ಮೇ 10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election) ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು(congress cadidate) ಮೊದಲು ಗೆಲುವು ಎಂದು ಘೋಷಣೆ ಮಾಡಿದ ಬಳಿಕ ಮಧ್ಯರಾತ್ರಿ ಸೋಲು ಎಂದು ಘೋಷಣೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಜಯನಗರ(jayanagar) ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಸೌಮ್ಯಾರೆಡ್ಡಿ(sowmya reddy) ಈ ಬಾರಿ ಮಧ್ಯರಾತ್ರಿ ಸೋಲುಂಡು ಕಣ್ಣೀರು ಹಾಕುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬಂದಿದ್ದಾರೆ. ಮೊದಲಿಗೆ ನಾಲ್ಕು ಬಾರಿ ಗೆಲುವು ಎಂದು ಘೋಷಣೆ ಮಾಡಿ, ನಂತರ ಚುನಾವಣಾ ಅಧಿಕಾರಿಗಳು ಐದನೇ ಬಾರಿ ಸೋಲು ಘೋಷಣೆ ಮಾಡಿದ್ದರು.

160 ಮತಗಳಿಂದ ಗೆಲುವು ಕಂಡಿದ್ದ ಸೌಮ್ಯಾ ಸೋತಿದ್ದು ಹೇಗೆ..?
ಮತ ಎಣಿಕೆ ಬಳಿಕ ಸೌಮ್ಯಾ ರೆಡ್ಡಿ 160 ಮತಗಳ ಅಂತರದಲ್ಲಿ ಜಯಶೀಲರಾಗಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆ ಬಳಿಕ ಮರು ಎಣಿಕೆಗೆ ಬಿಜೆಪಿ(bjp) ನಾಯಕರು ಒತ್ತಾಯಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ(CK ramamurthy) ಮನವಿ ಮೇರೆಗೆ ಮರು ಎಣಿಕೆ ಮಾಡಲಾಯ್ತು. ಮರು ಎಣಿಕೆ ಬಳಿಕ ಸೌಮ್ಯಾರೆಡ್ಡಿ(sowmya reddy) 150 ಮತಗಳ ಅಂತರದಿಂದ ಗೆಲುವು ಎಂದು ಘೋಷಣೆ ಮಾಡಲಾಯ್ತು. ಅಂಚೆ ಮತಗಳಲ್ಲಿ ಸೀಲ್ ಅಂಡ್ ಸಿಗ್ನೇಚರ್ ಇಲ್ಲದ 10 ಮತಗಳನ್ನು ತಿರಸ್ಕಾರ ಮಾಡಲಾಯ್ತು.
3 ಬಾರಿ ಗೆಲುವು, 4 ನೇ ಬಾರಿ ಸೋಲು ಎಂದ ಅಧಿಕಾರಿಗಳು..!
ಜಯನಗರ(jaynagar) ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲಮಯ ಆಗಿತ್ತು. ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ ಸೌಮ್ಯಾರೆಡ್ಡಿ(sowmya reddy) ಮುನ್ನಡೆ ಸಾಧಿಸಿದ ಬಳಿಕ 5ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಅವರನ್ನು ವಿಜೇತ ಎಂದು ಘೋಷಣೆ ಮಾಡಲಾಯ್ತು. ಮತ ಎಣಿಕೆ ಕೇಂದ್ರದಲ್ಲೇ ಕುಳಿತಿದ್ದ ಸೌಮ್ಯಾರೆಡ್ಡಿ, ತಂದೆ ರಾಮಲಿಂಗಾರೆಡ್ಡಿಗೆ(ramalinga reddy) ಕರೆ ಮಾಡಿ ಮಾಹಿತಿ ನೀಡಿದ್ದರು. ಗಾಬರಿಯಿಂದ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದ ರಾಮಲಿಂಗಾರೆಡ್ಡಿ, ಗೊಂದಲದ ಬಗ್ಗೆ ಸ್ಪಷ್ಟನೆ ಕೇಳಿದ್ದರು.

ಜಯನಗರದ SSMRV ಕಾಲೇಜು ಬಳಿ ಗಲಾಟೆ..!!
ಕಾಂಗ್ರೆಸ್‌ನ(congress) ಸೌಮ್ಯರೆಡ್ಡಿ ಅವರನ್ನು ನಾಲ್ಕು ಬಾರಿ ಗೆಲುವು ಎಂದು ಘೋಷಣೆ ಮಾಡಿದ ಬಳಿಕ 5ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯನ್ನು(BJP candidate) ಗೆಲುವು ಎಂದು ಘೋಷಣೆ ಮಾಡಿದ್ದಕ್ಕೆ ಆಕ್ರೋಶದ ಕಟ್ಟೆ ಒಡೆದಿತ್ತು. ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ(BJP workers) ನಡುವೆ ಪರಸ್ಪರ ಘೋಷಣೆ, ವಾಕ್ಸಮರವೂ ನಡೀತು.

