀಡಬಾರದು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಜೆಡಿಎಸ್ ಮನವಿ ಮಾಡಿತ್ತು.

ಈ ಮನವಿಗಳನ್ನು ಪರಿಶೀಲನೆ ಮಾಡಿದ ಕೇಂದ್ರ ಚುನಾವಣಾ ಆಯೋಗ ಸುದೀಪ್ ನಟನೆಯ ಸಿನಿಮಾ, ಜಾಹೀರಾತುಗಳು ಹಾಗೂ ರಿಯಾಲಿಟಿ ಶೋಗಳ ಪ್ರಸಾರಕ್ಕೆ ತಡೆ ನೀಡಲು ನಿರಾಕರಿಸಿದೆ.
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ ಕಾರಣ ಅವರು ನಟಿಸಿರುವ ಜಾಹೀರಾತು, ಸಿನಿಮಾಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂಬ ಮನವಿಗಳನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಸುದೀಪ್ ನಟನೆಯ ಸಿನಿಮಾ, ಜಾಹೀರಾತಿಗೆ ತಡೆ ನೀಡಲು ಆಯೋಗ ನಿರಾಕರಿಸಿದೆ.


