ಆರೋಪಿ ನಾಗರಾಜ್ (Nagaraj) ಹಾಗೂ ಲಕ್ಷ್ಮಣ್ (Lakshman) ಅವರ ಅರ್ಜಿ ವಿಚಾರಣೆ ನಡೆಯುತ್ತಿದ್ದು ಅವರ ಪರವಾಗಿ ಸಂದೇಶ್ ಚೌಟ ಅವರು ವಾದ ಮಾಡಿದ್ದಾರೆ. ಸಂದೇಶ್ ಚೌಟ್ ಅವರು ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಾದಿಸಿದ್ದು ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ಮನೆಯೂಟಕ್ಕೂ ಜೈಲಾಧಿಕಾರಿಗಳು ಅವಕಾಶ ಕೊಟ್ಟಿಲ್ಲ.
ಮನೆಯ ಊಟದ ಅರ್ಜಿಯನ್ನು ನಿರಾಕರಣೆ ಮಾಡಿದ್ದಾರೆ ಎಂದಿದ್ದಾರೆ.ಕೇವಲ ಈ ಕೇಸಲ್ಲಿ ಸಾರ್ವಜನಿಕ ಚರ್ಚೆಯಾಗಿಸಲು ಮನೆ ಊಟ ಅರ್ಜಿಯನ್ನು ನಿರಾಕರಣೆ ಮಾಡಲಾಗಿದೆ. ಒಂದೇ ದಿನ ಮೂರು ಎಫ್‌ಐಆರ್ ದಾಖಲಾಗಿದೆ. ಪೋಟೊ ತೆಗೆದವರ ವಿರುದ್ದ ಕೇಸ್ ದಾಖಲಾಗಿಲ್ಲ ಎಂದಿದ್ದಾರೆ.
ಕಾಫಿ ಮಗ್, ಸಿಗರೇಟ್ ಹಿಡಿದವರ ಮೇಲೆ ಕೇಸ್ ದಾಖಲಾಗಿದೆ. ಇದಕ್ಕೂ ನಿಮ್ಮ ಕಕ್ಷಿಧಾರರಿಗೂ ಏನ್ ಸಂಬಂಧ..? ಇದೇ ಕಾರಣದಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಅಲ್ಲದೆ ನಾಗರಾಜ್ ಕೂಡ ಜೈಲು ಅಧಿಕಾರಿಗಳು ಕೊಟ್ಟ ದೂರಿನಲ್ಲಿ ಎರಡನೇ ಆರೋಪಿ. ಇದೇ ಕಾರಣದಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದಾರೆ ಎಂದಿದ್ದಾರೆ.
ಆರೋಪಿ 11 ನ ಕಲ್ಬುರ್ಗಿ ಜೈಲಿಗೆ ಆರೋಪಿ 12 ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಆದರೆ ಕುಳ್ಳ ಸೀನ ಮಾತ್ರ ಹೈಕೋರ್ಟ್ ಗೆ ಅರ್ಜಿ ಹಾಕ್ಕೊಂಡ್ರು.ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ ಎಂದಿದ್ದಾರೆ.
ಜೈಲಿನ ಕೆಲ ಪ್ರದೇಶದಲ್ಲಿ ಸಿಗರೇಟ್ ಸೇದಲು ಅವಕಾಶ ಇದೆ. ಆದರೇ ಇದನ್ನು ಸೆನ್ಷೇಷನ್ ಮಾಡಿದ್ದಾರೆ. ಮೂರು ಎಫ್‌ಐಆರ್ ಗಳಲ್ಲಿ ಹಾಕಿರೋದು ಎಲ್ಲಾ ಜಾಮೀನು ನೀಡುವಂತ ಸೆಕ್ಷನ್ ಗಳೇ ಎಂದು ಅವರು ವಾದ ಮಾಡಿದ್ದಾರೆ.
57 ನೇ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿದ್ದು ವಕೀಲ ಸಂದೇಶ ಚೌಟ ಅವರು ನಾಗರಾಜ್ ಪರ ವಾದಿಸಿದ್ದಾರೆ ಎನ್ನಲಾಗಿದೆ. ನಾಗರಾಜು ದರ್ಶನ್ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ತನಿಖೆ ಮುಗಿದು ಚಾರ್ಜ್ ಶೀಟ್ ಆಗಿದೆ. ಈ ಪ್ರಕರಣ ಸೆನ್ಷೆಷನ್ ಪ್ರಕರಣ ಅಲ್ಲ. ಅಂದು ಮಾಧ್ಯಮಗಳು ಹೆಚ್ಚಾಗಿ ಪ್ರಸಾರ ಮಾಡಿದ್ದರಿಂದ ಸೆನ್ಷೇಷನ್ ಆಗಿದೆ. ಹಿಂದೆಂದು ನಡೆಯದಂತಹ ಘಟನೆ ಅಂತ ಮಾಧ್ಯಮಗಳು ಬಿಂಬಿಸಿವೆ ಎಂದು ಸಂದೇಶ ಚೌಟ್ ಅವರು ನಾಗರಾಜ್ ಪರ ವಾದಿಸಿದ್ದಾರೆ ಎನ್ನಲಾಗಿದೆ.