ಸಂಸದ ಸೂರ್ಯನ ಕಿತಾಪತಿ ಎಂದು ಆಕ್ರೋಶ..
ಬಿಜೆಪಿ ಸಂಸದ ತೇಜಸ್ವಿ ಸೂರ್ಯ(tejaswi surya) ಒತ್ತಡ ಹಾಕಿ ಮರು ಎಣಿಕೆ ಮಾಡಿಸ್ತಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿತ್ತು. ನಾಲ್ಕು ಬಾರಿ ಎಣಿಕೆಯಲ್ಲಿ ಸೌಮ್ಯಾರೆಡ್ಡಿ ಗೆಲುವು. ನಾಲ್ಕನೇ ಬಾರಿ ಎಣಿಕೆ ನಂತರವೂ ಮರು ಎಣಿಕೆಗೆ ಒತ್ತಾಯ ಮಾಡಿ, ನಾಲ್ಕನೇ ಬಾರಿ ಎಣಿಕೆಯಲ್ಲಿ ಬಿಜೆಪಿ ಗೆಲುವು ಎಂದು ಘೋಷಣೆ ಮಾಡಲಾಗಿದೆ ಎಂದು ಕಾರ್ಯಕ್ರತರು ಪ್ರತಿಭಟಿಸಿದ್ರು. ಈ ವೇಳೆ ಸ್ತಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಯನಗರ ಮತ ಎಣಿಕೆ ಕೇಂದ್ರದ ಮುಂದೆ ಹೆಚ್ಚುವರಿ ಪೊಲೀಸ್(police officers) ಸಿಬ್ಬಂದಿ ನಿಯೋಜನೆ ಮಾಡಿದ್ರು.

ಗೆಲುವಿನ ಗತ್ತಿನಲ್ಲೇ ಡಿ.ಕೆ ಶಿವಕುಮಾರ್ ಎಂಟ್ರಿ..
ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದ್ದ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್, ಜಯನಗರ ಮತ ಏಣಿಕೆ ಗೊಂದಲದ ಬಗ್ಗೆ ಮಾಹಿತಿ ಸಿಗ್ತಿದ್ದ ಹಾಗೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಡಿ.ಕೆ ಶಿವಕುಮಾರ್(DK shivakumar) ಸ್ಥಳಕ್ಕೆ ಭೇಟಿ ನೀಡ್ತಿರೋ ಮಾಹಿತಿ ಸಿಗ್ತಿತ್ತಿದ್ದಂತೆ ಮತ ಎಣಿಕಾ ಕೇಂದ್ರದಿಂದ ಬಿಜೆಪಿ ನಾಯಕ ಮಾಜಿ ಸಚಿವ ಆರ್ ಆಶೋಕ್,(R ashok) ಬಾ ತೇಜಸ್ವಿ ಅಂತಾ, ತೇಜಸ್ವಿ ಸೂರ್ಯನನ್ನು ಕರೆದುಕೊಂಡು ಜಾಗ ಖಾಲಿ ಮಾಡಿದ್ರು. ರವಿ ಸುಬ್ರಹ್ಮಣ್ಯ(ravi subrahmanya) ಕೂಡ ಸ್ಥಳದಿಂದ ಹೊರಟ್ರು..

ಅಂತಿಮವಾಗಿ ಬಿಜೆಪಿ ಗೆಲುವು ಘೋಷಣೆ, ಸೌಮ್ಯಾ ಕಣ್ಣೀರು..
ಐದಾರು ಬಾರಿ ಅಳೆದು ತೂಗಿ ನೋಡಿದ ಬಳಿಕ ಸಿ.ಕೆ ರಾಮಮೂರ್ತಿಯನ್ನು(CK ramamurthy) ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯ್ತು. ಇದಕ್ಕೂ ಮೊದಲು ಮತ ಎಣಿಕಾ ಕೇಂದ್ರಕ್ಕೆ ಬೆಂಗಳೂರು(bangalore) ಚುನಾವಣಾಧಿಕಾರಿ ತುಷಾರ್ ಗಿರಿನಾಥ್(thushar girinath) ಆಗಮಿಸಿದ್ದರು. ಸೌಮ್ಯಾ ರೆಡ್ಡಿಗೆ ಮರು ಮತ ಎಣಿಕೆಯಲ್ಲಿ ಸೋಲು ಎಂದು ಘೋಷಣೆ ಮಾಡುತ್ತಿದ್ದಂತೆ ಕಣ್ಣೀರು ಹಾಕುತ್ತ ಮತ ಎಣಿಕಾ ಕೇಂದ್ರದಿಂದ ಹೊರ ಬಂದ ಸೌಮ್ಯಾ ರೆಡ್ಡಿ, ಇದು ಮೋಸ ಮೋಸ ಅಂತ ಘೋಷಣೆ ಕೂಗಿದ್ರು. ಕಾಂಗ್ರೆಸ್ ಕಾರ್ಯಕರ್ತರು,(congress workers) ರಸ್ತೆ ತಡೆ ಮಾಡಿ ಪ್ರತಿಭಟನೆ ಕೂಡ ನಡೆಸಿದರು. ಆದರೂ CEO ಮನೋಜ್ ಕುಮಾರ್ ಮೀನಾ ಆಧಿಕೃತ ಘೋಷಣೆ ಮಾಡಿದರು. ಬಳಿಕ ಸೌಮ್ಯಾ ರೆಡ್ಡಿ(sowmya reddy) ಕಣ್ಣಿರು ಹಾಕಿಕೊಂಡು ಹೊರ ನಡೆದರು.
